ಬಂಟ್ವಾಳ : ಮುಂದಿನ ಚುನಾವಣೆಯಲ್ಲಿ 150 ಸ್ಥಾನವನ್ನು ಬಿಜೆಪಿ ಪಡೆಯುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 3 ಬೂತ್ ಹಾಗೂ ನೆಟ್ಲಮುಡ್ನೂರು ಗ್ರಾ.ಪಂ.ವ್ಯಾಪ್ತಿಯ 2 ಬೂತ್ ಹಾಗೂ ವೀರಕಂಭ 4 ಬೂತ್ ಗಳ ಅಧ್ಯಕ್ಷ ರುಗಳ ಮನೆಗೆ ಶಾಸಕ ರಾಜೇಶ್ ನಾಯ್ಕ್ ಹಾಗೂ ಬಂಟ್ವಾಳ ಬಿಜೆಪಿ ಮಂಡಲ ಬೇಟಿ ನೀಡಿ ನಾಮಫಲಕ ಅನಾವರಣ 6 ನೇ ದಿನದ ಕಾರ್ಯಕ್ರಮ ದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಇಡೀ ರಾಜ್ಯದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಒತ್ತು ನೀಡಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ, ಯಡಿಯೂರಪ್ಪ ಮಾರ್ಗದರ್ಶನ ದಲ್ಲಿ ಬೊಮ್ಮಾಯಿ ನೇತ್ರತ್ವದ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಬಂಟ್ವಾಳ ದಲ್ಲಿ ಶಾಸಕರು ಮಾದರಿ ಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಅವರ ಇಡೀ ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದರು.
ಜನಪ್ರತಿನಿಧಿ ಹಾಗೂ ಕಾರ್ಯಕರ್ತರ ನಡುವೆ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೂತ್ ಅಧ್ಯಕ್ಷ ರ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕರ್ತರ ಅಪೇಕ್ಷಗಳಿಗೆ ಹೆಚ್ಚಿ ನ ಒತ್ತು ನೀಡುವ ಉದ್ದೇಶ ವನ್ನು ಹೊಂದಿದೆ. ಕಾರ್ಯಕರ್ತರ ಆಧಾರಿತ ಪಾರ್ಟಿಯಾಗಿದ್ಧು, ಕಾರ್ಯಕರ್ತರ ಪರಿಶ್ರಮದಿಂದ ಪಾರ್ಟಿ ಗೆದ್ದಿದೆ.
ರಾಜ್ಯದ ಸೂಚನೆಯನ್ನು ಪಾಲನೆ ಮಾಡಿ ಪ್ರಥಮವಾಗಿ ಆರಂಭಮಾಡಿ ಯಶಸ್ವಿ ಕಾರ್ಯಕ್ರಮ ಮಾಡುತ್ತಿರುವ ಬಂಟ್ವಾಳ ಶಾಸಕ ಹಾಗೂ ಮಂಡಲದ ಅಧ್ಯಕ್ಷ ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಬಿಜೆಪಿ ಪಕ್ಷದ ದಲ್ಲಿ ಕಾರ್ಯಕರತರ ಪರಿಶ್ರಮದ ಆಧಾರದ ಮೇಲೆ ನಾಯಕನಾದರೆ ಉಳಿದ ರಾಜಕೀಯ ಪಕ್ಷಗಳಲ್ಲಿ ಜಾತಿ, ಹಣದ, ಒತ್ತಡ, ಪ್ರಭಾವದ ಮೇಲೆ ನಾಯಕನಾಗುತ್ತಾನೆ ಹಾಗಾಗಿ ಬಿಜೆಪಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂದರು. ರಾಷ್ಟ್ರೀಯ ವಿಚಾರದ ಆದಾರದಲ್ಲಿ ಆಡಳಿತ ಮಾಡಲು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು. ರಾಷ್ಟ್ರದ ಶ್ರೇಷ್ಟ ವಾದ ಪರಂಪರೆಯನ್ನು , ಸಂಸ್ಕೃತಿ , ನೆಲ, ಜಲ, ಭಾಷೆಯನ್ನು ಉಳಿಸಲು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಿದೆ.
.
ಸಂಕಲ್ಪ, ಆಚಾರ, ವಿಚಾರ, ಸಂಬಂಧ , ಸಂಪರ್ಕ ಗಳ ತತ್ವ, ಸಿದ್ದಾಂತದ ಆಧಾರದಲ್ಲಿ ಪಕ್ಷದ ಸಂಘಟನೆಗೆ ಒತ್ತುನೀಡಿ ಅ ಮೂಲಕ ಆಡಳಿತ ಮಾಡಬೇಕು ಎಂದು ಅವರು ಹೇಳಿದರು
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ , ಕಾರ್ಯಕರ್ತರ ಅಭೂತಪೂರ್ವ ಸ್ಫಂದನೆ ಪ್ರೀತಿ ವಿಶ್ವಾಸವೇ ಪಕ್ಷ ಸಂಘಟನೆ ಹಾಗೂ ಪಕ್ಷಕ್ಕೆ ಸ್ಪೂರ್ತಿ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಗೂ ಭಾರತೀಯ ಜನತಾ ಪಾರ್ಟಿಯ ಕಲ್ಪನೆ ಗಳು , ಯೋಚನೆಗಳು ನಮ್ಮ ಜೀವಿತಾವಧಿಯಲ್ಲಿ ಸಾಕರಗೊಂಡಿದೆ ಎಂಬುದೇ ನಮಗೆ ಹೆಮ್ಮೆಯ ವಿಷಯ ಎಂದರು.
ವ್ಯಕ್ತಿಗೆ ಪ್ರಾಮುಖ್ಯತೆ ನೀಡಿದೆ, ಪಕ್ಷ ಜವಬ್ದಾರಿಯ ಜೊತೆಗೆ ಸಂಘಟನೆಯನ್ನು ಮಾಡಿದ ಹೆಗ್ಗಳಿಕೆ ನಳಿನ್ ಅವರದು ಎಂದು ಅವರು ಹೇಳಿದರು. ಅನಂತಾಡಿ ಗ್ರಾ.ಪಂ.ವ್ಯಾಪ್ತಿಯ ಬೂತ್ ಸಂಖ್ಯೆ 208 ನಾಗೇಶ್ ಭಂಡಾರಿ , ಬೂತ್ ಸಂಖ್ಯೆ 209 ರ ಅಧ್ಯಕ್ಷ ಕುಂಜ್ಞಪ್ಪ ಗೌಡ, ಬೂತ್ ಸಂಖ್ಯೆ 210 ರ ಅಧ್ಯಕ್ಷ ತಿಮ್ಮಪ್ಪ ಗೌಡ ಅವರ ಮನೆಗೆ ನಾಮಫಲಕ ಅನಾವರಣ ಮಾಡಿದರು.
ನೆಟ್ಲ ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ,ಅನಂತಾಡಿ ಗ್ರಾ.ಪಂ.ಅಧ್ಯಕ್ಷೆ ಗಣೇಶ್ ಪೂಜಾರಿ ಅನಂತಾಡಿ,ಉಪಾಧ್ಯಕ್ಷ ಕುಸುಮಾಧರ ಗೌಡ, ಸದಸ್ಯರಾದ ಸುಜಾತ, ಮಮಿತಾಕೇಶವ, ರಶ್ಮಿರಾಖೇಶ್ , ಸಂದ್ಯಾನಾಗೇಶ್, ಬಿಜೆಪಿ ಮಂಡಲ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ಬೋಳಿಯಾರ್, ಸುಲೋಚನ ಜಿ.ಕೆ.ಭಟ್, ರಮನಾಥ ರಾಯಿ, ಸನತ್ ಕುಮಾರ್ ರೈ, ಪುಷ್ಪ ರಾಜ್ ಚೌಟ, ಗೀತಾಚಂದ್ರಶೇಖರ್, ದಿನೇಶ್ ಅಮ್ಟೂರು, ಮಾದಕ ಮಾವೆ, ಪ್ರಕಾಶ್ ಅಂಚನ್, ಗಣೇಶ್ ರೈ ಮಾಣಿ, ಆನಂದ ಶಂಭೂರು , ರಂಜಿತ್ ಮೈರ, ಮೋಹನ್ ಪಿ.ಎಸ್. ತನಿಯಪ್ಪ ಗೌಡ ನೇರಳಕಟ್ಟೆ, ಸಂದೇಶ ಶೆಟ್ಟಿ, ಪುರುಷೋತ್ತಮ ಬಾರಕಿನೆಡೆ ವಾಮದಪದವು,ಸೀತಾರಾಮ ಪೂಜಾರಿ,ನಾರಾಯಣ ಶೆಟ್ಟಿ ಮಾಣಿ, ಯಶೋಧರ ಕರ್ಬೆಟ್ಟು,ಸೀಮಾಮಾದವ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್ ಅರಳ, ಕಾರ್ತಿಕ್ ಬಲ್ಲಾಳ್, ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದ ರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿ, ಮಹಾಶಕ್ತಿ ಕೇಂದ್ರ ದ ಅಧ್ಯಕ್ಷ ಕುಮಾರ್ ರೈ ಧನ್ಯವಾದ ನೀಡಿದರು.
ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.
”ಸಂಸದ, ಶಾಸಕ ಮತ್ತು ಬಿಜೆಪಿ ಮಂಡಲದ ತಂಡವನ್ನು ಸ್ವಾಗತಿಸುವ ವೇಳೆ ಕಳಸ ಕನ್ನಡಿ , ಬ್ಯಾಂಡ್ ವಾದ್ಯ ಆಕರ್ಷಣೆ ನೀಡಿತ್ತು. ಸಂಸದ ಶಾಸಕರಿಗೆ ಆರತಿ ಎತ್ತಿ ಹಣೆಗೆ ಕುಂಕುಮ ಹಚ್ಚಿ ಮನೆಯೊಳಗೆ ಬರಮಾಡಿಕೊಂಡರು.ಕಾರ್ಯಕ್ರಮದಲ್ಲಿ ಸಂಸದ ಶಾಸಕರನ್ನು ಶಾಲು ಹೊದಿಸಿ ಪುಸ್ತಕ ನೀಡಿ ಗೌರವಿಸಿದರು.”
Click this button or press Ctrl+G to toggle between Kannada and English