ಮಂಗಳೂರು : ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದ ಖ್ಯಾತ ನಿರೂಪಕಿ ಅನುಶ್ರೀ ಹೆಸರು ಇದೀಗ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಕಿರುವ ಚಾರ್ಜ್ ಶೀಟ್‌ನಲ್ಲಿ ಅನುಶ್ರೀ ಹೆಸರು ಇದೆ. ‘’ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು’’ ಎಂದು ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿರುವುದು ಚಾರ್ಜ್ ಶೀಟ್‌ನಲ್ಲಿದೆ.
ನಾನು ಸುಮಾರು 2007-08ರ ಸಮಯದಲ್ಲಿ ಬೆಂಗಳೂರಿನ ಒಂದು ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆಂಕರ್ ಆಗಿರುವ ಅನುಶ್ರೀ ಅವರಿಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನನ್ನ ಸ್ನೇಹಿತ ತರುಣ್ ಕೊರಿಯೋಗ್ರಫಿ ಮಾಡುತ್ತಿದ್ದ. ತರುಣ್ ಮೂಲಕವೇ ನನಗೆ ಅನುಶ್ರೀ ಪರಿಚಯವಾಯಿತು. ಡ್ಯಾನ್ಸ್ ರಿಯಾಲಿಟಿ ಶೋ ಫೈನಲ್‌ನಲ್ಲಿ ನನಗೂ ಸಹ ಕೊರಿಯೋಗ್ರಫಿ ಮಾಡುವಂತೆ ತಿಳಿಸಿದ್ದರಿಂದ, ನಾನು ಮತ್ತು ತರುಣ್, ಇಬ್ಬರೂ ಕೂಡಿ ಅನುಶ್ರೀ ಅವರಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದೇವೆ. ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾನೆ.
ತರುಣ್ ಅವರ ಬಾಡಿಗೆ ಮನೆಯಲ್ಲಿ ಅನುಶ್ರೀ ತಡರಾತ್ರಿ ತನಕ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. ಕೆಲವು ದಿನ ನಾನು ಕೂಡ ತರುಣ್ ಜೊತೆ ಹೋಗುತ್ತಿದ್ದೆ. ಆಗ ನಾವು ಮೂರು ಜನ ತರುಣ್ ಮನೆಯಲ್ಲೇ ಅಡುಗೆ ಮಾಡಿ, ಊಟ ಮಾಡುವ ಸಮಯದಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಿರುತ್ತೇವೆ, ಎಂದು ಪೊಲೀಸರಲ್ಲಿ ಹೇಳಿದ್ದಾನೆ.
ಅನುಶ್ರೀ ವಿಜೇತರಾಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಸೇವಿಸಿ, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ವಸ್ತು ಸೇವನೆ ಖರೀದಿಯಲ್ಲಿ ಅನುಶ್ರೀ ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀ ಅವರಿಗೆ ಕೊರಿಯೋಗ್ರಫಿ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತುಗಳನ್ನು ಸೇವಿಸಿರುತ್ತೇವೆ. ಅನುಶ್ರೀ ಅವರು ಪ್ರಾಕ್ಟೀಸ್ ಮಾಡಲು ನಮ್ಮ ರೂಮ್‌ಗೆ ಬರುವಾಗ ಅವರು ಮಾದಕ ವಸ್ತುಗಳನ್ನು ಖರೀದಿಸಿ ತಂದು ನಮಗೆ ನೀಡಿ, ನಮ್ಮ ಜೊತೆ ಸೇವನೆಯನ್ನೂ ಕೂಡ ಮಾಡಿರುತ್ತಾರೆ. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀ ಅವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್‌ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಎಂದು ಹೇಳಿಕೆ ನೀಡಿದ್ದಾನೆ.
ಕಳೆದ ಎರಡು ವರ್ಷಗಳ ಹಿಂದೆ ತರುಣ್ ಮಂಗಳೂರಿನಲ್ಲಿ ಡ್ಯಾನ್ಸ್ ಕ್ಲಾಸ್ ಓಪನ್ ಮಾಡಿದ ಸಮಯದಲ್ಲಿ ಟಿವಿ ಆಂಕರ್ ಅನುಶ್ರೀ ಉದ್ಘಾಟನೆಗೆ ಮಂಗಳೂರಿಗೆ ಬಂದಿದ್ದರು. ನಾನು ಕೂಡ ಆ ಸಮಯದಲ್ಲಿ ಹೋಗಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ಪಾರ್ಟಿ ಫಂಕ್ಷನ್ ನಡೆದಿರುವುದಿಲ್ಲ’’ ಎಂದು ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿ ಪೊಲೀಸರ ಮುಂದೆ ಹೇಳಿಕೆ ನೀಡಿ, ಸಹಿ ಹಾಕಿದ್ದಾನೆ.
ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ನನ್ನ ಜೀವನ ಬದಲಾಗಿಬಿಟ್ಟಿದೆ. ಮುಂಚೆ ಎಲ್ಲಾ ಸದಾ ಶೋಗಳಿರುತ್ತಿತ್ತು. ಸಾಕಷ್ಟು ಕೆಲಸ ಸಿಗುತ್ತಿತ್ತು. ಆದರೆ ಈಗ ಎಲ್ಲೂ ಕೆಲಸ ಸಿಗುತ್ತಿಲ್ಲ. ಈಗ ಕೆಲವು ಗೆಳೆಯರು ಸೇರಿಕೊಂಡು ಡ್ಯಾನ್ಸ್ ತರಗತಿ ಆರಂಭ ಮಾಡಿಕೊಂಡಿದ್ದೇವೆ. ದೊಡ್ಡ ಕೊರಿಯೊಗ್ರಾಫರ್ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಅದನ್ನೇ ಮನಸಿನಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದೇನೆ, ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾನೆ.
Click this button or press Ctrl+G to toggle between Kannada and English