ನಾಳೆ ಹಬ್ಬಕ್ಕೆ ತಯಾರಾಗಿ ನಿಂತಿದೆ ಇಕೋ ಪ್ರೆಂಡ್ಲಿ ಬಣ್ಣದ ಗಣಪತಿಯ ಮಣ್ಣಿನ ವಿಗ್ರಹಗಳು

2:21 PM, Thursday, September 9th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Ganapati ಮಂಗಳೂರು : ಗಣೇಶ ವಿಗ್ರಹ ತಯಾರಿಯ ಕೆಲಸ ಮುಗಿದು ಹಬ್ಬ ಆಚರಿಸಲು ಗಣಪತಿಯ ಮಣ್ಣಿನ ವಿಗ್ರಹಗಳು ತಯಾರಾಗಿ ನಿಂತಿವೆ. ಮಂಗಳೂರಿನ ಮಣ್ಣಗುಡ್ಡದಲ್ಲಿರುವ ದಿವಂಗತ ಮೋಹನ್ ರಾಯರ ಕುಟುಂಬ ಕಳೆದ 92  ವರ್ಷಗಳಿಂದ ಮಣ್ಣಿನ ಗಣಪತಿಯ ವಿಗ್ರಹಗಳನ್ನು ಸಿದ್ದಗೊಳಿಸುತ್ತಿದೆ. 1929  ರಲ್ಲಿ ಮೋಹನ್ ರಾಯರು ಸುಮಾರು 70 ಗಣಪತಿ ವಿಗ್ರಹಗಳ ತಯಾರಿಯಿಂದ ಆರಂಭಗೊಂಡದ್ದು ಈಗ  230 ವಿಗ್ರಹಗಳ ವರೆಗೆ ತಲುಪಿದೆ. ಪ್ರಸಕ್ತ ಮೋಹನ್ ರಾಯರ ಮಕ್ಕಳಾದ ಪ್ರಭಾಕರ ರಾವ್, ಸುಧಾಕರ ರಾವ್, ರಾಮಚಂದ್ರ ರಾವ್ ವಿಗ್ರಹ ತಯಾರಿಯ ಕೆಲಸವನ್ನು ಮಾಡುತ್ತಿದ್ದಾರೆ.

ವಿಗ್ರಹಕ್ಕೆ ಕಚ್ಚಾ ವಸ್ತುಗಳನ್ನು ‘ಚಿತ್ರ ನಕ್ಷತ್ರ’ದಂದು ಸಂಗ್ರಹಿಸುತ್ತೇವೆ. ಅಮಾವಾಸ್ಯೆಯಂದು ನಾವು ಮರ‍್ತಿಗೆ ಬಣ್ಣ ಹಚ್ಚುತ್ತೇವೆ. ನಮ್ಮಿಂದ ವಿಗ್ರಹವನ್ನು ಮಾಡಬಯಸುವವರು ‘ನಾಗರಪಂಚಮಿ’ಯಂದು ಗಣಪತಿಯನ್ನು ಕುಳ್ಳಿರಿಸುವ ಪೀಠ ಕೊಟ್ಟು ಆದೇಶಿಸುತ್ತಾರೆ. ನಾವು ಗಣಪತಿಯನ್ನು ಸಾಧಾರಣ 9 ಇಂಚು ನಿಂದ ಎಂಟು ಅಡಿಗಳಷ್ಟು ಗಾತ್ರದಲ್ಲಿ ಮಾಡುತ್ತೇವೆ ಎಂದು ಗಣೇಶ ವಿಗ್ರಹ ಸಿದ್ಧಗೊಳಿಸುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮೋಹನ್ ರಾವ್ ಅವರ ಮಗ ರಾಮಚಂದ್ರ ರಾವ್ ಹೇಳುತ್ತಾರೆ.

ಇಲ್ಲಿ 16  ಸಂಘ ಸಂಸ್ಥೆಗಳಿಗೆ 214  ಮನೆಗಳಿಗೆ ಗಣಪತಿಯ ವಿಗ್ರಹಗಲು ಸಿದ್ಧಗೊಳ್ಳುತ್ತವೆ. ಸಂಘ ನಿಕೇತನ, ಮಿತ್ರಮಂಡಳಿ ಬಿಜೈ, ದೇವಿನಗರ ಪದವಿನಂಗಡಿ, ಪ್ರೆಂಡ್ಸ್ ಕ್ಲಬ್ ಕೊಡಿಯಾಲ್ ಬೈಲ್, ಹಿಂದೂ ಸೇವಾ ಸಮಿತಿ ಕುಲಶೇಖರ, ದೋಸ್ತ್ ಕ್ರಿಕೆಟರ್ಸ್ ಬೊಕ್ಕ ಪಟ್ಣ, ಮಂಗಳೂರು ಪೊಲೀಸ್ ಲೈನ್, ಹಾಪ್ ಕಾಮ್ಸ್ ಕರಂಗಲಪ್ಪಾಡಿ, ಸೇವಾಂಜಲಿ ಫರಂಗಿಪೇಟೆ, ಹೌಸಿಂಗ್ ಬರ‍್ಡ್, ಎಪಿಎಂಸಿ, ಫಿಷರೀಷ್ ಕಾಲೇಜು ಮಂಗಳೂರು ಮೊದಲಾದ ಸಂಸ್ಥೆಗಳಿಗೆ ಇಲ್ಲೇ ವಿಗ್ರಹಗಳು ಸಿದ್ದ ಗೊಳ್ಳುತ್ತವೆ.

Ganapati ಇಲ್ಲಿ ತಯಾರಿಸುತ್ತಿರುವ ವಿಗ್ರಹಗಳು ಪರಿಸರ ಸ್ನೇಹಿಯಾಗಿರುತ್ತವೆ. ಅವರು ಸೀಸ ಮತ್ತು ಇತರ ರಾಸಾಯನಿಕ ಅಂಶಗಳನ್ನು ಹೊಂದಿರದ ಬಣ್ಣವನ್ನು ಬಳಸುತ್ತಾರೆ.

“ನಾವು ಇಲ್ಲಿ ಹೆಚ್ಚಿನ ವಿಗ್ರಹಗಳನ್ನು ಮಂಗಳೂರಿನಲ್ಲಿ ಮಾತ್ರ ವಿತರಿಸುತ್ತೇವೆ, ಒಂದು ಅಥವಾ ಎರಡು ವಿಗ್ರಹಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುವುದು” ಎಂದು ರಾಮಚಂದ್ರ ರಾವ್ ಹೇಳುತ್ತಾರೆ.

ಗಣಪತಿ ವಿಗ್ರಹ ಕ್ಕೆ ಇನ್ನೊಂದು ಸ್ಥಳವೆಂದರೆ ಕಾರ್ ಸ್ಟ್ರೀಟ್‌ನ  ಆರ್ಟ್ ವರ್ಕ್ ಶಾಪ್.  ಇದರ ಮಾಲೀಕ ವಿನಾಯಕ್ ಶೇಟ್ ವಿಗ್ರಹ ತಯಾರಿಕೆಗೆ ಹೆಸರುವಾಸಿಯಾಗಿದ್ದಾರೆ. ಕಳೆದ  27 ವರ್ಷಗಳಿಂದ ನೈರ‍್ಗಿಕ ಬಣ್ಣವನ್ನು ಬಳಸಿ ಮತ್ತು ಕುಂದಾಪುರ ಟೈಲ್ಸ್ ಕಾರ್ಖಾನೆ  ಯಿಂದ ತಂದ ಮಣ್ಣನ್ನು ವಿಗ್ರಹಗಳಿಗೆ ಬಳಸುತ್ತಾರೆ. ಕಳೆದ ಐದು ತಿಂಗಳುಗಳಿಂದ ಅವರು ತಮ್ಮ ತಂಡದೊಂದಿಗೆ ವಿಗ್ರಹಗಳನ್ನು ತಯಾರಿಸುತ್ತಾರೆ. ಸುಮಾರು 330 ಇಕೋ ಪ್ರೆಂಡ್ಲಿ ಗಣಪತಿ ವಿಗ್ರಹಗಳನ್ನು ತಯಾರಿಸಿ ಉರ್ವ, ಅಸೈಗೋಳಿ, ವಾಮಂಜೂರು ಮೊದಲಾದೆಡೆ ಕಳುಹಿಸುತ್ತಾರೆ.

Ganapati (11)

Ganapati

Ganapati

Ganapati

Ganapati (18)

Ganapati (15)

Ganapati

Ganapati

Ganapati

Ganapati Ganapati

Ganapati

Ganapati

Ganapati

Ganapati

Ganapati

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English