ಮಂಗಳೂರು : ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ನ ಗ್ರಾಮ ಕರಣಿಕರನ್ನು ಲೋಕಾಯುಕ್ತ ಪೊಲೀಸರು ಸಾಕ್ಷಿ ಸಮೇತ ಬಂದಿಸಿರುವ ಘಟನೆ ಬುಧವಾರದಂದು ನಡೆದಿದೆ. ಬಳ್ಳಾರಿಯ ಮೂಲದ ಜೆ.ನಿಂಗೇಶ್ ಎಂಬವರೇ ಬಂದನಕ್ಕೊಳಗಾದ ಗ್ರಾಮ ಕರಣಿಕರಾಗಿದ್ದಾರೆ. ಪಾವೂರು ಗ್ರಾಮದ ಕಿಲ್ಲೂರಿನ ರಿತೇಶ್ ರೈ ಎಂಬುವವರು ಮರಣ ಪ್ರಮಾಣ ಪತ್ರದ ಅಗತ್ಯವಿದ್ದುದರಿಂದ ಪಾವೂರು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಗ್ರಾಮಕರಣಿಕರು ರಿತೇಶ್ ರವರ ಬಳಿ ಐದು ಸಾವಿರ ರೂಪಾಯಿಯ ಲಂಚದ ಬೇಡಿಕೆಯನ್ನಿಟ್ಟಿದ್ದು ನಂತರ ಮೂರು ಸಾವಿರ ರೂಪಾಯಿಗೆ ಕೆಲಸ ಮಾಡಿಕೊಡಲು ಒಪ್ಪಿದ್ದರು ಎನ್ನಲಾಗಿದೆ.
ರಿತೇಶ್ ಈ ಬಗ್ಗೆ ಪೋಲೀಸರ ಬಳಿ ದೂರು ಸಲ್ಲಿಸಿದಾಗ ಲೊಕಾಯುಕ್ತ ಪೊಲೀಸರು ರಿತೇಶ್ ರವರಲ್ಲಿ ರಾಸಾಯನಿಕ ಲೇಪಿಸಿದ ನೋಟುಗಳನ್ನು ಕೊಟ್ಟು ಅದನ್ನು ನಿಂಗೇಶ್ ಗೆ ನೀಡಲು ಸೂಚನೆ ನೀಡಿದ್ದರು ಅದರಂತೆ ನಿಂಗೇಶ್ ಅವರು ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತದ ಅಧಿಕಾರಿಗಳಾದ ಡಿವೈಎಸ್ ಪಿ ವಿಠಲದಾಸ ಪೈ, ಎಸ್ ಪಿ ಮೋಹನ್ ದಾಸ್, ನಿರೀಕ್ಷಕರಾದ ಉಮೇಶ್ ಶೇಠ್, ದಿಲೀಪ್ ಕುಮಾರ್ ಹಾಗೂ ಇತರೆ ಸಿಬ್ಬಂಧಿಯವರು ಭಾಗವಹಿಸಿದ್ದರು.
Click this button or press Ctrl+G to toggle between Kannada and English