ಬಂಟ್ವಾಳ : ಅಧಿಕಾರ ಪಡೆಯಲು ಮಾತ್ರ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ, ಭಾರತೀಯ ಜೀವನ ಮೌಲ್ಯವನ್ನು , ಸಾರ್ವಭೌಮತ್ವ ವನ್ನು , ರಾಷ್ಟ್ರೀಯ ವಿಚಾರಗಳನ್ನು ಉಳಿಸುವ ಬೆಳೆಸುವ ಮೂಲಕ ಬಲಿಷ್ಟ ಭಾರತದ ನಿರ್ಮಾಣ ಕಾರ್ಯ ವೇ ಬಿಜೆಪಿ ಪಕ್ಷದ ತತ್ವವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ನೆಟ್ಲಮುಡ್ನೂರು ಗ್ರಾ.ಪಂ.ವ್ಯಾಪ್ತಿಯ 2 ಬೂತ್ ಗಳ ಅಧ್ಯಕ್ಷ ರುಗಳ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದ 6 ನೇ ದಿನದ ಕಾರ್ಯಕ್ರಮ ದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಕಾರ್ಯಕರ್ತರ ಸಂಘಟನೆಗೆ ಪೂರಕವಾದ ರೀತಿಯಲ್ಲಿ ಕಾರ್ಯಕ್ರಮ ವನ್ನು ನಾಯಕರು ಹಮ್ಮಿಕೊಂಡಿದ್ದು , ನಿಮ್ಮ ಜೊತೆ ನಿರಂತರವಾಗಿ ನಾವು ಇದ್ದೇವೆ ಧೈರ್ಯ ತುಂಬುವ ಮಾತುಗಳನ್ನಾಡಿದರು.
ನೆಟ್ಲಮುಡ್ನೂರು ಗ್ರಾಮದ ಬೂತ್ ಸಂಖ್ಯೆ 212 ರ ಅಧ್ಯಕ್ಷ ಅಶೋಕ್ ರೈ, ಬೂತ್ ಸಂಖ್ಯೆ 213 ರ ಅಧ್ಯಕ್ಷ ನಾರಾಯಣ ಗೌಡ ಏಮಾಜೆ ಇವರ ಮನೆಯಲ್ಲಿ ನಾಮಫಲಕ ಅನಾವರಣ ಮಾಡಿದರು.
ನೆಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಕೊಪ್ಪರಿಗೆ ಸದಸ್ಯ ರಾದ ಜಯಂತಿ ಪೂಜಾರಿ, ಧನಂಜಯ ಗೌಡ, ಆಶೋಕ್ ರೈ, ಶಾಲಿನಿಹರೀಶ್ ನಾಯ್ಕ್, ಅನಂತಾಡಿ ಗ್ರಾ.ಪಂ.ಅಧ್ಯಕ್ಷೆ ಗಣೇಶ್ ಪೂಜಾರಿ ಬಿಜೆಪಿ ಮಂಡಲ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಸನತ್ ಕುಮಾರ್ ರೈ, ಪುಷ್ಪ ರಾಜ್ ಚೌಟ, ಗೀತಾಚಂದ್ರಶೇಖರ್, ಮಾದಕ ಮಾವೆ, ಪ್ರಕಾಶ್ ಅಂಚನ್, ಗಣೇಶ್ ರೈ ಮಾಣಿ, ಮೋಹನ್ ಪಿ.ಎಸ್. ತನಿಯಪ್ಪ ಗೌಡ ನೇರಳಕಟ್ಟೆ, ಪುರುಷೋತ್ತಮ ಬಾರಕಿನೆಡೆ ವಾಮದಪದವು, ಸೀತಾರಾಮ ಪೂಜಾರಿ,ಅರವಿಂದ ರೈ,ನಾರಾಯಣ ಶೆಟ್ಟಿ ಮಾಣಿ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಮತ್ತು ಬಿಜೆಪಿ ಮಂಡಲದ ತಂಡವನ್ನು ಸ್ವಾಗತಿಸುವ ವೇಳೆ ಕಳಸ ಕನ್ನಡಿ , ಬ್ಯಾಂಡ್ ವಾದ್ಯ ವಿಶೇಷ ಆಕರ್ಷಣೆ ನೀಡಿತ್ತು. ಶಾಸಕರಿಗೆ ಆರತಿ ಎತ್ತಿ ಹಣೆಗೆ ಕುಂಕುಮ ಹಚ್ಚಿ ಮನೆಯೊಳಗೆ ಬರಮಾಡಿಕೊಂಡರು
Click this button or press Ctrl+G to toggle between Kannada and English