ಬೆಂಗಳೂರು : ಗಣೇಶ ಚತುರ್ಥಿಯ ಪ್ರಯುಕ್ತ ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಮುಸುಕಿನ ಜೋಳ, ಸೊಪ್ಪುಗಳು ಹಾಗೂ ಹೂವುಗಳನ್ನು ಬಳಸಿಕೊಂಡು ವಿಶೇಷ ಆಲಂಕಾರವನ್ನು ಮಾಡಲಾಗಿದೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್‌ನ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದ್ದಾರೆ.
ಪ್ರತಿ ಬಾರಿಯೂ ವಿಶೇಷ ಆಲಂಕಾರ ಹಾಗೂ ವಿಶೇಷ ಸಾಮಗ್ರಿಗಳನ್ನು ಬಳಸಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ದೇಶದ ಗಮನವನ್ನ ಈ ದೇವಸ್ಥಾನ ಸೆಳೆಯುತ್ತಿತ್ತು. ಕರೋನಾ ಸಾಂಕ್ರಾಮಿಕ ಕಾರಣ ಕಳೆದ ವರ್ಷವೂ ಹೆಚ್ಚಿನ ಆಲಂಕಾರವಿಲ್ಲದೆ ಹಬ್ಬವನ್ನು ಆಚರಿಸಲಾಗಿತ್ತು. ಈ ಬಾರಿ ಸ್ವಲ್ಪ ಮಟ್ಟಿಗೆ ಕರೋನಾ ಮಹಾಮಾರಿ ಕಡಿಮೆ ಆಗಿರುವ ನಿಟ್ಟಿನಲ್ಲಿ, ಹಾಗೂ ಲಸಿಕಾ ಕಾರ್ಯವೂ ನಡೆದಿರುವ ನಿಟ್ಟಿನಲ್ಲಿ ವಿಶೇಷ ಆಲಂಕಾರವನ್ನು ಏರ್ಪಡಿಸಲಾಗಿದೆ. ಪ್ರತ್ಯೇಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸದೇ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ವಿಶೇಷ ಆಲಂಕಾರ ಮಾಡಲಾಗಿದೆ. ಮುಸುಕಿನ ಜೋಳ, ತರೇವಾರಿ ಹೂವುಗಳು ಹಾಗೂ ಸೊಪ್ಪುಗಳನ್ನು ಬಳಸಿಕೊಂಡು ಆಲಂಕಾರ ಮಾಡಲಾಗಿದೆ. ನಮ್ಮ ದೇವಸ್ಥಾನದ ಸಿಬ್ಬಂದಿಗಳು ಸಂಪೂರ್ಣ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ರಾಮ್ ಮೋಹನ ರಾಜ್ ತಿಳಿಸಿದರು.
ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
Click this button or press Ctrl+G to toggle between Kannada and English