ಮಹಿಳಾ ಕಾರ್ಯಕರ್ತರಿಗೆ ಬಾಗಿನ ನೀಡಿ, ಪರಿಸರ ಸ್ನೇಹಿ ಗಣೇಶ ಮೂರ್ತಿ ವಿತರಿಸಿದ : ಕಂದಾಯ ಸಚಿವ ಆರ್ ಅಶೋಕ

9:51 PM, Thursday, September 9th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka Ganesha ಬೆಂಗಳೂರು  : “ಜೀವ, ಜೀವನ ಬಹಳ ಮುಖ್ಯ. ನಾವು ಬದುಕಿದರೆ ಮಾತ್ರ ಮುಂದೆ ಏನಾದರು ಸಾಧನೆ ಮಾಡಬಹುದು” ಎಂದು ಆರ್ ಅಶೋಕ ಹೇಳಿದರು. ದೆಹಲಿಯಿಂದ ನಗರಕ್ಕೆ ಆಗಮಿಸಿದ ಸಚಿವರು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿತರಿಸಿದರು. ಪದ್ಮನಾಭನಗರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಗೌರಿ ಹಬ್ಬದ ಶುಭದಿನದಂದು ಮಹಿಳೆಯರಿಗೆ ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ, “ನಾವು ಗಣೇಶ ಹಬ್ಬವನ್ನು ಆಯೋಜಿಸಲು ಅನುಮತಿ ನೀಡಿದ್ದೇವೆ. ಗೌರಿ ಮತ್ತು ಗಣೇಶ ಹಬ್ಬವು ಸಹೋದರತ್ವವನ್ನು ಸಂಕೇತಿಸುತ್ತದೆ. ನಾವು ಹಬ್ಬವನ್ನು ದೊಡ್ಡ ರೀತಿಯಲ್ಲಿ ಆಯೋಜಿಸಲು ಬಯಸಿದ್ದರೂ, ಕೋವಿಡ್ ಸಾಂಕ್ರಾಮಿಕವು ಬ್ರೇಕ್ ಹಾಕಿದೆ. ಕೋವಿಡ್ ಶೀಘ್ರದಲ್ಲೇ ಕಡಿಮೆಯಾಗುವುದರಿಂದ ಮುಂದಿನ ವರ್ಷ ನಾವು ಹಬ್ಬವನ್ನು ದೊಡ್ಡ ರೀತಿಯಲ್ಲಿ ಆಯೋಜಿಸಬಹುದು. ಒಂದಕ್ಕಿಂತ ಹೆಚ್ಚು ಸಂಘಟಕರು ಒಂದು ವಾರ್ಡ್‌ನಲ್ಲಿ ಗಣೇಶೋತ್ಸವವನ್ನು ಆಯೋಜಿಸಲು ಬಯಸಿದರೆ, ಅವರು ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಎಇಇ ಯಿಂದ ಅನುಮತಿ ಪಡೆಯಬೇಕು. ಕೋವಿಡ್ ನಿಯಂತ್ರಣಕ್ಕಾಗಿ ನಾವು ಈ ವ್ಯವಸ್ಥೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುವದನ್ನು ಕಂಡಾಗ ಬೇಸರವಾಗುತ್ತದೆ” ಎಂದು ಹೇಳಿದರು.
R Ashoka Ganesha
“ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳನ್ನು ಸುರಕ್ಷಿತವಾಗಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಂದು ನಾನು ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದ್ದೇನೆ. ಯಡಿಯೂರು ಅಲ್ಲದೆ, ಬೆಂಗಳೂರಿನಾದ್ಯಂತ ಸುಮಾರು 12 ಕೆರೆಗಳಲ್ಲಿ ಸುರಕ್ಷಿತವಾಗಿ ವಿಸರ್ಜನೆಯ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸುರಕ್ಷಿತವಾಗಿ, ಜಾಗೃತೆಯಿಂದ ಹಬ್ಬ ಆಚರಿಸಬೇಕು” ಎಂದು ಹೇಳಿದರು.

R Ashoka Ganesha

R Ashoka Ganesha

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English