ಕಲಾತ್ಮಕ ಉಮಾಮಹೇಶ್ವರ ಶಿಲ್ಪ ಪತ್ತೆ

7:25 PM, Saturday, September 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

Uma Maheshwaraಉಡುಪಿ : ಜಿಲ್ಲೆಯ  ಬೈಂದೂರು ತಾಲೂಕಿನ ಮಾರಣಕಟ್ಟೆಯ ಸಂನ್ಯಾಸಿಬೆಟ್ಟಿನಲ್ಲಿ ಅತ್ಯಂತ ಕಲಾತ್ಮಕವಾದ ಉಮಾಮಹೇಶ್ವರ ಶಿಲ್ಪ ಪತ್ತೆಯಾಗಿದೆಯೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿಯವರು  ತಿಳಿಸಿದ್ದಾರೆ.

ಕೇವಲ 9 ಸೆ.ಮೀ ಎತ್ತರ, 9 ಸೆ.ಮೀ. ಉದ್ದ ಮತ್ತು 4 ಸೆ.ಮೀ. ಅಗಲವಾಗಿರುವ ಈ ಕಿರು ಶಿಲ್ಪ , ತನ್ನ ಕಲಾತ್ಮಕತೆಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ. ಉಮಯಾ ಸಹ ದೇವೇಶ ನಂದಿವಾಹನ ಮೇವಚ ಎಂಬ ಉಕ್ತಿಯಂತೆ, ಉಮೆಯ ಸಂಗಡ ಮಹೇಶ್ವರ ನಂದಿವಾಹನದ ಮೇಲೆ ತನ್ನ ಎಲ್ಲಾ ಗಣಗಳ ಸಹಿತ ಸವಾರಿ ಮಾಡುವಂತೆ ಶಿಲ್ಪದಲ್ಲಿ ಚಿತ್ರಿಸಲಾಗಿದೆ. ಗಣಪತಿ, ವೀರಭದ್ರ, ಭೃಂಗಿ ಶಿಲ್ಪಗಳನ್ನು ಗುರುತಿಸಬಹುದಾಗಿದೆ, ಉಳಿದ ಶಿಲ್ಪಗಳು ಸವೆದು ಹೋಗಿರುವುದರಿಂದ ಗುರುತಿಸಲು ಸಾದ್ಯವಾಗುವುದಿಲ್ಲ.

ನಂದಿವಾಹನ ಶಿವ ತನ್ನ ಮುಂದಿನ ಎರಡೂ ಕೈಗಳಲ್ಲಿ ನಂದಿಯ ಕಿವಿಗಳನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಆತನ ಹಿಂಬAದಿಯ ಬಲಗೈಯಲ್ಲಿ ಮೃಗವನ್ನು ಲಾಂಛನವಾಗಿ ಹಿಡಿದಿದ್ದಾನೆ ಎಡಗೈ ಮುರಿದು ಹೋಗಿದೆ. ಆತನ ಹಿಂಭಾಗದಲ್ಲಿ ಕುಳಿತ ಉಮೆ ಶಿವನ ಎರಡೂ ಭುಜಗಳನ್ನು ಹಿಡಿದುಕೊಂಡಿರುವAತೆ ಚಿತ್ರಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಉಮೆಯ ಸೊಂಟದ ಮೇಲ್ಭಾಗ ತುಂಡಾಗಿ ಹೋಗಿದೆ.

ಉಮಾಮಹೇಶ್ವರ ಪಂಥವನ್ನು ಸೋಮಪಂಥ ಅಥವಾ ಸೋಮೇಶ್ವರ ಪಂಥವೆAದು ಕರೆಯಲಾಗುತ್ತದೆ. ಈ ಪಂಥ ಗುಜರಾತಿನಲ್ಲಿ ಸೋಮ ಅಥವಾ ಸೋಮಶರ್ಮ ಎಂಬುವುನಿAದ ಜನ್ಮತಾಳಿ ದೇಶದಾದ್ಯಂತ ಅತ್ಯಲ್ಪ ಕಾಲದಲ್ಲಿ ಪ್ರಸಿದ್ಧ ಪಂಥವಾಗಿ ಬೆಳವಣಿಗೆ ಹೊಂದಿತು. ತುಳುನಾಡಿನ ಹಲವು ಕಡೆ ಸೋಮನಾಥ ದೇವಾಲಯ/ಉಮಾಮಹೇಶ್ವರ ದೇವಾಲಯಗಳಿವೆ. ಸುಮಾರು 11 ನೇ ಶತಮಾನದಲ್ಲಿ ಈ ಪಂಥ ದಕ್ಷಿಣ ಭಾರತದಲ್ಲಿ ಜನಪ್ರಿಯ ಪಂಥವಾಗಿತ್ತು. ಈ ಶಿಲ್ಪವೂ ಸಹ 11 ನೇ ಶತಮಾನದ ಶಿಲ್ಪಶೈಲಿಯಲ್ಲಿ ರಚಿತವಾಗಿದೆ.

ಈ ಅಧ್ಯಯನದಲ್ಲಿ ನೆರವಾದ ಮುರುಳಿಧರ ಹೆಗಡೆ, ಮಾರಣಕಟ್ಟೆಯ ಶಂಕರ ಭಟ್, ಮಂಜುನಾಥ್ ಭಟ್ ಹಾಗೂ ನಮ್ಮ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English