ಮಂಗಳೂರು: ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ಗೆ ಹೋಗಿದ್ದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದಲ್ಲಿ ನಡೆದಿದೆ.
ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ.
ಆಕೆ ಫಾರ್ಮ್ ಹೌಸ್ನ ಹೊಂಡದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್ಗೆ ಮೈಜಿ ಆಗಮಿಸಿದ್ದರು.
ಈ ವೇಳೆ ಫಾರ್ಮ್ ಹೌಸ್ನಲ್ಲಿ ನೀರಿನ ಹೊಂಡ ನೋಡಿದ ಮೈಜೀಗೆ ಈಜಲು ಮನಸಾಗಿದೆ. ತಕ್ಷಣ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಆಸೆಯಿಂದ ನೀರಿಗೆ ಇಳಿದಿದ್ದಾಳೆ. ದುರಾದೃಷ್ಟವಶಾತ್ ಅದೇ ನೀರಿನಲ್ಲೇ ಮುಳುಗಿ ದುರಂತ ಅಂತ್ಯಕಂಡಿದ್ದಾರೆ.
ಮೃತ ಮೈಜೀ ಮಂಗಳೂರಿನ ಪ್ರಶಾಂತನಗರ ನಿವಾಸಿ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)
Click this button or press Ctrl+G to toggle between Kannada and English