ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣದಲ್ಲಿ 16.13ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ ಮಾಡಿ ಕಾಸರಗೋಡಿನ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡಿನ ಹುಸೈನ್ ರಾಝಿ ಮೊಯ್ದೀನ್ ಅಬೂಬಕ್ಕರ್ (26) ಮತ್ತು ಸಲೀಂ ಅಬ್ದುಲ್ಲ ಬಂಧಿತ ಆರೋಪಿಗಳು.
ಕಾಸರಗೋಡಿನ ಹುಸೈನ್ ರಾಝಿ ಮೊಯ್ದೀನ್ ಅಬೂಬಕ್ಕರ್ (26) ಎಂಬಾತ ಅಕ್ರಮ ಚಿನ್ನವನ್ನು ಟೋಯ್ ಸೆಟ್‌ನ ಒಳಗಿಟ್ಟು ಪ್ಯಾಕ್ ಮಾಡಿ ಸಾಗಾಟ ಮಾಡಲು ಯತ್ನಿಸಿದ್ದ. ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 24 ಕ್ಯಾರೆಟ್ ನ ಒಟ್ಟು 219ಗ್ರಾಂ ಚಿನ್ನ ಪತ್ತೆಯಾಗಿದ್ದು ಇದರ ಮೌಲ್ಯ 10,55,580 ರೂ.ಗಳಾಗಿವೆ.
ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಾಸರಗೋಡು ಸಲೀಂ ಅಬ್ದುಲ್ಲ ಎಂಬ ವ್ಯಕ್ತಿಯಿಂದ ಕಸ್ಟಮ್ಸ್ ಅಧಿಕಾರಿಗಳು 5.58 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿ ಕಾಸರಗೋಡು ಮೂಲದ ಸಲೀಂ ಅಬ್ದುಲ್ಲ ಎಂಬಾತ ಭಾನುವಾರ ದುಬಾಯಿನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಆತ ತಂದಿದ್ದ ಎಗ್ ಕುಕ್ಕರ್ ಮಷಿನ್‌ನ ಹೀಟರ್‌ನಲ್ಲಿಚಿನ್ನವನ್ನು ಅಡಗಿಸಿರುವುದು ತಪಾಸಣೆ ವೇಳೆ ಗೊತ್ತಾಗಿದೆ. ಈತನಿಂದ 5,58,720 ರೂ. ಮೌಲ್ಯದ 116.400 ಗ್ರಾಂ ಚಿನ್ನ ವಶಪಡಿಸಲಾಗಿದೆ. ಆರೋಪಿ ವಿರುದ್ಧ ಕೇಸು ದಾಖಲಿಸಲಾಗಿದೆ.
Click this button or press Ctrl+G to toggle between Kannada and English