ದಾವಣಗೆರೆ : ದಾವಣಗೆರೆಯಲ್ಲಿ ಸಿದ್ಧಗೊಂಡಿರುವ ಟೆನಿಸ್ ಕೋರ್ಟ್ ಗಳನ್ನು ಕಂದಾಯ ಸಚಿವ ಆರ್ ಅಶೋಕ್ ಪರಿಶೀಲನೆ ನಡೆಸಿದರು. ಡಿಸ್ಟ್ರಿಕ್ಟ್ ಟೆನಿಸ್ ಅಸೋಸಿಯೇಷನ್ ದಾವಣಗೆರೆ ಜಿಲ್ಲೆ ಇವರ ವತಿಯಿಂದ ಜನವರಿ 2022 ರಲ್ಲಿ ನಡೆಯಲಿರುವ ITTF ಪಂದ್ಯಾವಳಿಯನ್ನು ಆಯೋಜಿಸುವ ಕುರಿತು ಮನವಿ ಸ್ವೀಕರಿಸಿ, ಸಚಿವರು ಮಾತನಾಡಿದರು.
“ನಮ್ಮ ದೇಶ ಎಲ್ಲಾ ಕ್ರೀಡೆಗಳಲ್ಲೂ ಸಾಧನೆ ಮಾಡಬೇಕು. ಅಂತಹ ಕ್ರೀಡಾ ಪಟುಗಳು ನಮ್ಮಲ್ಲಿ ಸಿದ್ಧರಾಗಬೇಕು. ಆ ನಿಟ್ಟಿನಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಈ ಉದ್ದೇಶಕ್ಕೆ ಮಕ್ಕಳು, ಯುವಕರು ಹಾಗೂ ವಿಶೇಷ ಚೇತನರಿಗೆ ಟೆನಿಸ್ ನಲ್ಲಿ ವಿಶೇಷ ಅಭಿರುಚಿ ಮತ್ತು ಪರಿಣಿತಿ ಬೆಳೆಸಬೇಕು ಹಾಗೂ ಆಟಗಾರರಿಗೆ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಟೆನಿಸ್ ಕೋರ್ಟ್ ಗಳನ್ನ ಸಿದ್ಧಪಡಿಸಲಾಗಿದೆ”, ಎಂದು ಹೇಳಿದರು.
ರಾಷ್ಟ್ರಮಟ್ಟದ ಟೆನಿಸ್ ಪಂದ್ಯದಲ್ಲಿ ದಾವಣಗೆರೆ ಜಿಲ್ಲೆಯ ಒಬ್ಬ ಆಟಗಾರ ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು. ಅಂತಹ ಪ್ರತಿಭೆಗಳು ಇನ್ನಷ್ಟು ತಯಾರು ಮಾಡುವ ನಿಟ್ಟಿನಲ್ಲಿ ಇಲ್ಲಿಯೇ ಟೆನಿಸ್ ಕೋರ್ಟ್ ಸಿದ್ಧಪಡಿಸಲಾಗಿದೆ. ಇನ್ನಷ್ಟು ಅಗತ್ಯ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ”, ಎಂದರು.
ರೇಷ್ಮೆ, ಯುವಜನ ಮತ್ತು ಕ್ರೀಡಾ ಸಚಿವ ಶ್ರೀ ನಾರಾಯಣ ಗೌಡ ಮತ್ತು ಕೆ ಎಸ್ ಎಲ್ ಟಿ ಎ ಸಂಸ್ಥೆಯ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English