ಮಂಗಳೂರು : ಮೈಸೂರಿನ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಯುವತಿ ತನಗೆ ಮೋಸ ಆಗಿದೆ ಎಂದು ಮಂಗಳೂರಿನ ಮುಡಿಪುವಿನಲ್ಲಿರುವ ಯುವಕನ ಮನೆಗೆ ಬಂದಿದ್ದಾಳೆ. ಈ ವೇಳೆ ಯುವಕನ ಮನೆಯಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ. ಇದರಿಂದ ಬೇಸರಗೊಂಡ ಯುವತಿ ಬಸ್ ತಂಗುದಾಣದಲ್ಲಿ ಅಳುತ್ತಾ ಕುಳಿತಿದ್ದಳು. ಪೊಲೀಸರಿಗೆ ಮಾಹಿತಿ ಸಿಕ್ಕಿ ಯುವತಿಯ ಜತೆ ಮಾತನಾಡಿದ್ದಾರೆ. ಯುವಕನ ವಿರುದ್ಧ ದೂರು ನೀಡುವಂತೆ ಪೊಲೀಸರೇ ಹೇಳಿದ್ದಾರೆ. ಆದರೆ ಯುವತಿ ಮೈಸೂರಿನಲ್ಲಿ ದೂರು ಕೊಡುವುದಾಗಿ ಹೇಳಿದ್ದಾಳೆ. ಪೊಲೀಸರೇ ಯುವತಿಯನ್ನು ಮೈಸೂರು ಬಸ್ ಹತ್ತಿಸಿ ಕಳುಹಿಸಿದ್ದಾರೆ. ಬಳಿಕ ವಕೀಲರ ಮೂಲಕ ಮತ್ತೆ ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿ ಯುವಕನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಯುವತಿ ದೂರು ನೀಡಲು ಹೋದಾಗ ಪೊಲೀಸರು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ತೇಜಸ್ವಿನಿ ಗೌಡ ಆರೋಪಕ್ಕೆ ಆಯುಕ್ತರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣದಲ್ಲಿ ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ. ಸೆ.21ರಂದು ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದಿದ್ದಾರೆ.
Click this button or press Ctrl+G to toggle between Kannada and English