ನವ ಮಂಗಳೂರು ಬಂದರು ಟ್ರಸ್ಟ್ ಗೆ ಭೇಟಿ ನೀಡಿದ ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವ ಶ್ರೀ ಸರ್ಬಾನಂದ್ ಸೋನೋವಾಲ್

8:05 PM, Friday, September 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

NMPTಮಂಗಳೂರು :  ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವ ಹಾಗೂ ಆಯುಷ್ ಖಾತೆ ಸಚಿವ ಸರ್ಬಾನಂದ್ ಸೋನೋವಾಲ್ ಅವರು ನವ ಮಂಗಳೂರು ಬಂದರು ಟ್ರಸ್ಟ್ ಗೆ  ಸ‍ಂಸತ್ ಸದಸ್ಯ ನಳಿನ್ ಕುಮಾರ್, ಕಟೀಲ್ ಅವರೊಂದಿಗೆ ಶುಕ್ರವಾರ ಭೇಟಿನೀಡಿ ವಿವಿಧ ಕಾಮಗಾರಿಗಳಿಗೆ  ನೀಡಿದರು.

ಸಚಿವರು ಬಂದರಿನ ಕಾರ್ಯಕ್ಷಮತೆಯನ್ನು ಪರಾಮರ್ಶಿಸಿದರು, ಅವರಿಗೆ ಎನ್.ಎಂ.ಪಿ.ಟಿ.ಯ ಅಧ್ಯಕ್ಷ ಡಾ. ಎ.ವಿ. ರಮಣ ಬಂದರಿನ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಭೂತ ಸೌಕರ್ಯ ಯೋಜನೆಗಳು ಮತ್ತು ಇತರ ಪ್ರಸ್ತಾವನೆಗಳ ಕುರಿತಂತೆ ವಿವರಿಸಿದರು. ಸಚಿವರ ಈ ಭೇಟಿ, 2021ರ ಜುಲೈನಲ್ಲಿ ಹೊಸ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ದೇಶದ ಎಲ್ಲಾ ಪ್ರಮುಖ ಬಂದರುಗಳಿಗೆ ನೀಡುತ್ತಿರುವ ಸರಣಿ ಭೇಟಿಗಳ ಭಾಗವಾಗಿತ್ತು. ಭೇಟಿಯ ವೇಳೆ ಶ್ರೀ ಸೋನೊವಾಲ್ ಬಂದರಿನಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ , ಬಂದರಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಂತರ ಅವರು ಬಂದರು ಆಡಳಿತದೊಂದಿಗೆ ಸಭೆ ನಡೆಸಿದರು ಮತ್ತು ಬಂದರಿನ ಕಾರ್ಯಕ್ಷಮತೆ ಮತ್ತು ಅದರ ಭವಿಷ್ಯದ ವಿಸ್ತರಣೆ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.

NMPT ಈ ಸಂದರ್ಭ ಸಚಿವರು  ಯುಎಸ್ ಮಲ್ಯ ಗೇಟ್‌ ನ ನವೀಕರಣ ಕಾಮಗಾರಿಗೆ ಶಿಲಾನ್ಯಾಸ, ಬಂದರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಶಿಲಾನ್ಯಾಸ, ಬಂದರಿನಲ್ಲಿ ವ್ಯಾಪಾರ ಅಭಿವೃದ್ಧಿ ಕೇಂದ್ರದ ಕಟ್ಟಡದ ಸಮರ್ಪಣೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ, 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯು.ಎಸ್. ಮಲ್ಯ ಗೇಟ್ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು.
ಕಸ್ಟಮ್ ಬಾಂಡ್ ಪ್ರದೇಶದಲ್ಲಿ ಎಕ್ಸಿಮ್ ಸರಕು ಸ್ವೀಕಾರ ಮತ್ತು ಆಮದು ಸರಕು ಸ್ಥಳಾಂತರಿಸುವಿಕೆಗಾಗಿ ನವ ಮಂಗಳೂರು ಬಂದರು ಟ್ರಸ್ಟ್ ಪೂರ್ವ, ದಕ್ಷಿಣ ಮತ್ತು ಉತ್ತರದಲ್ಲಿ 3 ಪ್ರವೇಶ ದ್ವಾರಗಳನ್ನು ಹೊಂದಿದೆ. ಬಂದರಿನ ಸ್ಥಾಪಕರ ಹೆಸರಿನ ಪೂರ್ವದ ಗೇಟ್ ಯುಎಸ್ ಮಲ್ಯ ಗೇಟ್, ಇದನ್ನು ನವೀಕರಿಸಲು ಪ್ರಸ್ತಾಪಿಸಲಾಯಿತು. ಗೇಟ್ ಸಂಕೀರ್ಣವನ್ನು ನೆಲ ಮತ್ತು 2 ಮಹಡಿಗಳೊಂದಿಗೆ ಈ ಕೆಳಗಿನ ನಿಬಂಧನೆಗಳನ್ನೊಳಗೊಂಡಂತೆ ನಿರ್ಮಿಸಲಾಗುವುದು.

1. ದ್ವಿಚಕ್ರ ವಾಹನ ಚಾಲನೆಯ ಮಾರ್ಗ, ನಾಲ್ಕು ಚಕ್ರಗಳ ವಾಹನ ಚಾಲನೆಯ ಮಾರ್ಗ, ಟ್ರಕ್ ಚಾಲನೆಯ ಮಾರ್ಗ, ಪಾದಚಾರಿ ಮಾರ್ಗ, ಆರ್‌.ಎಫ್‌.ಐ.ಡಿ. ವ್ಯವಸ್ಥೆಯ ನಿಬಂಧನೆಗಳು, ರೇಡಿಯೋಲಾಜಿಕಲ್ ನಿಗಾ ಉಪಕರಣಗಳು, ಬೂಮ್ ತಡೆ ಸಾಧನಗಳು ಇತ್ಯಾದಿ. ನಿರ್ಗಮನ ಮತ್ತು ಪ್ರವೇಶ ದ್ವಾರಗಳೆರಡರಲ್ಲೂ ಸಿ.ಐ.ಎಸ್‌.ಎಫ್. ಇನ್ಸ್‌ ಪೆಕ್ಟರ್ ಕಚೇರಿ, ಕಸ್ಟಮ್ ಕಚೇರಿ, ಫ್ರಿಸ್ಕಿಂಗ್ ರೂಂ, ಕಚೇರಿ ಕೊಠಡಿ.

2. ಮೊದಲ ಮಹಡಿ ಮತ್ತು 2ನೇ ಮಹಡಿ: ಸಿಸಿ ಟಿವಿ ಮೇಲ್ವಿಚಾರಣಾ ಕಚೇರಿಗಾಗಿ ಉದ್ದೇಶಿತ 4 ಕಚೇರಿ ಕೊಠಡಿಗಳನ್ನು ಒದಗಿಸಲಾಗುವುದು. ಸಿಐಎಸ್ಎಫ್ ಕಚೇರಿಗಳು, ನಿಯಂತ್ರಣ ಕೊಠಡಿ ಇತ್ಯಾದಿ.

3. ಕಾಮಗಾರಿಯ ಒಪ್ಪಂದದ ವೆಚ್ಚ 3.22 ಕೋಟಿಗಳು. ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷಿತ ದಿನಾಂಕ 31.3.2022.

4. ಪ್ರವೇಶ ದ್ವಾರದ ನವೀಕರಣದಿಂದ ಪ್ರಯೋಜನಗಳು:
1. ಸಂಚಾರ ಸುಗಮಗೊಳಿಸುವುದು.
2. ಅಪಘಾತಗಳು ನಡೆಯದಂತೆ ಮಾಡುವುದು.
3. ಗೇಟ್‌ ನಲ್ಲಿ ಟ್ರಕ್‌ ಗಳು ಕಾಯುವ ಸಮಯವನ್ನು ತೊಡೆದುಹಾಕುವುದು.
4. ವಿಪತ್ತುಗಳ ಉತ್ತಮ ಮೇಲ್ವಿಚಾರಣೆ / ನಿರ್ವಹಣೆ.

2. ಬಂದರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಶಂಕುಸ್ಥಾಪನೆ:
ಸುಧಾರಿತ ಒಳನಾಡಿನ ಸಂಪರ್ಕದಿಂದಾಗಿ, ಕಂಟೇನರ್ ಮತ್ತು ಇತರ ಸಾಮಾನ್ಯ ಸರಕು ಸಂಚಾರವು ಬಂದರಿನಲ್ಲಿ ಹೆಚ್ಚುತ್ತಿದೆ. ಬಂದರು ಒಳನಾಡು ಮೂರು ಮುಖ್ಯ ರೈಲು ಮಾರ್ಗ ಮತ್ತು ಮೂರು ರಾಷ್ಟ್ರೀಯ ಹೆದ್ದಾರಿಗಳು ಅಂದರೆ ರಾಷ್ಟ್ರೀಯ ಹೆದ್ದಾರಿ -66, ರಾಷ್ಟ್ರೀಯ ಹೆದ್ದಾರಿ -75 ಮತ್ತು ರಾಷ್ಟ್ರೀಯ ಹೆದ್ದಾರಿ-169ರೊಂದಿಗೆ ಸಂಪರ್ಕಿತವಾಗಿದೆ.
ನವ ಮಂಗಳೂರು ಬಂದರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಮತ್ತು ಕರ್ನಾಟಕ ರಾಜ್ಯದ ಇತರ ದೂರದ ಪ್ರದೇಶಗಳಿಗೆ ಸರಕುಗಳನ್ನು ರವಾನಿಸಲು ಪ್ರತಿದಿನ ಸುಮಾರು 5೦೦ ಸಂಖ್ಯೆಯ ಟ್ರಕ್ ಗಳು ಸಂಚರಿಸುವುದನ್ನು ಗಮನಿಸಬಹುದಾಗಿದೆ. ನವ ಮಂಗಳೂರು ಬಂದರು ಕಸ್ಟಮ್ಸ್ ಹೌಸ್ ಬಳಿ ಈ ಟ್ರಕ್ ಗಳಿಗೆ 12,000 ಚದರ ಮೀಟರ್ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಿದ್ದು, ಸುಮಾರು 160 ಸಂಖ್ಯೆಯ ಟ್ರಕ್ ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದೆ, ಆದಾಗ್ಯೂ ಅಸ್ತಿತ್ವದಲ್ಲಿರುವ ನಿಲುಗಡೆ ಪ್ರದೇಶ ಸಾಕಾಗುವುದಿಲ್ಲ ಎಂಬುದು ಕಂಡುಬಂದಿದೆ.
ಕೆಕೆ ಗೇಟ್ ಬಳಿ ಗಟ್ಟಿ ಮೇಲ್ಮೈನ ಟ್ರಕ್ ನಿಲುಗಡೆ ಟರ್ಮಿನಲ್ ಅನ್ನು ಪ್ರಸ್ತಾಪಿಸಲಾಗಿದೆ ಮತ್ತು 2 ಕೋಟಿ ರೂ. ವೆಚ್ಚದಲ್ಲಿ 16000 ಮೀ 2 ಪ್ರದೇಶದಲ್ಲಿ ಪೂರ್ಣಗೊಳಿಸಲಾಗುವುದು. 17000 ಮೀ 2 ಹೆಚ್ಚುವರಿ ಟ್ರಕ್ ನಿಲುಗಡೆ ಪ್ರದೇಶವನ್ನು 1.9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಟ್ರಕ್ ಟರ್ಮಿನಲ್ ಗೆ 2022-23ರಲ್ಲಿ 5.00 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಕಾಂಕ್ರೀಟ್ ಪಾದಚಾರಿ ಮಾರ್ಗ, ಗೇಟ್ ಹೌಸ್, ರೆಸ್ಟೋರೆಂಟ್, ಡಾರ್ಮಿಟರಿ ಒದಗಿಸಲಾಗುವುದು. ಇದರಿಂದಾಗುವ ಪ್ರಯೋಜನಗಳು.

1. ಹೆದ್ದಾರಿ ಬದಿಯಲ್ಲಿ ಟ್ರಕ್ ನಿಲುಗಡೆ ತಪ್ಪುತ್ತದೆ
2. ಟ್ರಕ್ ಚಾಲಕರಿಗೆ ಮೂಲಭೂತ ಸೌಲಭ್ಯಗಳು ದೊರಕಿ, ಅಪಘಾತಗಳ ಇಳಿಕೆಗೆ ಕಾರಣವಾಗುತ್ತದೆ.
3. ಬಂದರಿನಲ್ಲಿ ನಿಲುಗಡೆ ಟರ್ಮಿನಲ್ ನಿಂದ ಲೋಡಿಂಗ್ ಪ್ರದೇಶಕ್ಕೆ ಟ್ರಕ್ ಗಳ ವೈಜ್ಞಾನಿಕವಾದ ಚಲನೆ.
4. ಟ್ರಕ್ ನ ಬ್ಯಾಟರಿಗಳು ಮತ್ತು ಟೈರ್ ಗಳ ಕಳ್ಳತನವನ್ನು ತಗ್ಗಿಸುತ್ತದೆ.
5. ರಸ್ತೆಗಳು ಮತ್ತು ಬಂದರು ಆವರಣದಲ್ಲಿ ಸಂಚಾರ ದಟ್ಟಣೆಯನ್ನು ಸುಗಮಗೊಳಿಸುತ್ತದೆ.

ಇದಲ್ಲದೆ ಬಂದರು 2022-23 ರ ಬಜೆಟ್ ಅಂದಾಜಿನಲ್ಲಿ ಟ್ರಕ್ ನಿಲುಗಡೆ ಟರ್ಮಿನಲ್ ಗೆ ಪಿಕ್ಯೂಸಿಯನ್ನು 4 ಕೋಟಿ ರೂ.ಗಳಿಗೆ ಒದಗಿಸಲು ಯೋಜಿಸಿದೆ.
3. ಎ.ಸಿ.ಐ.ಡಿ.ಇ. (ಅಸೈಡ್) ಯೋಜನೆಯಡಿ ನವ ಮಂಗಳೂರು ಬಂದರಿನಲ್ಲಿ ರಫ್ತು ಮತ್ತು ಪರೀಕ್ಷಾ ಕೇಂದ್ರಕ್ಕಾಗಿ ವ್ಯಾಪಾರ ಅಭಿವೃದ್ಧಿ ಪಾರ್ಕ್:
ಬಂದರಿನಲ್ಲಿ ನಿರ್ವಹಿಸಲಾಗುವ ರಫ್ತು ಸರಕುಗಳಿಗೆ ರಫ್ತು ಮಾಡುವ ಮೊದಲು ವಿವಿಧ ಪ್ರಾಧಿಕಾರಗಳಿಂದ ಪರೀಕ್ಷೆ ಮತ್ತು ಪ್ರಮಾಣೀಕರಣದ ಅಗತ್ಯವಿರುತ್ತದೆ. ಪ್ರಸ್ತುತ, ಪರೀಕ್ಷಾ ಕೇಂದ್ರಗಳು ಮೈಸೂರು, ಮುಂಬೈ ಮತ್ತು ಇತರ ಸ್ಥಳಗಳಲ್ಲಿವೆ ಮತ್ತು ಸಾಗಣೆಗೆ ಮೊದಲು ಏಜೆನ್ಸಿಗಳು ಪರೀಕ್ಷೆಗಳನ್ನು ನಡೆಸುತ್ತವೆ. ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಸಾಗಣೆಗೆ ಅನುಕೂಲವಾಗುವಂತೆ ಮತ್ತು ಎಲ್ಲಾ ಸೌಲಭ್ಯಗಳನ್ನು ಒಂದೇ ಛಾವಣಿಯಡಿಯಲ್ಲಿ ತರಲು, ರಫ್ತು ಮತ್ತು ಪರೀಕ್ಷಾ ಕೇಂದ್ರಕ್ಕಾಗಿ ವ್ಯಾಪಾರ ಅಭಿವೃದ್ಧಿ ಉದ್ಯಾನವನ್ನು ಪ್ರಸ್ತಾಪಿಸಲಾಗಿದೆ.
ಆ ಪ್ರಕಾರವಾಗಿ, ಈ ಪ್ರಸ್ತಾಪವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ವಾಣಿಜ್ಯ ಇಲಾಖೆಗೆ ಅಸೈಡ್ (ರಫ್ತುಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯಗಳಿಗೆ ನೆರವು) ಯೋಜನೆಯಡಿ ನೆರವು ನೀಡಲು ಸಲ್ಲಿಸಲಾಗಿದೆ. ವಾಣಿಜ್ಯ ಸಚಿವಾಲಯವು ಬಂದರಿನ ಪ್ರಸ್ತಾಪವನ್ನು ಪರಿಗಣಿಸಿದ್ದು, ಯೋಜನೆಯ ವೆಚ್ಚದ ಶೇ. 75 ಅಂದರೆ 15.00 ಕೋಟಿಗಳ ನೆರವನ್ನು ಒದಗಿಸಲು ಅನುಮೋದನೆ ನೀಡಿದೆ. ಯೋಜನೆಗೆ ಮಾಡಿದ ಒಟ್ಟು ವೆಚ್ಚ 25 ಕೋಟಿ ರೂ. ಆಗಿದೆ.

ವ್ಯಾಪಾರ ಅಭಿವೃದ್ಧಿ ಪಾರ್ಕ್ ಪೈಲ್ ಫೌಂಡೇಷನ್ ನಲ್ಲಿ ಎರಡು ಲಿಫ್ಟ್ ಗಳು, ಅಗ್ನಿ ಶಾಮಕ ವ್ಯವಸ್ಥೆ ಮತ್ತು ಲ್ಯಾಂಡ್ ಸ್ಕೇಪಿಂಗ್ ಇತ್ಯಾದಿಗಳ ಜೊತೆಗೆ ಈ ಕೆಳಕಂಡವುಗಳನ್ನೂ ಒಳಗೊಂಡಿದೆ.
ಎ) ಮಹಡಿಗಳ ನಿಲುಗಡೆ
ಬಿ) ಸಮಾವೇಶ ಸಭಾಂಗಣ,
ಸಿ) ರೆಸ್ಟೋರೆಂಟ್
ಡಿ) ಅಂಚೆ ಕಚೇರಿ, ಬ್ಯಾಂಕ್
ಇ) ಕಸ್ಟಮ್ಸ್ ಮತ್ತು ಬಂದರು ಕಚೇರಿಗಳು
ಎಫ್) ಕಸ್ಟಮ್ ಹೌಸ್ ಏಜೆಂಟ್ ಗಳು
ಜಿ) ಸಾಗಣೆ ಕಚೇರಿಗಳು
ಎಚ್) ಪರೀಕ್ಷಾ ಕೇಂದ್ರ ಕಟ್ಟಡ

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವ
ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ನೆನಪಿಗಾಗಿ “ಸ್ವಾತಂತ್ರ್ಯದ ಅಮೃತ ಮಹೋತ್ಸವ”ದ ಹಿನ್ನೆಲೆಯಲ್ಲಿ ಬಂದರಿನ ಆಸುಪಾಸಿನ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಸಚಿವರು ಬಹುಮಾನಗಳನ್ನು ವಿತರಿಸಿದರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆ ಮಟ್ಟ ಮತ್ತು ದೇಶದ ಬಗ್ಗೆ ಅವರ ಪ್ರೀತಿಯನ್ನು ಶ್ಲಾಘಿಸಿದರು. ಅಧ್ಯಕ್ಷ ಡಾ. ಎ.ವಿ. ರಮಣ ಮತ್ತು ಉಪಾಧ್ಯಕ್ಷ ಶ್ರೀ ಕೆ.ಜಿ. ನಾಥ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಸಚಿವರು ಬಂದರಿನ ವಿವಿಧ ಬಾಧ್ಯಸ್ಥರೊಂದಿಗೆ ಸಂವಾದ ನಡೆಸಿದರು. ಬಾಧ್ಯಸ್ಥರನ್ನುದ್ದೇಶಿಸಿ ಮಾತನಾಡಿದ ಸಚಿವರು, ಬಂದರಿನಲ್ಲಿ ಕಾರ್ಯವಿಧಾನಗಳನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತಷ್ಟು ಸುಗಮ ವಹಿವಾಟುಗಳ ಬಗ್ಗೆ ಭರವಸೆ ನೀಡಿ, ಸುಗಮ ವ್ಯಾಪಾರವನ್ನು ಉತ್ತೇಜಿಸುವುದಾಗಿ ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English