ಧರ್ಮೇಂದ್ರ ಹಾಗೂ ರಾಜೇಶ್ ಪವಿತ್ರನ್ ಇವರನ್ನು ಈ ಸಂಘಟನೆಯಿಂದ ಉಚ್ಚಾಟಿಸಲಾಗಿದೆ : ಡಾ.ಎಲ್ ಕೆ ಸುವರ್ಣ

2:19 PM, Sunday, September 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

KL Suvarnaಮಂಗಳೂರು :  ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಜೈಲು ಪಾಲಾದ ಧರ್ಮೇಂದ್ರ ಹಾಗೂ ಇತರರಿಗೂ ಅಖಿಲ ಭಾರತ ಹಿಂದೂ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ ಈಗಲೂ ಕೆಲ ಮಾಧ್ಯಮಗಳಲ್ಲಿ ಅವರ ಹೆಸರುಗಳ ಮುಂದೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಎಂದು ಉಲ್ಲೇಖಿಸಲಾಗುತ್ತದೆ. ಧರ್ಮೇಂದ್ರ ಹಾಗೂ ರಾಜೇಶ್ ಪವಿತ್ರನ್ ಇವರನ್ನು ಈ ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಎಲ್ ಕೆ ಸುವರ್ಣ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಧರ್ಮೇಂದ್ರ ಹಾಗೂ ಅವರೋಂದಿಗಿರುವವರು ಈಗಲೂ ಅವರುಗಳು ಹಿಂದೂ ಮಹಾಸಭಾದ ಹೆಸರು ಹೇಳಿಕೊಂಡು ತಿರುಗಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ನಾವು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ ಎಂದರು.

ನಂಜನಗೂಡಿನಲ್ಲಿ ಪುರಾತನ ದೇವಾಲಯ ಕೆಡವಿದ ಸ್ಥಳದಲ್ಲಿ ಮತ್ತೆ ದೇವಾಲಯ ನಿರ್ಮಾಣ ಮಾಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಆಗ್ರಹಿಸಿದೆ. ಇದೀಗ ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಸರಕಾರದೊಂದಿಗೆ, ಮುಜರಾಯಿ ಇಲಾಖೆಯೊಂದಿಗೆ ಮಾತುಕತೆ ನಡೆಸಿದೆ. ಈ ಬಗ್ಗೆ ಸರಕಾರವೂ ನಮಗೆ ಅದೇ ಸ್ಥಳದಲ್ಲಿ ಮತ್ತೆ ದೇವಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ ಎಂದು ಅವರು ಹೇಳಿದರು

800 ವರ್ಷಗಳ ಹಿಂದಿನ ದೇವಾಲಯ ಎಂಬುದು ತಿಳಿದಿದ್ದರೂ ಅದೇ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಿರೋದು ತಪ್ಪು. ಅಲ್ಲದೆ ರಸ್ತೆಯನ್ನು ಬೇರೆಡೆಯಿಂದ ಮಾಡಲು ಅವಕಾಶ ಇದ್ದಾಗಲೂ ಈ ರೀತಿ ಮಾಡಿರೋದು ಸರಿಯಲ್ಲ.ಅಲ್ಲದೆ ಕೆಡುವುವಾಗಲೂ‌ ದೇವಾಲಯದ ಮೂರ್ತಿಗಳಿಗೆ ಭಗ್ನ ಆಗದ ರೀತಿ ಗ್ರಾಮಸ್ಥರ ಮನವೊಲಿಕೆ ಮಾಡಿ ಕೆಲಸ ಮಾಡಬಹುದಿತ್ತು. ಆದರೆ, ಇದಾವುದನ್ನೂ ಮಾಡದೆ ಇಂತಹ ಕೃತ್ಯ ಎಸಗಿರೋದು ತಪ್ಪು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English