ತುಳುವೆರೆ ಪಕ್ಷದ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ

9:57 PM, Monday, September 27th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tuluvere Pakshaಬೆಳ್ತಂಗಡಿ : ತುಳುವೆರೆ ಪಕ್ಷದ ವೆಬ್‌ಸೈಟ್ ಲೋಕಾರ್ಪಣೆ ಮತ್ತು ಸದಸ್ಯತ್ವ ಅಭಿಯಾನಕ್ಕೆ ಅಂಬೇಡ್ಕರ್ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕರ್ತರ ಸಮಾವೇಶ ಮತ್ತು ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಸ್ಥಾಪಕ ಅಧ್ಯಕ್ಷರಾದ ಶೈಲೇಶ್ ಆರ್.ಜೆ.ಯವರು ವಹಿಸಿ ಮಾತನಾಡುತ್ತ ತುಳು ಭಾಷೆಯ ಸ್ಥಾನಮಾನ ಮತ್ತು ತುಲುನಾಡ್ ರಾಜ್ಯ ರಚನೆಯ ಬೇಡಿಕೆಗೆ ಸುಧೀರ್ಘಕಾಲದಿಂದ ತುಳುವರು ಹೋರಾಟ ನಡೆಸುತ್ತಿದ್ದರು ತುಳು ಭಾಷೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಧಿಕೃತ ಭಾಷೆಯೆಂಬ ಸ್ಥಾನಮಾನ ನೀಡಲು ವಿಫಲವಾಗಿದೆ, 8ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಮೂಲಕ ನಮ್ಮನ್ನು ಆಳುತ್ತಿರುವ ರಾಷ್ಟೀಯ  ಪಕ್ಷಗಳು ತುಳುವರ ನಾಡು ನುಡಿಯ ಉಳಿವು ಬೆಳವಣಿಗೆಗೆ ಪ್ರೋತ್ಸಾಹ ನೀಡುವಲ್ಲಿ ಸಂರ್ಪೂಣ ವಿಫಲವಾಗಿವೆ. ತುಳುನಾಡಿನ ಭವಿಷ್ಯವು ಪ್ರಾದೇಶಿಕ ರಾಜಕಾರಣದಲ್ಲಿ ಅಡಗಿದೆ ಎಂದು ತಿಳಿಸಿದರು.

ತುಳುವೆರೆ ಪಕ್ಷ ಉಡುಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ರಮೇಶ್ ಕುಂದರ್ ಹಾವಂಜೆ ಮಾತನಾಡುತ್ತ ತುಳು ಭಾಷೆ ಮತ್ತು ತುಳುನಾಡಿನ ಒಳಿತಿಗಾಗಿ ಕೆಲಸ ಮಾಡಬೇಕು ಎಂಬ ತುಡಿತದಿಂದ ತುಳುವೆರೆ ಪಕ್ಷಕ್ಕೆ ಸೇರಿದ್ದು ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಮತ್ತು ತುಳು ಭಾಷೆ ಮತ್ತು ತುಳುನಾಡಿನ ಸ್ಥಾನಮಾನಕ್ಕೆ ಕೆಲಸ ಮಾಡುವುದಾಗಿ ತಿಳಿಸಿದರು. ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ತುಳುನಾಡ್ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶೇಖರ್ ಗೌಂಡತ್ತಿಗೆಯವರು ಮಾತನಾಡುತ್ತ ತುಳುನಾಡಿನ ಜನರು ಮರಳಿ ತಮ್ಮ ಮೂಲದೆಡೆಗೆ ಸೆಳೆತಕ್ಕೊಳಗಾಗಿದ್ದಾರೆ. ತುಳು ಭಾಷೆ, ತುಳುನಾಡಿನ ಅಭಿವೃಧ್ದಿಯ ಬಗ್ಗೆ ಸರ್ಕಾರಗಳ ನಿರಂತರ ನಿರ್ಲಕ್ಷ್ಯ ಖಂಡನೀಯವೆಂದರು. ಎತ್ತಿನಹೊಳೆ ಯೋಜನೆಯನ್ನು ಕರ್ನಾಟಕ ಸರ್ಕಾರವು ಆದಷ್ಟು ಬೇಗ ನಿಲ್ಲಿಸುವುದು ಉತ್ತಮ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಕೋಶಾಧಿಕಾರಿ ರಾಜೇಶ್ ಕುಲಾಲ್ ಬೈರೊಟ್ಟು, ಪುತ್ತೂರು ತಾಲೂಕು ಅಧ್ಯಕ್ಷರಾದ ವಿಜೇಶ್ ರೈ, ಉಡುಪಿ ತಾಲೂಕು ಘಟಕದ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಮುಗ್ಗೇರಿ ನಿತ್ಯಾನಂದ ಶೆಟ್ಟಿ ಹೆಬ್ರಿ, ಉಲ್ಲಾಳ ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಕುಲಾಲ್ ತಲಪಾಡಿ, ಬಂಟ್ವಾಳ ತಾಲೂಕು ಘಟಕದ ಸಂದೀಪ್ ಪೂಜಾರಿ, ಬೆಳ್ತಂಗಡಿ ನಗರ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ, ಗಂಗಾಧರ, ಗಿರೀಶ್, ಹವ್ಯಾಸ್, ರಕ್ಷಿತ್, ಕರಂಬಾರು ಗ್ರಾಮ ಸಮಿತಿಯ ಅಧ್ಯಕ್ಷ ಉಮೇಶ್ ಕುಲಾಲ್, ಶೋಭಾ, ಮನೋಜ್, ಸಂದೀಪ್ , ದಿನೇಶ್, ಅರವಿಂದ್ ಪಂಡಿತ್ ಕುಡ್ಲ, ಸುರೇಂದ್ರ ಕೋಟ್ಯಾನ್, ಗೌತಮ್, ಪಕ್ಷದ ಉಪಾಧ್ಯಕ್ಷ ನವೀನ್ ಪೂಜಾರಿ ಅಡ್ಕದಬೈಲು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಶಿರ್ಲಾಲು ಗ್ರಾಮ ಸಮಿತಿಯ ಅಧ್ಯಕ್ಷ ಮನೋಹರ್ ಕುಮಾರ್ ನಲ್ಲಾರುಗುತ್ತು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English