ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಆಸ್ಕರ್ ಫೆರ್ನಾಂಡಿಸ್ ರವರಿಗೆ ಆತ್ಮೀಯ ಶ್ರದ್ದಾಂಜಲಿ

11:24 PM, Tuesday, September 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

oscar-fernandesಮುಂಬಯಿ : ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಜನಪ್ರಿಯ ಸಮಾಜ ಸೇವಕ ಆಸ್ಕರ್ ಫೆರ್ನಾಂಡಿಸ್ ಅವರು ಸೆ. 13 ರಂದು ನಿಧನರಾಗಿದ್ದು, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಕರಾವಳಿಯ ಉಭಯ ಜಿಲ್ಲೆಗಳ ಅಭಿವೃದ್ದಿ ಬಗ್ಗೆ ಕ್ರೀಯಾಶೀಲವಾಗಿರುವ ಸರಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಸೆ. 24ರಂದು ಜೂಮ್ ಮೂಲಕ ಶ್ರದ್ದಾಂಜಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮುಂಬಯಿಯ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು ಮಾತ್ರವಲ್ಲದೆ, ಊರಿನ ಗಣ್ಯರು ಬಾಗವಹಿಸಿದ್ದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಆಸ್ಕರ್ ಫೆರ್ನಾಂಡಿಸ್ ಅವರ ಕಾರ್ಯ ವೈಕರಿ ಬಗ್ಗೆ ಹಾಗೂ ಜನ ಸಾಮಾನ್ಯರೊಂದಿಗೆ ಅವರು ವ್ಯವಹರಿಸುದರ ಬಗ್ಗೆ ಮಾತನಾಡುತ್ತಾ ಪಕ್ಷಬೇದ ಮರೆತು ಜನಸಾಮಾನ್ಯರ ಸೇವೆಗೆ ಸದಾ ಸ್ಪಂದಿಸುತ್ತಿದ್ದ ಆಸ್ಕರ್ ಫೆರ್ನಾಂಡಿಸ್ ರದ್ದು ಸರಳವಾದ ವ್ಯಕ್ತಿತ್ವ ಹಾಗೂ ಅವರು ಸ್ನೇಹ ಜೀವಿ. ಇದೇ ಅಗಷ್ಟು ತಿಂಗಳ ಮೂರನೇ ವಾರ ಅವರು ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನನಗೆ ಅವರನ್ನು ಬೇಟಿಯಾಗುವ ಸೌಭಾಗ್ಯ ದೊರಕಿದೆ. ನಮ್ಮ ಜಿಲ್ಲೆಗಳ ಅಭಿವೃದ್ದಿಯಲ್ಲಿ ಕೇಂದ್ರ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ರ ಕೊಡುಗೆ ಅಪಾರ, ಅವರನ್ನು ಕೇವಲ ಅವರ ಪರಿವಾರದವರು ಮಾತ್ರವಲ್ಲ ಜಿಲ್ಲೆಗಳ ಹಾಗೂ ದೇಶದ ಸಹಸ್ರಾರು ನಾಗರಿಕರು ಕಳೆದುಕೊಂಡಿದ್ದು, ಅವರ ಎಲ್ಲಾ ಅಭಿಮಾನಿಗಳಿಗೆ ಇದು ತುಂಬಲಾರದ ನಷ್ಟವಾಗಿದೆ ಎನ್ನುತ್ತಾ ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.

ಆಸ್ಕರ್ ಫೆರ್ನಾಂಡಿಸ್ ರ ಸಾಧನೆ, ಸಮಿತಿಯೊಂದಿಗೆ ಅವರಿಗಿದ್ದ ಆತ್ಮೀಯ ಸಂಮಂಧದ ಬಗ್ಗೆ, ಅವರ ಜನಸೇವೆ ಹಾಗೂ ವಿಶೇಷವಾದ ಸರಳ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲ ಬೇರನ್ನು ಮರೆಯದೆ ತನ್ನ ಬಾಲ್ಯದ ಸ್ನೇಹಿತರೊಂದಿಗೆ ಮೊದಲಿನಂತೆ ಬೆರೆಯುತ್ತಾ ಜನರಲ್ಲಿ ಪ್ರೀತಿ ವಿಶ್ವಾಸವನ್ನು ಬೆಳೆಸಿದ ಮಹಾನ್ ವ್ಯಕ್ತಿತ್ತ ಅವರದ್ದು ಎನ್ನುತ್ತಾ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ನ್ಯಾ. ರಾಮಣ್ಣ ಭಂಡಾರಿ, ಸುರೆಖಾ ದೇವಾಡಿಗ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ತಾವಿದ್ದ ಸ್ಥಳದಿಂದಲೇ ಬಾಗವಹಿಸಿ ಆಸ್ಕರ್ ಫೆರ್ನಾಂಡಿಸ್ ಅವರಿಗೆ ನುಡಿ ನಮನ ಸಲ್ಲಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English