ಲ್ಯಾಂಡ್ ಲಿಂಕ್ಸ್ ಗೆ ನರ್ಮ್ ಬಸ್ ಸಂಚಾರ ಆರಂಭ, ಶಾಸಕ ಡಾ.ಭರತ್ ಶೆಟ್ಟಿ ವೈ ಹಸಿರು ನಿಶಾನೆ

4:21 PM, Wednesday, September 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Landlinks-Bus ಕೊಂಚಾಡಿ: ಲ್ಯಾಂಡ್ ಲಿಂಕ್ಸ್  ಪ್ರದೇಶದ ಜನರ ಬಹುದಿನದ ಬೇಡಿಕೆಯಾದ ಸರಕಾರಿ ಬಸ್ ಓಡಾಟದ ಕನಸು ನನಸಾಗಿದೆ. ಬುಧವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ನರ್ಮ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿದ ಅವರು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ನೌಕರಿಗೆ ಹೋಗುವ ಜನರಿಗೆ ಅನುಕೂಲವಾದ ಸಮಯದಲ್ಲಿ ನರ್ಮ್ ಬಸ್ ಸಂಚಾರ ಅವಕಾಶ ನೀಡಲಾಗಿದೆ.ಪ್ರತೀ 45 ನಿಮಿಷಕ್ಕೆ ನರ್ಮ್ ಬಸ್ ಓಡಾಟ ನಡೆಸಲಿದೆ.ಇದೀಗ ಪ್ರಾಯೋಗಿಕವಾಗಿ ಸಮಯದಲ್ಲಿ ಓಡಾಟ ನಡೆಸಲಿದೆ.ಬಳಿಕ ಜನರ ಬೇಡಿಕೆ ತಕ್ಕಂತೆ ಸಮಯ ಬದಲಾವಣೆ ಮಾಡಲಾಗುವುದು.ಜನರು ಹೆಚ್ವಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಮೂಲಕ ಸರಕಾರಿ ಬಸ್ ನಿರಂತರವಾಗಿ ಓಡಾಟ ನಡೆಸುವಂತೆ ನೋಡಿಕೊಳ್ಳ ಬೇಕು .ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ,ವಿಕಲ ಚೇತನರಿಗೆ ಸಹಿತ ಅರ್ಹ ಫಲಾನುಭವಿಗಳಿಗೆ  ಬಸ್ ಪಾಸ್ ಸೌಲಭ್ಯವಿದೆ. ಕೆಎಸ್ ಆರ್ ಟಿಸಿ ನಿಲ್ದಾಣದಿಂದ ಕಂಕನಾಡಿ, ಬಜಾಲ್ ವರೆಗೆ ವ್ಯಾಪ್ತಿ ಹೊಂದಿದೆ ಎಂದರು.

ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ನೀರುಮಾರ್ಗ,ವಾಮಂಜೂರು ,ಮೂಡುಶೆಡ್ಡೆ ಸಹಿತ ಗ್ರಾಮಾಂತರ ಪ್ರದೇಶಗಳಲ್ಲಿ ಅಗತ್ಯವಿರುವ ಕಡೆ ನರ್ಮ್ ಬಸ್ ಓಡಿಸಲಾಗುದು ಎಂದು ಈ ಸಂದರ್ಭ ಶಾಸಕರು ನುಡಿದರು.
Landlinks-Bus
ಕೆಎಸ್ ಆರ್ಟಿಸಿ ಡಿಸಿ ಅರುಣ್ ಎಸ್.ಎನ್,ಡಿಟಿಒ ಎಚ್.ಆರ್.ಕಮಲ್ ಕುಮಾರ್, ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ನಿಕಟಪೂರ್ಪ ಕಾರ್ಪೊರೇಟರ್ ಶ್ರೀ ರಾಜೇಶ್ ಕೆ,ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಘವೇಂದ್ರ ಉಡುಪ ಮತ್ತು ಸ್ಥಳೀಯ ಪ್ರಮುಖರಾದ ನಾರಾಯಣ ಕಂಜರ್ಪಣೆ, ನಂದಕಿಶೋರ್ ಭಟ್,ಅರುಣ್ ಕುಮಾರ್,ಸಂಧ್ಯಾ ಶೆಟ್ಟಿ ಹಿರಿಯರಾದ ನಾಗಪ್ಪ ಪೂಜಾರಿ,ಜಯಪ್ರಕಾಶ್ ಹೆಗ್ಡೆ. ಕೃಷ್ಣಪ್ಪ ಹರಿಪದವು.ಪ್ರಕಾಶ್ ಉಡುಪ.ಕಿರಣ್ ಪೂಜಾರಿ. ವಸಂತ್ ಮಾಲೆಮಾರ್. ಚೇತನ್ ಸಾಲ್ಯಾನ್. ವಸಂತ್ ಮಾಲೆಮಾರ್. ಜೀತನ್ ದೇವಾಡಿಗ ಉಮೇಶ್ ಮಾಲೆಮಾರ್ ಉಪಸ್ಥಿತರಿದ್ದರು‌.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English