ಮೈಸೂರು : ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಸರ್ಕಾರದ ಪರವಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ ಅಧಿಕೃತ ಆಹ್ವಾನ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್ “ಎಸ್ ಎಂ ಕೃಷ್ಣ ಅವರದ್ದು ಸರ್ವಸಮ್ಮತ ಆಯ್ಕೆ. ಅವರೊಬ್ಬ ಸುಸಂಸ್ಕøತ ಮುತ್ಸದ್ದಿ ರಾಜಕಾರಣಿ. ಅವರದ್ದು ಆಕರ್ಷಕ ವ್ಯಕ್ತಿತ್ವ. ರಾಜಕಾರಣದಲ್ಲಿ ಅತ್ಯಂತ ಶ್ರೇಷ್ಠ ಚಿಂತನೆ ಅಳವಡಿಸಿಕೊಂಡು, ಎಲ್ಲರಿಗೂ ಮಾದರಿಯಾದವರು. “ದಿ ಸ್ಟೇಟ್ಸ್ ಮನ್” ಅಂತ ಯಾರಿಗಾದರೂ ಹೇಳಬಹುದಾದರೆ ಇವರಿಗೆ ಮಾತ್ರ. ಕರ್ನಾಟಕದ ಅಭಿವೃದ್ಧಿಯಲ್ಲಿ ಹಲವು ಕೊಡುಗೆಗಳನ್ನು ಕೊಟ್ಟವರು. ಅವರನ್ನು ನಾಡಹಬ್ಬದ ಉದ್ಘಾಟನೆ ಗೆ ಆಹ್ವಾನಿಸಲು ಬಹಳ ಸಂತೋಷವಾಗುತ್ತಿದೆ” ಎಂದರು.
“ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ನನಗೆ ಮೈಸೂರು ಜಿಲ್ಲಾ ಉಸ್ತುವಾರಿ ಎಸ್ ಟಿ ಸೋಮಶೇಖರ್, ಸಂಸದರು ಹಾಗೂ ಉತ್ಸವ ಸಮಿತಿಯವರು ಬಂದು ಆಮಂತ್ರಿಸಿದ್ದಾರೆ. ಆಮಂತ್ರಣವನ್ನ ಸ್ವೀಕಾರ ಮಾಡಿದ್ದೀವಿ. ದಸರಾ ಉದ್ಘಾಟನೆಗೆ ನಾವೆಲ್ಲರೂ ತೆರಳುತ್ತೇವೆ” ಎಂದು ಹೇಳಿದರು.
Click this button or press Ctrl+G to toggle between Kannada and English