ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಪರಿಸರ ಕಾಳಜಿಯನ್ನು ಮೂಡಿಸುವ ಪ್ರಯತ್ನ ನಡೆಯಬೇಕು : ಮೋಹನದಾಸ ಸ್ವಾಮೀಜಿ

11:33 PM, Sunday, October 3rd, 2021
Share
1 Star2 Stars3 Stars4 Stars5 Stars
(No Ratings Yet)
Loading...

Manila Sreeಧರ್ಮಸ್ಥಳ  : ಭಜನಾ ಮಂಡಳಿಯ ಸದಸ್ಯರು ತಮ್ಮ ತಮ್ಮ ಪ್ರದೇಶದ ಅಭಿವೃದ್ಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದಕ್ಕಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಎಂದು  ಅತ್ಯಾವಶ್ಯಕ ಎಂದು ಶ್ರೀ ಧಾಮ ಮಾಣಿಲ ಸೇವಾಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಮಾತನಾಡಿದರು.

ಅವರು  ಧರ್ಮಸ್ಥಳದಲ್ಲಿ  ಭಜನಾ ತರಬೇತಿ ಕಮ್ಮಟದ ಎರಡನೇ ದಿನದಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಭಜನಾರ್ಥಿಗಳು ಧಾರ್ಮಿಕವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಸಾಮಾಜಿಕವಾಗಿ, ಪರಿಸರ ರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಭೂಮಿಗೆ ನೀರಿಂಗಿಸುವ ಕೆಲಸ ಇಂದು ಆಗಬೇಕು. ಅಲ್ಲದೇ ಮಕ್ಕಳನ್ನು ತಮ್ಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅವರಲ್ಲಿ ಧಾರ್ಮಿಕ ಪ್ರಜ್ಞೆ, ಪರಿಸರ ಕಾಳಜಿಯನ್ನು ಮೂಡಿಸುವ ಪ್ರಯತ್ನವಿರಬೇಕು. ನಮ್ಮಲ್ಲಿ ಭಜನಾ ಸಾಹಿತ್ಯವನ್ನು ಅರ್ಥೈಸಿಕೊಂಡು ಅರ್ಥಪೂರ್ಣವಾಗಿ ಭಾವಪೂರ್ಣವಾಗಿ ಭಗವಂತನಲ್ಲಿ ಏಕತಾನತೆಯಿಂದ ತಲ್ಲೀನರಾದರೆ ಮನಸ್ಸು ಮತ್ತು ಹೃದಯ ಆನಂದಗೊಳ್ಳುತ್ತದೆ ಮಂಡಳಿಯಲ್ಲಿ ಭಜನೆಗೆ ಪ್ರಾಶಸ್ತ್ಯವಿರಬೇಕು ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English