ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು

9:57 PM, Monday, October 4th, 2021
Share
1 Star2 Stars3 Stars4 Stars5 Stars
(No Ratings Yet)
Loading...

Shark Fishಮಲ್ಪೆ :  ಅಪರೂಪದ ಹಾಗೂ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ಮಲ್ಪೆ ಬಂದರಿನಿಂದ ಸುಮಾರು 20 ನಾಟೇಕಲ್ ದೂರದಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಬಿದ್ದಿದೆ.

ಅಕ್ಕಪಕ್ಕ ಬೆನ್ನ ಮೇಲೆ ಅಗಲ ರೆಕ್ಕೆಯಿರುವ ಈ ಮೀನು ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟಿನಲ್ಲಿನ ಮೀನುಗಾರರು ಬೀಸಿದ ಬಲೆಗೆ ಬಿದ್ದಿದೆ. ಅಂಜಲ್, ಬಂಗುಡೆ ಮೀನಿನ ಜೊತೆಗೆ ಈ ಮೀನು ಬಿದ್ದಿದೆ. ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಹಾಗೂ ಹೆಲಿಕಾಪ್ಟರ್ ಫಿಶ್ ಎಂಬುದಾಗಿ ಕರೆಯುತ್ತಾರೆ. ಈ ಮೀನು ಸುಮಾರು 84 ಕೆ.ಜಿ. ತೂಗುತ್ತಿತ್ತು.

ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ಈ ಮೀನಿನ ಮಾಂಸವನ್ನು ಖರೀದಿ ಮಾಡುತ್ತಾರೆ. ಈ ಮೀನನ್ನು ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ರವಾನೆ ಮಾಡ ಲಾಯಿತು.  ಕರ್ನಾಟಕದಲ್ಲಿ ಈ ಮೀನು ಹೆಚ್ಚಾಗಿ ತಿನ್ನುವುದಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.

ಸಮುದ್ರದಲ್ಲಿ ಎಲ್ಲ ಕಡೆ ಹರಡುಕೊಂಡಿರುವ ಈ ಮೀನು ಮೀನುಗಾರರ ಬಲೆಗೆ ಸಿಗುವುದು ಅಪರೂಪ. ಹವಳ ಬಂಡೆಗಳ ಮಧ್ಯೆ ಇವು ವಾಸಿಸುತ್ತದೆ. 90 ಮೀಟರ್ ಆಳದವರೆಗಿನ ಸಮುದ್ರದಲ್ಲಿ ಇದು ಬದುಕುತ್ತದೆ. ಕೆಲವೊಂದು ಬಾರಿ ತೀರಕ್ಕೂ ಬರುತ್ತದೆ. 2.5 ಮೀಟರ್ಗೂ ಅಧಿಕ ಉದ್ದ ಇರುತ್ತದೆ. ಸುಮಾರು 135 ಕೆ.ಜಿ.ವರೆಗೆ ತೂಗುತ್ತದೆ. ಈ ಮೀನನ್ನು ಭಾರತದಲ್ಲಿ ತಿನ್ನುತ್ತಾರೆ. ‘ಅತ್ಯಂತ ಅಪರೂಪವಾಗಿರುವ ಈ ಮೀನು ಅಳಿವಿನಂಚಿನಲ್ಲಿರುವ ಪ್ರಬೇಧಕ್ಕೆ ಸೇರಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English