ಮಂಗಳೂರು : ವೈಷ್ಣವಿ ಕಾರ್ಗೋ ಪ್ರೈ ಲಿಮಿಟೆಡ್ ಬಳಿ ಮಾಲಕ ಚಾಲಕನ ಮದ್ಯೆ ಉಂಟಾದ ಗಲಾಟೆಯಲ್ಲಿ ತಲೆಗೆ ಗುಂಡೇಟು ತಗುಲಿದ್ದ ಹದಿನಾರರ ಹರೆಯದ ಬಾಲಕ ಚಿಕಿತ್ಸೆಗೆ ಸ್ಪಂಧಿಸದೆ ಮೆದುಳು ನಿಷ್ಕ್ರಿಯಗೊಂಡು ತುರ್ತು ನಿಗಾ ಘಟಕದಲ್ಲಿ ವೆಟಿಲೇಟರ್ ನಲ್ಲಿ ಉಸಿರು ನೀಡಲಾಗುತ್ತಿದೆ.
ಮಂಗಳವಾರ ತನ್ನ ಕಚೇರಿ ಮುಂಬಾಗದಲ್ಲಿಯೇ ನಾಲ್ಕು ಸಾವಿರ ರೂಪಾಯಿ ಕೊಡುವ ವಿಚಾರದಲ್ಲಿ ಫೈರಿಂಗ್ ನಡೆದಿದೆ, ಅದು ಮಿಸ್ ಫೈರ್ ಆಗಿ ಮಾಲಕರ ಮಗನ ಕಣ್ಣಿನ ಮೇಲೆಯೇ ತಗುಲಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ.
ವೈಷ್ಣವಿ ಕಾರ್ಗೋ ಪ್ರೈ ಲಿಮಿಟೆಡ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರ ಪತ್ನಿ ಬಳಿ ವೇತನ ಕೇಳಿಕೊಂಡು ಇಬ್ಬರು ಚಾಲಕರು ಗಲಾಟೆ ಶುರು ಮಾಡಿದ್ದರು. ಮುಂಗಡವಾಗಿ ಹತ್ತು ಸಾವಿರ ಕೊಟ್ಟಿದ್ದರೂ ಉಳಿದ ನಾಲ್ಕು ಸಾವಿರ ರೂಪಾಯಿಗೆ ಮಾಲಕರನ್ನು ಕೆಟ್ಟದ್ದಾಗಿ ನಿಂದಿಸಿದ್ದರು .
ಈ ಸಂದರ್ಭ ಕಚೇರಿಯ ಹಿಂಭಾಗದಲ್ಲಿರುವ ಮನೆಯಲ್ಲಿದ್ದ ಮಗನಿಗೆ ಕರೆ ಮಾಡಿದ ರಾಜೇಶ್ ಪ್ರಭು, ಪತ್ನಿ ತಂದೆಯೊಂದಿಗೆ ಬರಲು ತಿಳಿಸಿದ್ದರು. ಅದರಂತೆ ರಾಜೇಶ್ ಪ್ರಭು ತನ್ನ ಮಗ ಸುಧೀಂದ್ರನ ಜತೆ ಬಂದಿದ್ದು, ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಿ ಹೊಡೆದಾಟ ಆರಂಭವಾಗಿತ್ತು. ಈ ಸಂದರ್ಭ ರಾಜೇಶ್ ಪ್ರಭು ತನ್ನ ಬರ್ಮುಡಾ ಕಿಸೆಯಲ್ಲಿದ್ದ ಪಿಸ್ತೂಲ್ ನಿಂದ ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ಆಗ ಅವರ ಮಗನ ಎಡಗಣ್ಣಿನ ಹುಬ್ಬಿನ ಬಳಿ ಗುಂಡು ತಗುಲಿ ಗಂಭೀರ ಗಾಯವಾಗಿತ್ತು.ಗಂಭೀರವಾಗಿ ಗಾಯಗೊಂಡ ಸುಧೀಂದ್ರ ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರ ಮಿದುಳು ನಿಷ್ಕ್ರಿಯವಾಗಿದೆ.
ತನ್ನ ಮಗನ ಮೇಲೆಯೇ ಗುಂಡು ಹಾರಿಸಿದ ಉದ್ಯಮಿ ರಾಜೇಶ್ ಪ್ರಭು ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅದೇ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Click this button or press Ctrl+G to toggle between Kannada and English