ಅಕ್ಟೋಬರ್ 12 : ಮಂಗಳೂರು ತಾಲೂಕು ಚುಸಾಪದಿಂದ ಇರುಳು ಬಹುಭಾಷಾ ಕವಿಗೋಷ್ಠಿ

6:02 PM, Saturday, October 9th, 2021
Share
1 Star2 Stars3 Stars4 Stars5 Stars
(No Ratings Yet)
Loading...

JF D Souzaಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಕ್ಟೋಬರ್ 12, ಮಂಗಳವಾರ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿಯವರೆಗೆ ಕ್ಲಬ್ ಹೌಸ್ ನಲ್ಲಿ ಇರುಳು ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ. ಭಾರತ, ಅಮೇರಿಕಾ, ದುಬೈಗಳಿಂದ ಕವಿಗಳು ಭಾಗವಹಿಸುತ್ತಿದ್ದು ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ, ಬ್ಯಾರಿ,ಕೊಡವ, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಕವನ ವಾಚನ ನಡೆಯಲಿದೆ.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಜೆ.ಎಫ್ ಡಿಸೋಜಾ ಅವರು ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ, ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಉಪಸ್ಥಿತರಿರುವರು.

ರಶ್ಮಿ ಸನಿಲ್, ರೇಖಾ ಸುದೇಶ್ ರಾವ್,ಡಾ.ಅರ್ಚನಾ ಎನ್ ಪಾಟೀಲ ಹಾವೇರಿ,ಡಾ.ಸುರೇಶ್ ನೆಗಳಗುಳಿ,ಹಿತೇಶ್ ಕುಮಾರ್ ಎ,ಸುರಭಿ ಶಿವಮೊಗ್ಗ,ಆಕೃತಿ ಐ ಎಸ್ ಭಟ್,ಪ್ರೇಮ್,ಅರ್ಚನಾ ಎಂ ಕುಂಪಲ,ಗುಣಾಜೆ ರಾಮಚಂದ್ರ ಭಟ್,ಸುಶೀಲ ಕೆ ಪದ್ಯಾಣ,ವೆಂಕಟ ಭಟ್ ಎಡನೀರು, ಫಣಿಶ್ರೀ ನಾರಾಯಣನ್ ಅಮೆರಿಕಾ,ನಾರಾಯಣ ನಾಯ್ಕ ಕುದುಕೋಳಿ,ಪ್ರಕಾಶ ಎಲ್ಲಪ್ಪ ಕೊಪ್ಪದ,ವಾಣಿ ಲೋಕಯ್ಯ,ಅಸುಂತ ಡಿಸೋಜಾ,ವಿದ್ಯಾಶ್ರೀ ಅಡೂರು,ಸುಪ್ರಿಯ ಮಂಗಳೂರು,ದೀಪಾಲಿ ಸಾಮಂತ,ಗೀತಾ ಲಕ್ಷ್ಮೀಶ್ ಮಂಗಳೂರು,ವೀಣಾ ಗಣಪತಿ ಹೆಗಡೆ,ಸೌಮ್ಯ ಆರ್ ಶೆಟ್ಟಿ,ರೇಮಂಡ್ ಡಿಕುನಾ,ರತ್ನ ಕೆ ಭಟ್ ತಲಂಜೇರಿ,ಪದ್ಮಶ್ರೀ ಪ್ರಶಾಂತ್ ಬೆಂಗಳೂರು,ಅರುಂಧತಿ ರಾವ್,ನಳಿನಾಕ್ಷಿ ಉದಯರಾಜ್,ಮಾನಸ ಪ್ರವೀಣ್ ಭಟ್ ಮೂಡಬಿದ್ರಿ,ಜನಾರ್ದನ ದುರ್ಗಾ,ಲಕ್ಷ್ಮೀ ವಿ ಭಟ್ ವಿಘ್ನೇಶ್ ಭಿಡೆ,ಅಶೋಕ್ ಎನ್ ಕಡೇ ಶಿವಾಲಯ, ಸಂಧ್ಯಾ ನವೀನ್ ಮೂಡುಬೆಳ್ಳೆ,ಮಂಜುಶ್ರೀ ಯನ್. ನಲ್ಕ ,ಡಾ.ಕೇಶವರಾಜ್ ಅಮೆರಿಕಾ,ಸುಶೀಲಾ ಎಸ್ ಎನ್ ಭಟ್,ಬದ್ರುದ್ದೀನ್ ಕೂಳೂರು, ಬಸವರಾಜ್ ಚೌಡ್ಕಿ ಕೊಪ್ಪಳ, ಕುಸುಮ್ ಸಾಲಿಯನ್ ಪುಣೆ,ರೇಖಾ ನಾರಾಯಣ್ ಪಕ್ಷಿಕೆರೆ, ಕುಮುದಾ ಶೆಟ್ಟಿ ಮುಂಬೈ,ವಿಜಯಲಕ್ಷ್ಮೀ ಕಟೀಲು,ಅರುಣಾ ನಾಗರಾಜ್,ಲತೀಶ್ ಎಂ ಸಂಕೊಳಿಗೆ,ನಿರ್ಮಲ ಶೇಷಪ್ಪ ಖಂಡಿಗೆ,ಉಮೇಶ್ ಸಿರಿಯ,ದ್ಯಾವಪ್ಪ ಎಂ. ಕಾರವಾರ,ಮಂಜುಳಾ ರಾವ್, ವಾಷಿಂಗ್ಟನ್,ಆಶಾ ಯಮಕನಮರಡಿ ಬೆಳಗಾವಿ ವಿಜಯಲಕ್ಷ್ಮೀ ಎಸ್ ಮೈಸೂರು ,ಯಶೋಧ ಭಟ್ಟ ದುಬೈ, ಮುದ್ದು ಮೂಡುಬೆಳ್ಳೆ,ಶರಣ್ಯ ಪಡುಪಣಂಬೂರು,ಆನಂದ ಹಕ್ಕೆನ್ನವರ ಬೆಳಗಾವಿ ಮೊದಲಾದವರು ಕವಿಗಳಾಗಿ ಭಾಗವಹಿಸುವರು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English