ಮಂಗಳೂರು : ಮೈಸೂರು ವಿಭಾಗದ ಸಕಲೇಶಪುರ – ಸುಬ್ರಹ್ಮಣ್ಯ ನಡುವೆ ಶುಕ್ರವಾರ ಬೆಳಗ್ಗೆ ಯಶವಂತಪುರ – ಕಣ್ಣೂರು ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ಆ ಮಾರ್ಗದ ಮೂಲಕ ಜನವರಿ 4 ಮತ್ತು 5ರಂದು ಸಂಚರಿಸಬೇಕಾದ ಎಲ್ಲಾ ರೈಲುಗಳನ್ನು ರದ್ದು ಪಡಿಸಲಾಗಿದೆ. ಮುಂಜಾನೆ 5:30ಕ್ಕೆ ಸಕಲೇಶಪುರ ಬಳಿ ಕಡಗರವಳ್ಳಿ-ಎಡಕುಮೇರಿ ನಡುವೆ ರೈಲಿನ ಮುಂಭಾಗದ ಎಂಜಿನ್ ಸಹಿತ ಎರಡು ಬೋಗಿ ಹಳಿ ತಪ್ಪಿದ್ದು, ಸ್ಪಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಪಘಾತದ ಪರಿಣಾಮ ಸಂಚಾರೀ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದೆ.
ಸಕಲೇಶಪುರ ದಾಟಿ ಎಡಕುಮೇರಿಯಿಂದ 7 ಕಿ.ಮೀ. ಹಿಂದೆ ಇರುವ ಸೇತುವೆಯಲ್ಲಿ ಘಟನೆ ಸಂಭವಿಸಿದ್ದು, ಸಕಲೇಶಪುರದಿಂದ ಎಂಜಿನ್ ತರಿಸಿ ಬಿದ್ದ ಬೋಗಿ ಹಾಗೂ ಎಂಜಿನ್‌ನ್ನು ಬೇರ್ಪಡಿಸಿ, ರೈಲನ್ನು ಮತ್ತೆ ಸಕಲೇಶಪುರ ನಿಲ್ದಾಣಕ್ಕೆ ಹಿಂದಕ್ಕೆ ತರಿಸಿ ಪ್ರಯಾಣಿಕರನ್ನು ಬಸ್ ಮೂಲಕ ಪ್ರಯಾಣಿಸಲು ವ್ಯವಸ್ಥೆ ಮಾಡಲಾಯಿತು.
ಹಳಿ ತಪ್ಪಿದ ಸ್ಥಳದಿಂದ ಮುಂದೆ ಘಟನೆ ಸಂಭವಿಸಿದ್ದರೆ ರೈಲು ಪ್ರಪಾತಕ್ಕೆ ಬಿದ್ದು ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ತಿಳಿದುಬಂದಿದೆ. ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ರೈಲು ಪ್ರಯಾಣ ಮುಂದುವರಿಯಲಿದೆ.
Click this button or press Ctrl+G to toggle between Kannada and English