ಬಂಟ್ವಾಳ : ಯುವತಿಯೊಬ್ಬಳು ವಿಟ್ಲ ದೇವಸ್ಥಾನ ಸಮೀಪ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸ್ಥಳೀಯ ನೆತ್ರಕೆರೆ ನಿವಾಸಿ ನಿಶ್ಮಿತಾ (22) ಸಾವನ್ನಪ್ಪಿದವರು.
ನಿಶ್ಮಿತಾ ಸ್ಥಳೀಯ ಡೆಂಟಲ್ ಕ್ಲಿನಿಕ್ ಕೆಲಸ ನಿರ್ವಹಿಸುತ್ತಿದ್ದು ಭಾನುವಾರ ಸಂಜೆಯಿಂದ ಕಾಣೆಯಾಗಿದ್ದರು. ಈಕೆ ಡೆತ್ ನೋಟ್ ಮತ್ತು ಮೊಬೈಲ್ ಅನ್ನು ಕೆರೆ ಬದಿಯಲ್ಲಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.11ರಂದು ಮುಂಜಾನೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಡೆತ್ನೋಟ್ನಲ್ಲಿ ಕೆಲವರ ಹೆಸರು ಉಲ್ಲೇಖವಿದೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.
Click this button or press Ctrl+G to toggle between Kannada and English