ಮೀನಿನ ಖಾದ್ಯ ಕಿರು ಉದ್ದಿಮೆಗಳಿಗೆ 10 ಲಕ್ಷ ಸಹಾಯಧನ

9:14 PM, Monday, October 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

Fish chatniಮಂಗಳೂರು : ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಕಾರ್ಯಕ್ರಮದಡಿ ವೈಯಕ್ತಿಕ ಕಿರು ಉದ್ದಿಮೆಗಳಿಗೆ 10 ಲಕ್ಷ ರೂ.ಗಳ ಸಹಾಯಧನ ಪಡೆಯಲು ಅವಕಾಶವಿದೆ.

ಯೋಜನೆಯಡಿ ಮೀನಿನ ಖಾದ್ಯಗಳಾದ ಚಟ್ನಿ ಪುಡಿ, ಉಪ್ಪಿನಕಾಯಿ, ಚಕ್ಕುಲಿ, ಸೆಂಡಿಗೆ, ಚಿಪ್ಸ್, ರೋಟಿ, ಇತ್ಯಾದಿಗಳನ್ನು ತಯಾರಿಸುವುದು, ಮೀನನ್ನು ಭಾಗಗಳಾಗಿ ಮಾಡಿ ಫಿಲ್ಲೆಟ್ಸ, ಸ್ಟೀಕ್ಸ್ ಮಾದರಿಯಲ್ಲಿ ಶೀತಲೀಕರಿಸಿ, ಮಾರಾಟ ಮಾಡುವುದು, ಮೀನನ್ನು ಉಪ್ಪು ಹಾಕಿ ಅಥವಾ ಉಪ್ಪಿಲ್ಲದೇ ಆಧುನಿಕ ರೀತಿಯಲ್ಲಿ ಒಣಗಿಸುವುದು ಹಾಗೂ ಇವುಗಳನ್ನು ಆಕರ್ಷಕ ರೀತಿಯಲ್ಲಿ ಪ್ಯಾಕ್ ಮಾಡಿ, ಲೇಬಲ್ ಮಾಡಿ ಮಾರಾಟ ಮಾಡಬಹುದಾಗಿದೆ.

ಆಸಕ್ತರು ಜಿಲ್ಲಾ ಪಂಚಾಯತ್‍ನಲ್ಲಿರುವ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English