ಮಾಸಾವಧಿಯ ಯೋಗ ಶಿಬಿರ ಸಮಾರೋಪ

6:34 PM, Tuesday, October 19th, 2021
Share
1 Star2 Stars3 Stars4 Stars5 Stars
(No Ratings Yet)
Loading...

Yogaಮಂಗಳೂರು : ಜವಾಹರ್ ನವೋದಯ ವಿದ್ಯಾಲಯ, ಮುಡಿಪು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗಗಳು ಜಂಟಿಯಾಗಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ತಿಂಗಳಾವಧಿಯ ಯೋಗ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿ ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಜೀವನದಲ್ಲಿ ಉನ್ನತ ಸ್ಥಾನ ತಲುಪಲು ಸೂಕ್ತ ಮನೋಭಾವ, ಶಿಸ್ತುಬದ್ಧ ಜೀವನ ಅಗತ್ಯ. ಇದನ್ನು ಸಾಧಿಸಲು ಯೋಗ ಸಹಕಾರಿ, ಎಂದರು. ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಕೆ ಕೃಷ್ಣ ಶರ್ಮ, ಯೋಗದಿಂದ ಧನಾತ್ಮಕ ಶಕ್ತಿ ಗಳಿಸಲು ಸಾಧ್ಯವಿದೆ, ಎಂದರು. ವಿದ್ಯಾಲಯದ ಪ್ರಾಂಶುಪಾಲ ಪಿ. ರಾಜೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಶಿಬಿರ ಸಂಯೋಜಿಸಿದ, ಯೋಗ ಶಿಕ್ಷಕ ಸಂದೀಪ್ ರಜಕ್ ಶಿಬಿರದ ಬಗ್ಗೆ ಸಂಕ್ಷಿಪ್ತ ವರದಿ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಸಂಪನ್ಮೂಲ ಸಾಮಗ್ರಿಗಳನ್ನು ಮತ್ತು ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಉಪ ಪ್ರಾಂಶುಪಾಲೆ ರೇಖಾ ಅಶೋಕ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ಪ ಬಿ.ಎ ವಂದನಾರ್ಪಣೆಗೈದರು. ಭೌತಶಾಸ್ತ್ರ ಉಪನ್ಯಾಸಕ ರಾಘವನ್ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English