ಮಂಗಳೂರು : ಬಜರಂಗದಳದವರು ಕೇಸರಿ ಬಟ್ಟೆ ಹಾಕಿ ಅನೈತಿಕ ವರ್ತನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಕೇಸರಿ ಬಟ್ಟೆ ಹಾಕಿದ ಬಜರಂಗದಳ ಕಾರ್ಯಕರ್ತರು ಸುಲಿಗೆ ಮಾಡುವವರು, ಸಮಾಜದ್ರೋಹಿಗಳು ಎಂದು ಇತ್ತೀಚೆಗೆ ಐವನ್ ಹೇಳಿಕೆ ನೀಡಿದ್ದರೆನ್ನಲಾಗಿದೆ. ಆ ಹೇಳಿಕೆಯನ್ನು ಖಂಡಿಸಿ ಬಜರಂಗದಳದಿಂದ ಐವನ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪಾಂಡೇಶ್ವರ ಪೊಲೀಸರು ತಡೆದರು.
ಐವನ್ ಡಿಸೋಜ ಹಾವೇರಿ ಜಿಲ್ಲೆಯ ಹಾನಗಲ್ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ ದಾಳಿ ವೇಳೆ ಅವರು ಮನೆಯಲ್ಲಿ ಇರಲಿಲ್ಲ.
ಮುತ್ತಿಗೆಗೆ ಯತ್ನಿಸಿದ ಬಜರಂಗದಳದ ಎಂಟು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English