ಮಂಗಳೂರು, : ಮಂಗಳೂರಿನ ಜಾಹೀರಾತು ಸಂಸ್ಥೆ ಮ್ಯಾಗ್ನಂ ಇಂಟರ್‌ಗ್ರಾಫಿಕ್ಸ್‌ನ ಚೇಯರ್‍ಮೆನ್, ರಾಜ್ಯ ಬಿಜೆಪಿ ಯುವ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಸುಧೀರ್ ಘಾಟೆ(64) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. 1992 ರಲ್ಲಿ ಮ್ಯಾಗ್ನಂ ಇಂಟರ್‌ಗ್ರಾಫಿಕ್ಸ್ ಜಾಹೀರಾತು ಸಂಸ್ಥೆಯನ್ನು ಆರಂಭಿಸಿದ ಇವರು ದೇಶದಾದ್ಯಂತ ೧೮ ಶಾಖೆಗಳನ್ನು ತೆರೆದು ಜಾಹೀರಾತು ಕ್ಷೇತ್ರದಲ್ಲಿ ದಿಗ್ಗಜನಾಗಿ ರಾ?ಮಟ್ಟದಲ್ಲಿ ಹೆಸರು ವಾಸಿಯಾಗಿದ್ದರು. ಸಾವಿರಾರು ಮಂದಿಗೆ ಉದ್ಯೋಗದಾತರಾಗಿ ಸುಮಾರು 500ಕ್ಕಿಂತಲೂ ಹೆಚ್ಚು ಮಂದಿ ನುರಿತ ಕೆಲಸಗಾರರನ್ನು ತನ್ನ ಗರಡಿಯಲ್ಲಿ ಪಳಗಿಸಿದ್ದರು.
1995 ರಲ್ಲಿ ಈಗಿನ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಾರತೀಯ ಜನತಾ ಪಾರ್ಟಿಯ ರಾಜ್ಯ ಯುವ ಮೋರ್ಚಾದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು ಮತ್ತು ಪಿ.ಆರ್.ಎಸ್.ಐನ ಅಧ್ಯಕ್ಷರಾಗಿ ತಮ್ಮ ಸೇವೆ ಸಲ್ಲಿಸಿದ್ದರು.
ರಾಷ್ಟ್ರ ಮಟ್ಟದ ನಾಯಕರುಗಳಾದ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ್ ಜೋಷಿ ಮತ್ತು ಶ್ರೀ ಎಲ್.ಕೆ ಅಡ್ವಾಣಿರವರಂತಹ ಹಿರಿಯರ ಒಡನಾಟದಲ್ಲಿ ಇದ್ದ ಸುಧೀರ್ ಘಾಟೆಯವರು, ಬಿಎಮ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಆಗಿದ್ದ ದಿವಂಗತ ಪ್ರಭಾಕರ್ ಘಾಟೆ ಮತ್ತು ಶಾರದಾ ಘಾಟೆ ದಂಪತಿಗಳ ಪುತ್ರರಾಗಿದ್ದರು. ಮೃತರು ಕರ್ಣಾಟಕ ಬ್ಯಾಂಕಿನ ಡಿಜಿಎಂ ಆಗಿರುವ ಪತ್ನಿ ಶ್ರೀಮತಿ ಸುಮನಾ ಘಾಟೆ, ಪುತ್ರಿ, ಪುತ್ರ, ಅಳಿಯ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂಸದರಾದ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ದಕ ಜಿಲ್ಲಾಧ್ಯಕ್ಷರಾದ ಸುದರ್ಶನ್, ವಿನಯ್ ಹೆಗ್ಡೆ, ಮೋಹನ್ ಆಳ್ವ, ದಾ.ಮ. ರವೀಂದ್ರ, ಮೂಡಾ ಅಧ್ಯಕ್ಷರಾದ ರವಿಶಂಕರ್ ಮಿಜಾರು, ಕರ್ಣಾಟಕ ಬ್ಯಾಂಕಿನ ಎಂಡಿ ಮಹಾಬಲೇಶ್ವರ ಭಟ್, ಸಂಜೀವ ಮಠಂದೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್, ಶಾಸಕರಾದ ಭರತ್ ವೈ. ಶೆಟ್ಟಿ, ಮಾಜಿ ಮೇಯರ್‌ಗಳಾದ ಭಾಸ್ಕರ್ ಮೊಲಿ, ಪ್ರವೀಣ್, ತರ್ಜನಿ ಕಮ್ಯನಿಕೇಶನ್ ಪ್ರೈ.ಲಿನ ಎಂಡಿ ಸಂಜಯ್ ಪ್ರಭು, ಆರ್‌ಎಸ್‌ಎಸ್‌ನ ಗೋಪಾಲ್ ಚೆಟ್ಟಿಯಾರ್, ಸುನಿಲ್ ಆಚಾರ್, ಮಾಜಿ ಶಾಸಕರುಗಳಾದ ಅಣ್ಣಾ ವಿನಯಚಂದಪ್ರ್ರ, ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ ಮತ್ತು ನಿಲೇಶ್ ಕುಮಾರ್, ಸುಧೀರ್ ಶೆಟ್ಟಿ, ಪ್ರದೀಪ ಕುಮಾರ್ ಕಲ್ಕೂರ, ಗೌರವ್ ಹೆಗ್ಡೆ, ಎಸ್.ಎಂ. ಕಾಮತ್, ಬಿ.ಎಂ.ಎಸ್‌ನ ವಿಶ್ವನಾಥ ಶೆಟ್ಟಿ, ಧರ್ಮರಾಜ್, ಮೋತಿಶ್ಯಾಂನ ಹರ್ಷದ್ ಮುಂತಾದ ಗಣ್ಯರು ಅಂತಿಮ ದರ್ಶನ ಪಡೆದರು.
ಆರ್‌ಎಸ್‌ಎಸ್‌ನ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಕಾರ್ಯವಾಹ ಮುಕುಂದ್, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೆಯೋಧರ್, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇಯರ್‍ಮೆನ್ ವಿಜಯ್ ಸಂಕೇಶ್ವರ, ಸಂಘ ಚಾಲಕ ವಾಮನ್ ಶೆಣೈ, ಎಂ.ಬಿ. ಪುರಾಣಿಕ್, ಮಂತ್ರಿಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಎಸ್. ಅಂಗಾರ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಶಾಸಕರುಗಳಾದ ವೇದವ್ಯಾಸ ಕಾಮತ್, ರಾಜೇಶ ನಾಯ್ಕ್, ಉಮಾನಾಥ ಕೋಟ್ಯಾನ್, ಸಂಧ್ಯಾ ಪೈ, ಕೃ? ಜೆ. ಪಾಲೆಮಾರ್ ಸಂತಾಪ ಸೂಚಿಸಿದ್ದಾರೆ.
ಇಂದು ಸಂಜೆ 3 ಗಂಟೆಗೆ ಮೃತರ ಸ್ವಗೃಹ ನಗರದ ಕೊಡಿಯಾಲ್ ಬೈಲ್ ನಲ್ಲಿ ಅಂತಿಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
Click this button or press Ctrl+G to toggle between Kannada and English