ಕಾರ್ಪೊರೇಟರ್ ಕೊಲೆ ಮಾಡಲು ಸಂಚು, , ರೌಡಿಶೀಟರ್ ಪಿಂಕಿ ನವಾಜ್ ಸೇರಿದಂತೆ ಐವರ ಬಂಧನ

11:08 PM, Friday, October 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

pinki Nawazಮಂಗಳೂರು: ಸುರತ್ಕಲ್ ಬಸ್ ನಿಲ್ದಾಣಕ್ಕೆ ದಿ.ದೀಪಕ್ ರಾವ್ ಹೆಸರಿಟ್ಟ ಬಳಿಕ  ದೀಪಕ್ ರಾವ್ ಕೊಲೆ ಪ್ರಕರಣದ ಸಾಕ್ಷಿ ಆಗಿರುವ ಸ್ಥಳೀಯ ಕಾರ್ಪೊರೇಟರ್ ಒಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ ಆಡಿಯೋವೊಂದು ವೈರಲ್ ಆದ ಬಳಿಕ, ರೌಡಿಶೀಟರ್ ಪಿಂಕಿ ನವಾಜ್ ಸೇರಿದಂತೆ ಐವರನ್ನ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಪಿಂಕಿ ನವಾಜ್ ಬಂಧಿತನಾಗಿದ್ದ. ಜಾಮಿನಿನ ಮೇಲೆ ಬಿಡುಗಡೆಗೊಂಡಿರುವ ಪಿಂಕಿ ನವಾಜ್ ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ಇತ್ತೀಚೆಗೆ ವೈರಲ್ ಆದ ಆಡಿಯೋದಲ್ಲಿ ಬಯಲಾಗಿದೆ.

ಈ ತಂಡ ದೀಪಕ್ ರಾವ್ ಹತ್ಯೆ ಪ್ರಕರಣದ ಸಾಕ್ಷಿಯಾಗಿರುವ ಕಾರ್ಪೊರೇಟರ್ ಹತ್ಯೆ ಮಾಡಲು ವಾಟ್ಸ್ಆ್ಯಪ್ ಗ್ರೂಪ್ ವೊಂದರಲ್ಲಿ ಆಡಿಯೋ ಸಂದೇಶ ಮೂಲಕ ಸಂಚು ರೂಪಿಸಿತ್ತು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ದಿ.ದೀಪಕ್ ರಾವ್ ಹೆಸರಿಟ್ಟಿದ್ದು, ಸ್ಥಳೀಯ ಶಾಸಕ ಭರತ್ ಶೆಟ್ಟಿ ಬಸ್ ನಿಲ್ದಾಣದ ಉದ್ಘಾಟನೆ ಮಾಡಿದ್ದರು.

ಈ ವಿಚಾರ ಈ ತಂಡದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇದೇ ವಿಚಾರ ಗಲಭೆ ಎಬ್ಬಿಸಿಸಲು ಇವರು ಸಂಚನ್ನು ರೂಪಿಸಿದ್ದರು. ಈ ವಾಟ್ಸ್ಆ್ಯಪ್ ಆಡಿಯೋದ ಮಾತುಕತೆಯ ವಿಡಿಯೋ ವೈರಲ್ ಆದ ಬಳಿಕ ಮಂಗಳೂರು ನಗರ ಪೊಲೀಸರು ಐವರನ್ನ ಬಂಧಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English