ವಿಠಲ ಮಲೆಕುಡಿಯ ಹಾಗೂ ನಿಂಗಣ್ಣ ಮಲೆಕುಡಿಯ ನಿರ್ದೋಷಿ

7:30 PM, Saturday, October 23rd, 2021
Share
1 Star2 Stars3 Stars4 Stars5 Stars
(No Ratings Yet)
Loading...

Vittala Malekudiyaಮಂಗಳೂರು  : ವಿಠಲ ಮಲೆಕುಡಿಯ ಹಾಗೂ ನಿಂಗಣ್ಣ ಮಲೆಕುಡಿಯ ನಿರ್ದೋಷಿ ಎಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಒಂಬತ್ತು ವರ್ಷಗಳ ಹಿಂದೆ ಅವರನ್ನು ನಕ್ಸಲೈಟ್ ಎಂದು ಆರೋಪಿಸಿ ಯುಎಪಿಎ ಕಾಯ್ದೆ ಅಡಿ ದೇಶದ್ರೋಹ ಪ್ರಕರಣ ದಾಖಲಿಸಿತ್ತು.

ಡಿವೈಎಫ್ಐ ಸಂಘಟನೆ ವಿಠಲ ಮಲೆಕುಡಿಯ ಮತ್ತವನ ತಂದೆಯ ಪರವಾಗಿ ಆಗ ದೊಡ್ಡ ಹೋರಾಟ ಸಂಘಟಿಸಿತ್ತು‌ ಈಗಿನ ಕೇರಳ ಸ್ಪೀಕರ್ ಆಗ ಸಿಪಿಎಂ ಲೋಕಸಭಾ ಸದಸ್ಯರಾಗಿದ್ದ ಎಂಬಿ ರಾಜೇಶ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಜೈಲಿಗೆ ಭೇಟಿ ನೀಡಿ ವಿಠಲ ಮಲೆಕುಡಿಯ ಮತ್ತವರ ತಂದೆ ನಿಂಗಣ್ಣ ಮಲೆಕುಡಿಯರಿಗೆ ಧೈರ್ಯ ತುಂಬಿದ್ದರು. ಎಂ ಬಿ ರಾಜೇಶ್ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು‌. ಬೃಂದಾ ಕಾರಟ್ ಮುಖ್ಯಮಂತ್ರಿ ಸದಾನಂದ ಗೌಡ ಮನೆ ಮುಂದೆ ಧರಣಿ ಕೂತಿದ್ದರು.

ಅಂತಿಮವಾಗಿ ನ್ಯಾಯಾಲಯ ನ್ಯಾಯ ಒದಗಿಸಿದೆ. ಸರಕಾರಕ್ಕೆ ಮುಖಭಂಗವಾಗಿದೆ. ವಕೀಲ ದಿನೇಶ್ ಹೆಗ್ಡೆ ನ್ಯಾಯಾಲಯದಲ್ಲಿ ಉಚಿತವಾಗಿ ವಾದ ಮಂಡಿಸಿದ್ದರು. ಮಾಧ್ಯಮಗಳು ಅಂದು ನಮ್ಮ ಜೊತೆ ನಿಂತಿದ್ದವು. ಎಲ್ಲರಿಗೂ ಡಿವೈಎಫ್ಐ ರಾಜ್ಯ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ.

ಕುಲದೀಪ್ ನಯ್ಯರ್ ಬರೆದ ಭಗತ್ ಸಿಂಗ್ ಪುಸ್ತಕ, ಧರ್ಮಸ್ಥಳದ ಜಾತ್ರೆಯಲ್ಲಿ ಖರೀದಿಸಿದ್ದ ಆಟಿಕೆ ಬೈನಾಕುಲರ್, ನೂರು ಗ್ರಾಂ ಕಾಮತ್ ಕಾಫಿ ಪುಡಿ, ಕಾಲು ಕೆ ಜಿ ಸಕ್ಕರೆ, ಎರಡು ಸ್ಟೀಲ್ ತಟ್ಟೆಯನ್ನು ಇಟ್ಟು ಯುಎಪಿಎ ಕಾಯ್ದೆಯಡಿ ಆದಿವಾಸಿ ವಿದ್ಯಾರ್ಥಿಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬುನಾಧಿಸಲಾಗಿತ್ತು ಎಂದು ಮುನೀರ್ ಕಾಟಿಪಳ್ಳ ಸರಕಾರವನ್ನು ಟೀಕಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English