ಉಜಿರೆ: ವಿಶ್ವಹಿಂದೂ ಪರಿಷದ್ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಶನಿವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಬಹುಮುಖಿ ಸಮಾಜ ಸೇವೆಗಾಗಿ ಅಭಿನಂದಿಸಿ, ಗೌರವಿಸಿದರು.
ಬಳಿಕ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅನುಸೂಚಿತ ಜಾತಿಗಳ ಮೇಲೆ ಮತಾಂತರ ಪಿಡುಗು ವ್ಯಾಪಿಸಿದೆ. ಜೊತೆಗೆ ಲವ್ ಜಿಹಾದ್, ಬೆದರಿಕೆ ಹಾಗೂ ಭಯದ ವಾತಾವರಣ ಸೃಷ್ಟಿಸಿ ಮತಾಂತರ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ವಿಶ್ವ ಹಿಂದೂ ಪರಿಷದ್ ಗಂಭೀರ ಚಿಂತನೆ ನಡೆಸಿದೆ. ದೀಪಾವಳಿ ನಂತರ ಈ ಬಗ್ಯೆ ರಾಜ್ಯದ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು.
ಬಾಂಗ್ಲಾ ದೇಶದ ಘಟನೆಯನ್ನು ಖಂಡಿಸಿದ ಅವರು ಜನಸಾಮಾನ್ಯರ ಮೇಲಿನ ದಾಳಿ ಕ್ರೂರವಾಗಿದ್ದು ಇದರೊಂದಿಗೆ ಭಯೋತ್ಪಾದನೆಯೂ ಅಡಕವಾಗಿದೆ ಎಂದರು.
ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಸಾಧು-ಸಂತರ ಜೊತೆ ಸೇರಿ ಮುಂದೆ ಉಗ್ರ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘಟನಾ ಕಾರ್ಯದರ್ಶಿ ಬಸವರಾಜ್, ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಶರಣ್ ಪಂಪ್‌ವೆಲ್, ಮತ್ತು ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English