ವಿಜಯಪುರ : ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಹಿಂದೂ ಯುವಕನ ಹತ್ಯೆ ನಡೆದಿದ್ದು, ಯುವತಿಯ ಕುಟುಂಬದವರಾದ ಅಲ್ತಾಫ್ ಮತ್ತಿ ಇಸ್ಮೈಲ್ ಸೇರಿದಂತೆ ಎಂಟು ಜನರು ಕೊಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಮೃತಪಟ್ಟ ಯುವಕನನ್ನು ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ರವಿ ನಿಂಬರಗಿ (34) ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರಂದು ನಾಪತ್ತೆಯಾಗಿದ್ದ ರವಿ ಶವ ಹೊಲದ ಬಾವಿಯಲ್ಲಿ ಅಕ್ಟೋಬರ್ 23ರಂದು ಪತ್ತೆಯಾಗಿದೆ.
ಅಕ್ಟೋಬರ್ 21ರಂದು ದಿನಸಿ ತರಲು ಮನೆಯಿಂದ ಹೊರ ಹೋಗಿದ್ದ ರವಿ ನಿಂಬರಗಿ ನಾಪತ್ತೆಯಾಗಿದ್ದ. ರವಿ ಪ್ರೀತಿಸುತ್ತಿದ್ದ ಯುವತಿ 24 ವರ್ಷದ ಅಮ್ರಿನ್ ಪೊಲೀಸ್ ಸಹಾಯವಾಣಿಗೆ 112ಕ್ಕೆ ಕರೆ ಮಾಡಿದ್ದಳು.
ರವಿಯನ್ನು ಎತ್ತಿಕೊಂಡು ಹೋಗಿ ಹೊಡೆಯುತ್ತಿದ್ದಾರೆ. ಆತನ ಜೀವಕ್ಕೆ ಅಪಾಯವಿದೆ ಎಂದು ಸಹಾಯವಾಣಿಗೆ ಕರೆ ಮಾಡಿದಾಗ ಮಾಹಿತಿ ನೀಡಿದ್ದಳು. ಅಕ್ಟೋಬರ್ 23ರಂದು ರವಿ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆರೋಪಿಗಳು ವಿಚಾರಣೆ ವೇಳೆ ರವಿ ನಿಂಬರಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಮ್ರಿನ್ ಜೀವಕ್ಕೆ ಸಹ ಅಪಾಯವಿದ್ದು, ಆಕೆಗೆ ಸಾಂತ್ವನ ಕೇಂದ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹತ್ಯೆಯಲ್ಲಿ ಇನ್ನು ಯಾರು ಭಾಗಿಯಾಗಿದ್ದಾರೆ? ಎಂಬ ಮಾಹಿತಿ ಇನ್ನೂ ಸಿಗಬೇಕಿದೆ.
Click this button or press Ctrl+G to toggle between Kannada and English