ಮಂಗಳೂರು: ಮಂಗಳೂರಿನ ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ವಕೀಲರಾಗಿದ್ದ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ವಿದ್ಯಾರ್ಥಿನಿ ಗಂಭೀರ ಆರೋಪ ಮಾಡಿದ್ದಾಳೆ. ಇದೀಗ ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ರಾಜೇಶ್ ಭಟ್ ರಾತ್ರಿ ಎಂಟು ಗಂಟೆಯವರೆಗೂ ಕಚೇರಿಯಲ್ಲೇ ಕೆಲಸ ಮಾಡಲು ಹೇಳಿದ್ದರು. ರಾತ್ರಿ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸುತ್ತಿದ್ದರು. ಆದರೆ, ತಾನು ಆ ಮೆಸೇಜ್ಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ವಕೀಲನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಉತ್ತರ ಪ್ರದೇಶ ಮೂಲದ ಸಂತ್ರಸ್ತೆ ವಿದ್ಯಾರ್ಥಿನಿ, ಇದೀಗ ವಕೀಲ ತನ್ನ ಜತೆ ನಡೆದುಕೊಂಡ ರೀತಿಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾಳೆ.
ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ವಕೀಲರಾಗಿರುವ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈಗಾಗಲೇ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ರಾಜೇಶ್ ಭಟ್ ಅವರ ಕರಾಳ ಮುಖವನ್ನು ವಿದ್ಯಾರ್ಥಿನಿ ಬಿಚ್ಚಿಟ್ಟಿದ್ದಾಳೆ.
ರಾತ್ರಿ ಎಂಟು ಗಂಟೆಯವರೆಗೂ ಕಚೇರಿಯಲ್ಲೇ ಕೆಲಸ ಮಾಡಲು ಹೇಳಿದ್ದ. ಅಷ್ಟು ತಡ ಯಾಕೆ ಅಂತಾ ನಾನು ಪ್ರಶ್ನಿಸಿದ್ದೆ. ತಡ ಏನಿಲ್ಲ ಅಷ್ಟು ಹೊತ್ತು ಎಲ್ಲರೂ ಇರ್ತಾರೆ ಕೆಲಸ ಮಾಡು ಅಂತಾ ಹೇಳಿದ್ದ. ಅಲ್ಲದೆ, ರಾತ್ರಿ ಅಶ್ಲೀಲ ಮೆಸೇಜ್ಗಳನ್ನು ರಾಜೇಶ್ ಭಟ್ ಕಳುಹಿಸಿದ್ದ. ಆದರೆ, ನಾನು ಆ ಮೆಸೇಜ್ಗಳಿಗೆ ಪ್ರತಿಕ್ರಿಯಿಸಿರಲಿಲ್ಲ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
ಒಂದು ದಿನ ರಾತ್ರಿ ಎಂಟು ಗಂಟೆಯ ತನಕ ಕೆಲಸ ಮಾಡಿಸಿದ್ದ. ಆ ಸಮಯದಲ್ಲಿ ಕಚೇರಿಯಲ್ಲಿ ಯಾರೂ ಇರಲಿಲ್ಲ. ನನ್ನನ್ನು ಛೇಂಬರ್ಗೆ ಕರೆದು ಲೈಂಗಿಕ ಕಿರುಕುಳ ನೀಡಿದ. ಆ ಬಳಿಕ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ರಾಜೇಶ್ ಭಟ್ ಕಚೇರಿಯಲ್ಲಿ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಇಂಟರ್ನಶಿಪ್ ಮಾಡಲು ಬಂದಿದ್ದಳು. ಕಚೇರಿಯಲ್ಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆನ್ನಲಾಗಿದೆ. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆಂದು ಸಂತ್ರಸ್ತೆ ದೂರು ನೀಡಿದ್ದಾರೆ.
12 ಕ್ಕೂ ಹೆಚ್ಚು ಬ್ಯಾಂಕ್ಗಳಿಗೆ ರಾಜೇಶ್ ಭಟ್, ಕಾನೂನು ಸಲಹೆಗಾರರಾಗಿದ್ದಾರೆ. ಘಟನೆಯ ಬಳಿಕ ಸಂತ್ರಸ್ತೆಗೆ ಕರೆ ಮಾಡಿರುವ ರಾಜೇಶ್, ಕೆಲಸಕ್ಕೆ ಬರುವಂತೆ ಸಂತ್ರಸ್ತೆಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಗೊತ್ತಿಲ್ಲದೆ ತಪ್ಪು ಮಾಡಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ದಯವಿಟ್ಟು ಕಚೇರಿಗೆ ಬಾ ಎಂದು ಕಣ್ಣೀರಿಟ್ಟಿದ್ದಾರೆ.
ನಿಮ್ಮ ಮನೆಯಲ್ಲಿ ನಿಮಗೆ ಪತ್ನಿ ಇಲ್ಲವೆ. ನಿಮಗೆ ವಯಸ್ಸಾಗಿದೆ. ನಿಮ್ಮ ಮಗಳನ್ನು ಇದೇ ರಿತಿ ನೋಡುತ್ತೀರಾ ಎಂದು ಸಂತ್ರಸ್ತೆ ರಾಜೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ. ನನಗೆ ಯಾರು ಇಲ್ಲ ಅಂದುಕೊಂಡು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದೀರಿ. ನೀವು ಶ್ರೀಮಂತರು ಏನು ಬೇಕಾದರೂ ಮಾಡುತ್ತೀರಿ. ಅದನ್ನೆಲ್ಲ ನೋಡಿಕೊಂಡ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಇನ್ನು ಮುಂದಿನ ನನ್ನ ನಂಬರ್ಗೆ ಕರೆ ಮಾಡಬೇಡಿ ಎಂದು ರಾಜೇಶ್ರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಫೋನ್ ಸಂಪರ್ಕ ಕಡಿತಗೊಳಿಸಿದರು.
Click this button or press Ctrl+G to toggle between Kannada and English