ಕಾಂಗ್ರೆಸ್ ನವರು ಭಯಭೀತರಾಗಿ ಹತಾಶರಾಗಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿ ಆರೋಪ

11:06 PM, Sunday, October 24th, 2021
Share
1 Star2 Stars3 Stars4 Stars5 Stars
(No Ratings Yet)
Loading...

Sindgiಕನ್ನೋಳಿ: ಸಿಂದಗಿ: ಕಾಂಗ್ರೆಸ್ ಪಕ್ಷದ ನಾಯಕರಿಗೆ ಪ್ರಾಚರಕ್ಕೆ ವಿಷಯಗಳೇ ಸಿಗುತ್ತಿಲ್ಲ. ಸೋತಮೇಲೆ ನೀಡುವಂತಹ ಹೇಳಿಕೆಗಳನ್ನು ಚುನಾವಣಾ ಆರಂಭದಲ್ಲೇ ನೀಡುತ್ತಿದೆ.‌ ಕಾಂಗ್ರೆಸ್ ಸಂಪೂರ್ಣವಾಗಿ ಹತಾಶವಾಗಿ ಇಂತಹ ಹೇಳಿಕೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಗೆ ಅದ್ಭುತವಾದ ಬೆಂಬಲವನ್ನು ನೋಡಿ ಕಾಂಗ್ರೆಸ್ ಪಕ್ಷ ಭಯ ಗೊಂಡಿದೆ. ಸೋಲಿನ ಅನುಭವ ಆರಂಭದಲ್ಲಿ ಆಗಿರುವುದರಿಂದ ಚುನಾವಣಾ ನಂತರದ ಹೇಳಿಕೆಗಳನ್ನು ಈಗಲೇ ಆ ಪಕ್ಷದ ನಾಯಕರು ನೀಡುತ್ತಿದ್ದಾರೆ ಎಂದರು.

ಅವರು ಸಿಂದಗಿ ವಿಧಾನಸಭೆ ಕ್ಷೇತ್ರದ ಕನ್ನೊಳಿ ಗ್ರಾಮದ ಪ್ರಚಾರದ ಸಂದರ್ಭದಲ್ಲಿ ಹೇಳಿದರು.

ಬಿಜೆಪಿ ಗೋಣಿ ಚೀಲದಲ್ಲಿ ದುಡ್ಡು ತಂದು ಹಂಚುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ದುಡ್ಡು ಹಂಚುವ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷದವರೆ ಆರಂಭ ಮಾಡಿದ್ದು. ಹಿಂದಿನ ಐದು ವರ್ಷ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡು ಅದರಿಂದ ಬಂದ ಹಣವನ್ನು ಚುನಾವಣೆಯಲ್ಲಿ ಹಂಚುವಂತಹ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಡಿಕೆ ಶಿವಕುಮಾರ್ ಬಗ್ಗೆ ನನಗೆ ಕನಿಕರವಿದೆ. ಈ ಹಿಂದೆ ನಡೆದಂತಹ ಮೂರು ಉಪಚುನಾವಣೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಗೋಣಿಚೀಲದಲ್ಲಿ ಹಣ ಹಂಚುವ ಮೂಲಕ ಚುನಾವಣೆ ನಡೆಸಿದ ಅನುಭವವನ್ನು ಸಿಂದಗಿ ಉಪಚುನಾವಣೆ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಸಿಂಧಗಿಯಲ್ಲಿ ಅಭಿವೃದ್ಧಿಯ ಗಾಳಿ ಬೀಸುತ್ತಿದೆ. ಜನಸಾಮಾನ್ಯರು ಮಾತಿಗೆ ಮರುಳಾಗುವ ಕಾಲ ಹೋಯಿತು. ಇನ್ನೇನಿದ್ದರು ಮಾತಿಗಿಂತ ಕೃತಿ ಮುಖ್ಯ ಎನ್ನುವುದು ಎಲ್ಲ ಮತದಾರರಿಗೆ ತಿಳಿಸಿದೆ. ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಮತವಾಗಿ ಪರಿವರ್ತನೆ ಆಗಲಿವೆ‌ ಎಂದು‌ ಅವರು ತಿಳಿಸಿದರು.

ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಸಿಸಿ ಪಾಟೀಲ್ , ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಇತರರುಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಚಾರದಲ್ಲಿ ಸಾಥ್ ನೀಡಿದರು.‌

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English