ಕುಡಿಯುವ ನೀರಿಗೆ ಶಾಶ್ವತ ಪರಿಹಾರ : ಹೆಚ್. ಡಿ ಕುಮಾರಸ್ವಾಮಿ

3:15 PM, Saturday, January 5th, 2013
Share
1 Star2 Stars3 Stars4 Stars5 Stars
(No Ratings Yet)
Loading...

HD Kumaraswamyಮಂಗಳೂರು : ಅಸೈಗೋಳಿಯಲ್ಲಿ ನಡೆದ ಮಂಗಳೂರು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷ ದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಶುಕ್ರವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷ ಸಂಪೂರ್ಣ ಸಜ್ಜಾಗಿದ್ದು ಯಾವುದೇ ಸಮಯದಲ್ಲಿ ಚುನಾವಣೆ ಬಂದರೂ ಎದುರಿಸಿ ಅಧಿಕಾರಕ್ಕೆ ಬರುತ್ತದೆ, ಮುಂದಿನ ಸಂಕ್ರಾಂತಿ ವೇಳೆಗೆ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದರು. ಅಲ್ಲದೆ ಬಿಜೆಪಿ ನಾಯಕರ ಒಳಜಗಳದಿಂದಾಗಿ ಪಕ್ಷ ನಿಷ್ಕ್ರಿಯ ವಾಗಿದ್ದು ಸಾಧ್ಯವಿದ್ದರೆ ಬಿಜೆಪಿ ಸರಕಾರವನ್ನು ತ್ಯಜಿಸಿ ಈ ಕೂಡಲೆ ಚುನಾವಣೆಗೆ ತೆರಳಲಿ ಎಂದರು. ಬಿಜೆಪಿಯಿಂದ ಹೊರ ಬಂದು ಪಕ್ಷ ಕಟ್ಟಿರುವ ನಾಯಕರು ಸರಕಾರಕ್ಕೆ ನೀಡುತ್ತಿರುವ ಡೆಡ್ ಲೈನ್ ಗಳು ಕೇವಲ ಪ್ರಚಾರ ಪಡೆಯುವ ಹುನ್ನಾರ ಎಂದವರು ಹೇಳಿದರು.

ಇನ್ನು ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಸಂಪೂರ್ಣ ವಿಫಲವಾಗಿದ್ದು ಕೇವಲ ಚುನಾವಣಾ ದೃಷ್ಟಿಯಿಂದ ಪಾದಯಾತ್ರೆ ಹೊರಟ ಮಾತ್ರಕ್ಕೆ ಯಾವುದೇ ಪ್ರಯೋಜನವಿಲ್ಲ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರಮುಖ ಹಾಗು ದೊಡ್ಡ ಸಮಸ್ಯೆಯಾದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗುವುದು ಮತ್ತು ಎಂಡೋ ಸಂತ್ರಸ್ತರ, ಬೀಡಿ ಕಾರ್ಮಿಕರ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷದ ಅಧ್ಯಕ್ಷ ಎಂ.ಬಿ. ಸದಾಶಿವ ವಹಿಸಿದ್ದರು. ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಜೆಡಿಎಸ್ ಕರ್ನಾಟಕ ಪ್ರದೇಶ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೀಲ್ ಅಹ್ಮದ್, ದ.ಕ. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ, ಜೆಡಿಎಸ್ ಕರ್ನಾಟಕ ಪ್ರದೇಶದ ಕಾರ್ಯದರ್ಶಿ ಎಂ.ಜಿ. ಹೆಗ್ಡೆ, ಜೆಡಿಎಸ್ ಕರ್ನಾಟಕ ಪ್ರದೇಶದ ಉಪಾಧ್ಯಕ್ಷ ಸುಶೀಲ್ ನೋರೊನ್ಹ, ದ.ಕ. ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಕೊಳಂಬೆ, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಜಯಲಕ್ಷ್ಮಿ ಹೆಗ್ಡೆ, ಜೆಡಿಎಸ್ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಮಹಮ್ಮದ್ ರಫಿ, ಮಜೀದ್ ಸುರಲ್ಪಾಡಿ , ಬಶೀರ್ ಬೈಕಂಪಾಡಿ ,ಆರ್ ಧನರಾಜ್, ಹಸನ್ ಹಾಜಿ ಸಂಬಾರ್‌ತೋಟ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English