ಕಾರ್ಕಳ : ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ವಿ ಸುನಿಲ್ ಕುಮಾರ್‌ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿರುವ ವಿನೂತನ, ವಿಭಿನ್ನವಾದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಇಂದು ಕಾರ್ಕಳ ದಾದ್ಯಂತ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.
ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಮತ್ತು ಮಲ್ಪೆ ಕಡಲ ತೀರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಾಗೂ ಕಾರ್ಕಳ ಕ್ಷೇತ್ರದ ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ಗೋಮ್ಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ, ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್, ಎಲ್ಲ ತಾಲೂಕು ಮಟ್ಟದ ಸರಕಾರಿ ಕಛೇರಿಗಳು, ಗ್ರಾಮ ಪಂಚಾಯತ್‌ಗಳು, ಶಾಲಾ ಕಾಲೇಜುಗಳು, ರಿಕ್ಷಾ ಹಾಗೂ ಬಸ್ ನಿಲ್ದಾಣಗಳಲ್ಲಿ, ಪ್ರಮುಖ ಗೇರು ಕಾರ್ಖಾನೆಗಳಲ್ಲಿ ಮತ್ತು ಮಾನ್ಯ ಸಚಿವರ ವಿಕಾಸ ಜನಸೇವಾ ಕಛೇರಿಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು ಎಂದು ಸಚಿವರ ಕಛೇರಿ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English