ಮಂಗಳೂರು : ‘ಹಲಾಲ್’ ಈಗ ಕೇವಲ ಮಾಂಸಕ್ಕಷ್ಟೇ ಸೀಮಿತವಾಗಿಲ್ಲ, ಶರಿಯತ್ ಕಾನೂನಿಗನುಸಾರ ಓರ್ವ ಮುಸಲ್ಮಾನನು ಏನೆಲ್ಲವನ್ನು ಅಂಗೀಕರಿಸುತ್ತಾನೆಯೋ ಅದೆಲ್ಲವೂ ‘ಹಲಾಲ್’ ಆಗಿದೆ ! ಮುಸಲ್ಮಾನೇತರರನ್ನು ಇಸ್ಲಾಮಿಕ್ ಜೀವನ ಪದ್ದತಿಗೆ ಪರಿವರ್ತಿಸುವ ಪ್ರಯತ್ನವೆಂದರೆ ‘ಹಲಾಲ್’, ಎಂಬುದನ್ನು ಗಮನದಲ್ಲಿಡಬೇಕು. ಕೇರಳದಲ್ಲಿ ‘ಹಲಾಲ್’ಮುಕ್ತ ಉಪಹಾರಗೃಹವನ್ನು ತೆರೆದ ಓರ್ವ ಹಿಂದೂ ಮಹಿಳೆಯ ಮೇಲೆ ಮತಾಂಧರು ದಾಳಿ ನಡೆಸಿ ಆಕೆಯನ್ನು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದೂ ಸಮಾಜದ ಸ್ಥಿತಿ ಎಷ್ಟು ದಯನೀಯವಾಗಿದೆ ಎಂದರೆ, ಭಾರತದ ಹಿಂದೂ ಸಮಾಜವು ತಮ್ಮ ಹಕ್ಕುಗಳ ಬಗ್ಗೆ ಆಗ್ರಹಿಸಲೂ ಸಾಧ್ಯವಿಲ್ಲ. ಕಟ್ಟರವಾದಿ ಮುಸಲ್ಮಾನ ಸಮಾಜವು ‘ಹಲಾಲ್’ನ ಮೂಲಕ ಭಾರತದಲ್ಲಿ ತಮ್ಮದೇ ಆದ ‘ಆರ್ಥಿಕ ಏಕಸಾಮ್ಯ’ ಸೃಷ್ಟಿಸುತ್ತಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಲಾಲ್‌ನ ವಿರುದ್ಧ ಚಳುವಳಿ ನಡೆಸಲು ಹಿಂದೂಗಳ ಧರ್ಮಗುರು, ಸಂಪ್ರದಾಯ, ಸಂಘಟನೆ ಇತ್ಯಾದಿ ಎಲ್ಲರೂ ಯೋಗದಾನ ನೀಡಬೇಕು, ಎಂದು ‘ಅಪವರ್ಡ್’ ಮತ್ತು ‘ಪ್ರಜ್ಞತಾ’ ಇವುಗಳ ಸಹಸಂಸ್ಥಾಪಕ ಶ್ರೀ. ಆಶಿಷ ಧರ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಈ ವರ್ಷ ಏಕೆ ಮತ್ತು ಹೇಗೆ ಆಚರಿಸಬೇಕು – ಹಲಾಲ್ ಮುಕ್ತ ದೀಪಾವಳಿ !’ ಈ ಕುರಿತು ‘ಆನ್‌ಲೈನ್’ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಮಾತನಾಡಿದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ-ವಿತರಕರಾದ ಶ್ರೀ. ಪ್ರಶಾಂತ ಸಬರಂಗಿ ಇವರು, ಭಾರತದಲ್ಲಿ ಆಹಾರದ ಬಗ್ಗೆ ಪ್ರಮಾಣಪತ್ರ ನೀಡುವ ಕೇವಲ ೨ ಸರಕಾರಿ ಸಂಸ್ಥೆಗಳಿರುವಾಗ ‘ಹಲಾಲ್’ ಎಲ್ಲಿಂದ ಬಂತು ? ಯಾವುದೇ ವ್ಯವಹಾರದಲ್ಲಿ ‘ಹಲಾಲ್’ಅನ್ನು ಒತ್ತಾಯ ಮಾಡಿದರೆ ಅವರು ಪೊಲೀಸರಲ್ಲಿ ದೂರು ನೀಡಬಹುದು. ಅರ್ಜಿಯನ್ನು ದಾಖಲಿಸಬಹುದು, ಕೇಂದ್ರ ಸರಕಾರಕ್ಕೆ ಪತ್ರ ಬರೆದು ಭಾರತೀಯ ಮಾರುಕಟ್ಟೆಯಿಂದ ‘ಹಲಾಲ್’ ತೆಗೆದುಹಾಕಬೇಕು. ಖಾಸಗಿ ಕ್ಷೇತ್ರಗಳ ಸಹಿತ, ರೈಲ್ವೆ ಇತ್ಯಾದಿ ಸರಕಾರಿ ಕ್ಷೇತ್ರಗಳಲ್ಲಿ ‘ಹಲಾಲ್’ ನುಸುಳಿದೆ. ಇದರ ವಿರುದ್ಧ ಸಾಮೂಹಿಕವಾಗಿ ಹೋರಾಟ ನಡೆಸಿದರೆ ಜಯ ಖಂಡಿತ ಸಿಗಲಿದೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಮಾತನಾಡುತ್ತಾ, ವಕ್ಫ್ ಬೋರ್ಡ್ ಹೇಗೆ ದೇಶದಾದ್ಯಂತ ಭೂಮಿಯನ್ನು ವಶಪಡಿಸಿಕೊಂಡಿದೆಯೋ ಅದೇ ರೀತಿ ‘ಹಲಾಲ್’ನ್ನು ದೇಶದಾದ್ಯಂತ ಉಪಯೋಗಿಸಲಾಗುತ್ತಿದೆ. ನಾವು ಒಂದೆಡೆ ‘ಜಾತ್ಯತೀತ’ ಎಂದು ಹೇಳುತ್ತೇವೆ, ಆದರೆ ವಿಶಿಷ್ಟ ಸಮಾಜಕ್ಕಾಗಿ ಈ ‘ಹಲಾಲ್’ ಹೆಚ್ಚು ಕಡಿಮೆ ಸರಕಾರಿ ಕ್ಷೇತ್ರಗಳಲ್ಲಿಯೂ ಜಾರಿಯಾಗಿದೆ. ‘ಹಲಾಲ್’ ಒಂದು ರೀತಿಯಲ್ಲಿ ಸಂವಿಧಾನದ ಕಲಂ ೧೪ ಮತ್ತು ೧೯ ಅನ್ನು ಸಂಪೂರ್ಣ ಉಲ್ಲಂಘಿಸುತ್ತದೆ. ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ಮಾತನಾಡುತ್ತಾ, ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕ್ ತರಲು ಯಶಸ್ಸು ಸಿಗಲಿಲ್ಲ, ಹಾಗಾಗಿ ‘ಹಲಾಲ್’ನ ಮಾಧ್ಯಮದಿಂದ ಭಾರತದಲ್ಲಿ ಸಮನಾಂತರ ಆರ್ಥಿಕತೆ ನಿರ್ಮಾಣ ಮಾಡಿದೆ. ಹಿಂದೂ ವ್ಯಾಪಾರಿಗಳು ‘ಹಲಾಲ್’ನಿಂದ ವಿಪರೀತ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಿಂದೂ ಸಮಾಜಕ್ಕೆ ಹಲಾಲ್ ನಂತಹ ಪ್ರಮಾಣಪತ್ರವನ್ನು ಜಾರಿಗೊಳಿಸಲು ಬಿಡುತ್ತಿದ್ದರೇ ? ಎಂದು ಪ್ರಶ್ನಿಸುತ್ತಾ ‘ಹಲಾಲ್ ಮುಕ್ತ ದೀಪಾವಳಿ’ ಈ ಅಭಿಯಾನದಲ್ಲಿ ಹಿಂದೂ ಸಮಾಜವು ಬೃಹತ್‌ಪ್ರಮಾಣದಲ್ಲಿ ಭಾಗವಹಿಸಬೇಕು, ಎಂದು ಕರೆ ನೀಡಿದರು.
‘ಹಲಾಲ್ ಮುಕ್ತ ದೀಪಾವಳಿ’ ಈ ಅಭಿಯಾನಕ್ಕೆ ಉತ್ಸಾಹಪೂರ್ವಕ ಪ್ರತಿಕ್ರಿಯೆ : ಮಹಾರಾಷ್ಟ್ರ, ಗೋವಾ, ಉತ್ತರಪ್ರದೇಶ, ಜಾರಖಂಡ, ಬಂಗಾಲ, ಆಸ್ಸಾಂ, ತ್ರಿಪುರಾ ಮತ್ತು ಮೇಘಾಲಯ ಈ ೮ ರಾಜ್ಯಗಳ ಹಿಂದೂ ಬಾಂಧವರು ‘ಹಲಾಲ್ ಮುಕ್ತ ದೀಪಾವಳಿ’ ಈ ಅಭಿಯಾನದಲ್ಲಿ ಭಾಗವಹಿಸುತ್ತಾ ‘ಆನ್‌ಲೈನ್’ ಆಂದೋಲನವನ್ನು ಮಾಡಿದರು. ಇದರಲ್ಲಿ ಪ್ರಧಾನಮಂತ್ರಿ ಮಾನ್ಯ ನರೇಂದ್ರ ಮೋದಿ ಇವರಿಗೆ 83 ಸ್ಥಳಗಳಿಂದ ಮನವಿಯನ್ನು ಕಳುಹಿಸಲಾಯಿತು. ಈ ಆಂದೋಲನದ ಭಾಗವೆಂದು #Halal_Free_Diwali ಈ ಹ್ಯಾಶ್‌ಟ್ಯಾಗ್‌ಅನ್ನು ಉಪಯೋಗಿಸಿ ಕರೆ ನೀಡಲಾಗಿತ್ತು, ಇದಕ್ಕೆ ಉತ್ಸಾಹಪೂರ್ಣ ಪ್ರತಿಕ್ರಿಯೆ ಸಿಕ್ಕಿದೆ. ಈ ಹ್ಯಾಶ್‌ಟ್ಯಾಗ್ ಟ್ರೆಂಡ್ ಟ್ವಿಟರ್‌ನ ರಾಷ್ಟ್ರೀಯ ಮಟ್ಟದಲ್ಲಿ 4 ನೇ ಸ್ಥಾನದಲ್ಲಿತ್ತು.
Click this button or press Ctrl+G to toggle between Kannada and English