ಸರಕಾರಿ ಸೇವೆ ಜನಾರ್ದನ ಸೇವೆ ಯುವಜನತೆ ಮುಂದೆ ಬನ್ನಿರಿ

9:55 PM, Sunday, October 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

Christopherಮಂಗಳೂರು :  ಸಂತ ಕ್ರಿಸ್ಟೋಫರ್ ಎಸೋಸಿಯೆಶನ್ ಮಂಗಳೂರು ಇವರ ಆಶ್ರಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸದಸ್ಯರ ಕುಟುಂಬದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಸಾಧನೆಗೈದ ಯುವಪ್ರತಿಭೆಗಳನ್ನು ಸನ್ಮಾನಿಸುವ ಕಾರ್ಯಕ್ರಮ ರೋಜಾರಿಯೊ ಕಲ್ಚರಲ್ ಸಭಾಂಗಣಗದಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಾಣಿಜ್ಯತೆರಿಗೆ ನಿರೀಕ್ಷಕರಾದ ಕುಮಾರಿ ಆಮ್ಲಿನ್ ಡಿಸೋಜ ಮಾತನಾಡಿ ಇಂದು ಯುವಜನತೆಯನ್ನು ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಗೌರವಿಸುವುದು ಶ್ಲಾಘನೀಯ. ಇವತ್ತಿನ ಈ ಸಮಾಜದಲ್ಲಿ ಪ್ರತ್ಯೇಕವಾಗಿ ಯುವಜನತೆಯಲ್ಲಿ ನಾವು ಸರಕಾರ ಕಚೇರಿಗಳಲ್ಲಿ ಕೆಲಸ ಮಾಡಲು ಹಲವು ಸಲ ಅಲೆದಾಡಬೇಕು. ನಮ್ಮನ್ನು ಕೇಳುವವರು ಯಾರೂ ಇರುವುದಿಲ್ಲ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಚಿಂತನೆ ಮನಸ್ಸಿನಲ್ಲಿ ಬಹಳವಾಗಿ ಬೇರೂರಿದೆ. ಆದರೆ ಈ ಚಿಂತನೆಯಿಂದ ಹೊರಬರಲು ಇಂತ ಯುವಜನತೆ ಸರಕಾರಿ ಸೇವೆಗಳಲ್ಲಿ ಉದ್ಯೋಗಕ್ಕೆ ಸೇರಿ ಸರಕಾರಿ ಸೇವೆ ಜನಾರ್ದನ ಸೇವೆ ಎಂದು ಸಮಾಜಕ್ಕೆ ತೋರಿಸಿಕೊಳಬೇಕೆಂದು ಹೇಳಿದರು.

Christopherಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಧರ್ಮಪ್ರಾಂತ್ಯದ ಶ್ರೇಷ್ಟ ಧರ್ಮಗುರುಗಳಾದ ಅತೀ ವಂ.ಮ್ಯಾಕ್ಸಿಂಮ್ ನೊರೊನ್ಹ ರವರು ಮಾತನಾಡಿ ಕಳೆದ 54 ವರ್ಷಗಳಿಂದ ಈ ಸಂಸ್ಥೆಯೂ ವಾಹನ ಚಾಲಕರ ಮಾಲಕರ ಸಂಘಟನೆಯನ್ನು ಬಲಗೊಳಿಸಿ ಸದಸ್ಯರ ಹಾಗೂ ಅವರ ಕುಟುಂಬದ ಹಾಗೂ ಸಮಾಜದ ಒಳಿತಿಯಾಗಿ ಶಿಸ್ತು ಬದ್ದತೆಯಿಂದ ಮತ್ತು ಸಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಾ ಬಂದಿದೆ. ಈ ಸಂಸ್ಥೆಯೂ ಧರ್ಮಪ್ರಾಂತ್ಯದ ಮಾದರಿ ಸಂಸ್ಥೆಯಾಗಿದೆ. ಮುಂದೆ ಕೂಡ ಈ ಸಂಸ್ಥೆಯೂ ಜನ ಸಾಮಾನ್ಯರಿಗೆ ವಿಷೇಶ ಸೇವೆಯನ್ನು ನೀಡಲಿ ಎಂದು ಹೇಳಿದರು. ಸಂಸ್ಥೆಯ ಮಾರ್ಗದರ್ಶಕರಾದ ಅತೀ ವಂ.ಆಲ್ಫ್ರೆಡ್ ಜೆ. ಪಿಂಟೊರವರು ಶುಭವನ್ನು ಹಾರೈಸಿದರು. ಗೌರವ ಅಧ್ಯಕ್ಷರಾದ ಶ್ರೀ.ಸುಶೀಲ್ ನೊರೊನ್ಹರವರು ಯುವ ಪ್ರತಿಭೆಗಳನ್ನು ಪರಿಚೆಯಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಜೋನ್ ಬ್ಯಾಪ್ಟಿಸ್ಟ್ ಗೋಮ್ಸ್ ಹಾಗೂ ಸಹ ಕಾರ್ಯದರ್ಶಿ ಜೆರಾಲ್ಡ್ ಡಿಸೋಜ ಉಪಸ್ಥಿತರಿದ್ದು, ಆಲ್ವಿನ್ ಡಿಸೋಜ ಪ್ರಾರ್ಥನ ವಿಧಿಯನ್ನು ನಡೆಸಿದರು, ಅಧ್ಯಕ್ಷರಾದ ಫ್ರೊ.ಜೋನ್ ಡಿಸಿಲ್ವಾ ಸ್ವಾಗತಿಸಿ ಕಾ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English