ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಅದ್ದೂರಿ ಸ್ವಾಗತ ಸಚಿವರು, ಶಾಸಕರು, ಗಣ್ಯರಿಂದ ಅಭಿನಂದನೆಗಳು

8:25 PM, Monday, November 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

adventurous- women ಮಂಗಳೂರು  : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಳ್ಳಲಾಗಿದ್ದ ಐತಿಹಾಸಿಕ ಯಾನ ಶಿಖರದಿಂದ ಸಾಗರ ಅಭಿಯಾನದಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ನ.01ರ ಸೋಮವಾರ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ  (5425 ಮೀ) ಶಿಖರವನ್ನು ಏರಿ ತದನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್ ನ ಕರ್ ದೂಂಗ್ಲ ಪಾಸ್ ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ, ಕಯಾಕಿಂಗ್ ಯಾನ ಮಾಡಿ ಮಂಗಳೂರಿನ ಉಳ್ಳಾಲದ ಕಡಲ ತೀರವನ್ನು ತಲುಪಿದರು.

ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಕೈಗೊಳ್ಳಲಾಗಿದ್ದ ಈ ಸಾಹಸ ಯಾತ್ರೆಗೆ 2021ರ ಆಗಸ್ಟ್ 16 ರಂದು ಕ್ರೀಡಾ ಸಚಿವರು ಚಾಲನೆ ನೀಡಿದ್ದರು. ಸುಮಾರು 70 ದಿನಗಳ ಸಾಹಸ ಯಾತ್ರೆ ಸ್ತ್ರೀ ಶಕ್ತಿ ಸಾಹಸ, ಧೈರ್ಯ, ಸಮಾನತೆ, ಶ್ರೀ ಸಬಲೀಕರಣ ತತ್ತ್ವವನ್ನು ಬಿಂಬಿಸುವ ವಿಭಿನ್ನವಾದ ಕಾರ್ಯಕ್ರಮವಾಗಿತ್ತು.

adventurous- women ಕಾರವಾರದಿಂದ ಕಯಾಕಿಂಗ್ ಮೂಲಕ ಹೊರಟ ಈ 5 ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವತಿಯರ ತಂಡವು ನವೆಂಬರ್ 01ರ ಸೋಮವಾರ ಸಂಜೆ ಉಲ್ಲಾಳ ಕಡಲ ತೀರಕ್ಕೆ ಬಂದು ತಮ್ಮ ಸಾಹಸ ಯಾತ್ರೆಯನ್ನು ಪೂರ್ಣಗೊಳಿಸಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ. ಖಾದರ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ ಪಯಾಸ್, ಉಳ್ಳಾಲ ನಗಸಭೆ ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್ ಉಳ್ಳಾಲ್, ಸದಸ್ಯರಾದ ಭಾರತಿ, ಸುರೇಶ್ ಭಟ್ ನಗರ, ನಗರಸಭೆ ಪೌರಾಯುಕ್ತ ರಾಯಪ್ಪ, ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಈ ಸಾಹಸಿ ತರುಣಿಯರನ್ನು ಅಭಿನಂದನಾ ಪೂರ್ವಕವಾಗಿ ಸ್ವಾಗತಿಸಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಉಳ್ಳಲಾ ಕಡಲ ತೀರದಲ್ಲಿ ಯುವತಿಯನ್ನು ಸ್ವಾಗತಿಸಿದ ನಂತರ ಮಾತನಾಡಿ, ಕಾಶ್ಮೀರದಿಂದ ಮೂರು ಸಾವಿರ ಕಿ.ಮೀ. ಕ್ರಮಿಸಿ, ಕಾರವಾರದಿಂದ ಮುನ್ನೂರು ಕಿ.ಮೀ. ಸಮುದ್ರದಲ್ಲಿ ಪ್ರಯಾಣಿಸುವ ಮೂಲಕ ಬಹು ದೊಡ್ಡ ಸಾಧನೆ ಮಾಡಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಐವರು ಹೆಣ್ಣು ಮಕ್ಕಳಿಗೆ ರಾಜ್ಯ ಸರಕಾರದಿಂದ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ. ಇವರ ಸಾಹಸವನ್ನು ಗೌರವಿಸಲು ಈ ತಿಂಗಳ ಅಂತ್ಯದಲ್ಲಿ ವಿಧಾನಸೌಧದಲ್ಲಿ ಸನ್ಮಾನಿಸಲಾಗುವುದು, ಮುಖ್ಯಮಂತ್ರಿಗಳು ಈ ಯುವತಿಯರನ್ನು ಸನ್ಮಾನಿಸುವರು, ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಈ ಸಾಧಕರಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

adventurous- women ಶಾಸಕರಾದ ಯು.ಟಿ. ಖಾದರ್ ಮಾತನಾಡಿ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಹಾಗೂ ಭಾರತೀಯ ಪವರ್ತಾರೋಹಣ ಸಂಘದ ಸಹಯೋಗದಲ್ಲಿ ಕಾಶ್ಮೀರದಿಂದ ಪರ್ವತಾರೋಹಣ, ಸೈಕಲ್ ಹಾಗೂ ಕಾರವಾರದಿಂದ ಕಯಾಕಿಂಗ್ ಮೂಲಕ ಉಳ್ಳಾಲಕ್ಕೆ ಆಗಮಿಸಿ ಐವರು ಯುವತಿಯನ್ನು ಸಮಸ್ತ ಮಂಗಳೂರಿನ ಜನತೆ ಪರವಾಗಿ ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಇವರ ಈ ಸಾಧನೆ ಯುವ ಜನತೆ, ವಿದ್ಯಾರ್ಥಿಗಳು, ಮಹಿಳೆಯರಿಗೆ ಪ್ರೇರಣಾ ಶಕ್ತಿಯಾಗಿದೆ, ಮುಂದಿನ ದಿನಗಳಲ್ಲಿ ಅವರ ಈ ಸಾಧನೆಯು ದೇಶಕ್ಕೆ ಪದಕಗಳನ್ನು ತಂದುಕೊಡುವAತಾಗಲಿ, ಬೆಂಗಳೂರು ಹಾಗೂ ಕಲಬುರಗಿಯಲ್ಲಿರುವಂತೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English