ಮಂಗಳೂರು : ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ, ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿಯ ಸಹಭಾಗಿತ್ವದೊಂದಿಗೆ ಕಾರಾಗೃಹದಲ್ಲಿನ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂದಿಗಳಿಗೆ ‘ಕಲಿಕೆಯಿಂದ ಬದಲಾವಣೆ’ ಎಂಬ ಸಾಕ್ಷರತಾ ಕಾರ್ಯಕ್ರಮದ ಖಾಯಂ ಕಲಿಕಾ ಕೇಂದ್ರವನ್ನು ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 01ರ ಸೋಮವಾರ ಉದ್ಟಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ., ಜೈಲಿನಲ್ಲಿರುವ ಅನಕ್ಷರಸ್ಥ ಮತ್ತು ಆರೆ ಅಕ್ಷರಸ್ಥ ಬಂದಿಗಳು ಈ ಕಾರ್ಯಕ್ರಮದ ಮೂಲಕ ಸಾಕ್ಷರರಾಗಲು
ಒಂದು ಉತ್ತಮ ಅವಕಾಶವನ್ನು ಸರಕಾರದಿಂದ ಕಲ್ಪಿಸಲಾಗಿದೆ, ದೊರೆತ ಅವಕಾಶದ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಅಧೀಕ್ಷಕ ಚಂದನ್ ಜೆ. ಪಟೇಲ್ ಮಾತನಾಡಿ, ಇದು ದೇಶದಲ್ಲಿಯೇ ವಿನೂತನ ಕಾರ್ಯಕ್ರಮವಾಗಿದ್ದು, ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಇಂದಿನಿಂದ ಏಕಕಾಲದಲ್ಲಿ ಚಾಲನೆ ದೊರೆತಿದೆ. ಕಾರಾಗೃಹಕ್ಕೆ ಬರುವಾಗ ಅನಕ್ಷರಸ್ಥರಾಗಿರುವ ಬಂದಿಗಳು ಬಿಡುಗಡೆ ಹೊಂದುವುದರೊಳಗಾಗಿ ಅಕ್ಷರಸ್ಥರನ್ನಾಗಿ ಮಾಡುವುದೇ ಈ ಕಾರ್ಯಕ್ರಮದ ಗುರಿಯಾಗಿದೆ ಹಾಗೂ ಇದರಲ್ಲಿ ಅಕ್ಷರಸ್ಥ ಬಂದಿಗಳು ಅನಕ್ಷರಸ್ಥ ಬಂದಿಗಳ ಕಲಿಕೆ ಚಟುವಟಿಕೆಯಲ್ಲಿ ನೆರವಾಗಲಿರುವುದು ವಿಶೇಷತೆಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಧರ್ಮಗಿರಿ ರಾಮಸ್ವಾಮಿ ಸುಬ್ಬಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಸಹಾಯಕ ಪೊಲೀಸ್ ಆಯುಕ್ತ ರವೀಶ್ ನಾಯಕ್, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಸುಧಾಕರ, ಮತ್ತು ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಶೀನ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 09 ಜನ ಅನಕ್ಷರಸ್ಥ ಹಾಗೂ 05 ಜನ ಅರೆ ಅಕ್ಷರಸ್ಥ ಬಂದಿಗಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
Click this button or press Ctrl+G to toggle between Kannada and English