ದೀಪಾವಳಿ “ಬೆಳಕಿನ ಹಬ್ಬ” ದ ಮಹತ್ವ ತಿಳಿಯಿರಿ

11:08 PM, Wednesday, November 3rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Deepavali ಮಂಗಳೂರು  : ದೀಪಾವಳಿಯನ್ನು  “ಬೆಳಕಿನ ಹಬ್ಬ” ಎಂದೂ ಕರೆಯುತ್ತಾರೆ. ಕುಟುಂಬದ ಸದಸ್ಯರು ಒಟ್ಟಿಗೆ ಸೇರಿ ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ, ಈ ದಿನದಂದು ಅಷ್ಟೈಶ್ವರ್ಯ ಕ್ಕಾಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುವ ರೂಡಿ. ಭಾರತದ ಉತ್ತರ ರಾಜ್ಯಗಳು ಈ ಹಬ್ಬವನ್ನು ದೀವಾಲಿ ಎಂದು  ಉಲ್ಲೇಖಿಸಿದರೆ, ಇದನ್ನು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಮತ್ತು ಸಿಂಗಾಪುರ, ಮಲೇಷ್ಯಾ ಮುಂತಾದ ಏಷ್ಯಾದ ಇತರ ರಾಷ್ಟ್ರಗಳಲ್ಲಿ ದೀಪಾವಳಿ (‘ ದೀಪ್’ ಎಂದರೆ ಬೆಳಕು / ದೀಪ, ‘ವಳಿ’ ಎಂದರೆ ರಚನೆ) ಎಂದು ಕರೆಯಲಾಗುತ್ತದೆ.

ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ಮದುವೆಯ ಆಚರಣೆಯ ನಂಬಿಕೆಯಿಂದ ಎಲ್ಲೆಲ್ಲೂ ದೀಪ ಬೆಳಗುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಕೆಲವರು ಕಾರ್ತಿಕ ಅಮವಾಸ್ಯೆಯ ದಿನದಂದು ಲಕ್ಷ್ಮಿ ದೇವಿಯ ಜನ್ಮ ದಿನದ ಆಚರಣೆ ಎಂದು ಸಹ ನಂಬಿದ್ದಾರೆ.

ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

Deepavaliಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.

ದೀಪಾವಳಿಯ ಮರುದಿನ, ಹಿಂದೂ ಧರ್ಮದಲ್ಲಿ ಗೋವರ್ಧನ ಪೂಜೆ ಅಥವಾ ಗೋಪೂಜೆ ಮಾಡುವ ನಿಯಮವಿದೆ. ಗೋವರ್ಧನ ಪೂಜೆಯಲ್ಲಿ ಪಶುಗಳ ಪೂಜೆಯನ್ನು ಮಾಡಲಾಗುತ್ತದೆ. ಇಷ್ಟೇ ಅಲ್ಲ, ಗೋವರ್ಧನ ಪೂಜೆಯನ್ನು ಅನ್ನಕೂಟ ಪೂಜೆ ಎಂದೂ ಕರೆಯುತ್ತಾರೆ. ಈ ದಿನದಂದು ಹಸು, ಕರುಗಳನ್ನು ಪೂಜಿಸಲು ಸಂಪ್ರದಾಯ ಇದೆ.

Deepavaliಭಾರತೀಯ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬದ ದಿನ ಎಣ್ನೆ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ  ದೇಹಕ್ಕೆ ಎಣ್ಣೆ ಸವರಿ ನಮ್ಮ ಸಾಂಪ್ರದಾಯಿಕ ಸ್ನಾನ ಮಾಡುವ ಪದ್ಧತಿ ಇದೆ. ಬೆಳಗ್ಗೆ 6.30ಕ್ಕೆ ಎಣ್ಣೆ ಸ್ನಾನ ಆರಂಭಿಸಬೇಕು. ಉಗುರುಬೆಚ್ಚಗಿನ ನೀರಿನಲ್ಲಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಿ. ಜಾಯಿಕಾಯಿ ಅಥವಾ ಸೊಪ್ಪನ್ನು ಬಳಸಬಹುದು. ಸರಳ ಆಹಾರಗಳನ್ನು ಸೇವಿಸಬೇಕು. ಎಣ್ಣೆ ಸ್ನಾನದ ದಿನ ಲೈಂಗಿಕ ಕ್ರಿಯೆ ಮಾಡಬಾರದು.ಈ ಸಮಯದಲ್ಲಿ ಹಗಲು ನಿದ್ದೆ ಮಾಡಬೇಡಿ. ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವುದು ಉತ್ತಮವಲ್ಲ. ತಣ್ಣನೆಯ ಆಹಾರವನ್ನು ಖಂಡಿತವಾಗಿಯೂ ಸೇವನೆ ಮಾಡಬಾರದು.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಚಿತ್ರ : ಭಾಸ್ಕರ್  ಅಮ್ಟೂರು

Deepavali

Deepavali

Deepavali

Deepavali

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English