ಚೀನಾದ ನಿಷೇಧಿತ ಆ್ಯಪ್ ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದ ಇಬ್ಬರು ಟಿಬೆಟಿಯನ್ನರ ಬಂಧನ

11:19 PM, Thursday, November 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tibetiansಮಂಗಳೂರು : ಚೀನಾದ ನಿಷೇಧಿತ ಆ್ಯಪ್ ಬಳಸಿ ಹಲವಾರು ಮಂದಿಗೆ ಮೋಸ ಮಾಡಿರುವ ಇಬ್ಬರು ಟಿಬೆಟಿಯನ್ನರು ಪೊಲೀಸರು ಬಂಧಿಸಿದ್ದಾರೆ.

ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಿವಾಸಿಗಳಾದ ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಬಂಧಿತರು. ಮಂಗಳೂರು ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇವರು ಚೀನಾದ ನಿಷೇಧಿತ ಆ್ಯಪ್ ಬಳಸಿ ವಂಚನೆ ಮಾಡುತ್ತಿದ್ದರು. ಮೊಬಿವಿಕ್, ವಿಚಾಟ್, ರೆಡ್ಪ್ಯಾಕ್ ಮುಂತಾದ ಆ್ಯಪ್ ಬಳಸುತ್ತಿದ್ದರು ಎಂಬುದು ತಿಳಿದುಬಂದಿದೆ. ಕ್ರೆಡಿಟ್ ಕಾರ್ಡ್ ರದ್ದು ಮಾಡಿಸಲು ಮನವಿ ಮಾಡಿದವರಿಗೆ ಕರೆ ಮಾಡುತ್ತಿದ್ದ ಇವರು, ಕ್ಯಾನ್ಸಲೇಷನ್ಗೆ ಒಟಿಪಿ ಬರುತ್ತದೆ ಎಂದು ಹೇಳಿ ಒಟಿಪಿ ಪಡೆದು ಮೋಸ ಮಾಡುತ್ತಿದ್ದರು.

ಅತ್ತಾವರದ ಅಲೆಕ್ಸಾಂಡರ್ ಎಂಬವರ ಖಾತೆಯಿಂದ 1.12 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಮೂಲದ ಬಹಳಷ್ಟು ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿರುವ ಮಾಹಿತಿಯೂ ಇದೆ. ಇವರು ವಂಚನೆ ಬಳಿಕ ಇಂಡಿಯನ್ ಕರೆನ್ಸಿಯನ್ನು ಟಿಬೆಟ್ ಕರೆನ್ಸಿ ಆಗಿ ಬದಲಿಸಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English