ಸಂಗಬೆಟ್ಟು ಪೇಟೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಗೊಳಿಸುವ ಜಾಗೃತಿ ಕಾರ್ಯಕ್ರಮ

8:59 PM, Friday, November 12th, 2021
Share
1 Star2 Stars3 Stars4 Stars5 Stars
(No Ratings Yet)
Loading...

Sangabettuಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಾಹಸ್ ಸಂಸ್ಥೆ ಬೆಂಗಳೂರು ಹಾಗೂ ಸಂಗಬೆಟ್ಟು ಗ್ರಾಮ‌ಪಂಚಾಯತ್ ವತಿಯಿಂದ ಕ್ಲೀನ್ ಇಂಡಿಯಾ ಹಾಗೂ ದಸ್ ಕಾ ದು ಸ್ವಚ್ಚ ಹರ್ ದಮ್ ಕಾರ್ಯಕ್ರಮ ಆಯೋಜಿಸಲಾಯಿತು.

ಇದರ ಅಂಗವಾಗಿ ಶಾಲಾ ಮಕ್ಕಳಿಗೆ ಹಸಿ ಹಾಗೂ ಒಣ ಕಸ ಬೇರ್ಪಡಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಬಳಿಕ ಸಂಗಬೆಟ್ಟು ಪೇಟೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಗೊಳಿಸುವ ಮಾಹಿತಿ ನೀಡಲಾಯಿತು.

ಶಾಲಾ‌ ಮಕ್ಕಳು  ರೋಟರಿ ಕ್ಲಬ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಬೀದಿ ಬದಿಯ ಕಸವನ್ನು ಹೆಕ್ಕಿ ಸ್ವಚ್ಚಗೊಳೊಸುವ ಮೂಲಕ ಜಾಗೃತಿ ಮೂಡಿಸಿದರು. ಜಿಲ್ಲಾ ಪಂಚಾಯತ್ ಸ್ವಭಾಮಿ (ಗ್ರಾ) ಐಇಸಿ ಜಿಲ್ಲಾ ಸಮಾಲೋಚಕರು, ಸಾಹಸ್ ಸಂಸ್ಥೆಯ ಯೋಜನಾ ನಿರ್ದೇಶಕರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ಉಪಸ್ಥಿತರಿದ್ದರು.

sangabettu

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English