ಮಂಗಳೂರು : ಭಯೋತ್ಪಾದನಾ ಕೃತ್ಯಗಳಲ್ಲಿ ಪೊಲೀಸ್ ಅಲರ್ಟ್ನ್ನು ಪರೀಕ್ಷಿಸುವುದಕ್ಕಾಗಿ ನಡೆಯುವ ‘ಸಾಗರ್ ಕವಚ’ ಅಣಕು ರಕ್ಷಣಾ ಕಾರ್ಯಾಚರಣೆ ಶುಕ್ರವಾರ ನಗರದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ನಡೆಯಿತು.
ಪಣಂಬೂರಿನ 2 ಪ್ರಮುಖ ಸ್ಥಳಗಳು ಮತ್ತು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಬಾಂಬ್ ಇಡುವ ಪ್ರಯತ್ನಗಳನ್ನು ಅಣಕು ಕಾರ್ಯಾಚರಣೆ ಮೂಲಕ ನಡೆಸಲಾಗಿದ್ದು ಕಟ್ಟೆಚ್ಚರದಲ್ಲಿದ್ದ ಮಂಗಳೂರು ಪೊಲೀಸರು ಮೂರು ಕಡೆಯೂ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.
ಕರಾವಳಿಯಲ್ಲಿ ಭದ್ರತೆಯನ್ನು ಪುನರ್ಪರಿಶೀಲಿಸುವ ಉದ್ದೇಶದಿಂದ ವರ್ಷದಲ್ಲಿ ಕನಿಷ್ಠ 2 ಬಾರಿ ‘ಸಾಗರ್ ಕವಚ’ ಹೆಸರಿನ ಅಣಕು ಕಾರ್ಯಾಚರಣೆ ನಡಸಲಾಗುತ್ತದೆ.
Click this button or press Ctrl+G to toggle between Kannada and English