ಬಂಟ್ವಾಳ :ಜಿಲ್ಲೆಯಲ್ಲಿ ಬತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಬತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಅವರು ಇಂದು ವಿಟ್ಲ ಮಿತ್ತಳಿಕೆ ಯ ತಿಮಾರು ಗದ್ದೆಯಲ್ಲಿಂದು ಭತ್ತದ ಕೃಷಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯ ನಿರತ ಪತ್ರಕ ರ್ತರ ಸಂಘ ಹಾಗೂ ಮಿತ್ತಳಿಕೆ ಕು ಟುಂಬದ ಸಹಯೋಗ ದೊಂದಿಗೆ ಭತ್ತದ ಪೈರು ಕಾ ರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕಡಿಮೆಯಾಗುತ್ತಿರುವ ಬತ್ತದ ಕೃಷಿಗೆ ಈ ಬಾರಿ ಹಡೀಲು ಭೂಮಿ ಕೃಷಿ ಯ ಮೂಲಕ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಿತ್ತಳಿಕೆ ಕುಟುಂಬದ ಹಿರಿಯರಾದ ಸಂಕಪ್ಪ ಶೇಖ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ,ಮಿತ್ತಳಿಕೆ ಕುಟುಂಬದ ಸದಸ್ಯರಾದ ಸರಸ್ವತಿ ಆಳ್ವ,ದಯಾನಂದ ಆಳ್ವ,ಸೂರ್ಯ ನಾಥ ಆಳ್ವ,ವಿಜಯ ಶಂಕರ ಆಳ್ವ,ಸೂರ್ಯ ವಂಶ ಫೌಂಡೇಶನ್ ನ ಅಧ್ಯಕ್ಷ ಗೋವರ್ಧನ ರಾವ್ ,ದ.ಕ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳಾದ ಪುಷ್ಪರಾಜ್ ಬಿ.ಎನ್, ಜಿತೇಂದ್ರ ಕುಂದೇಶ್ವರ,ಸತ್ಯವತಿ ,ಹರೀಶ್ ಮೋಟು ಕಾನ,ದಯಾ ಕುಕ್ಕಾಜೆ,ಸುಖ್ ಪಾಲ್ ಪೊಳಲಿ, ಮೊದಲಾದ ವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಬತ್ತದ ಕೃಷಿ ಕಾರ್ಮಿಕರಿಗೆ ಜಿಲ್ಲಾಧಿಕಾರಿ ಸಾಂಕೇತಿಕವಾಗಿ ಅಕ್ಕಿ ವಿತರಿಸಿದರು.
Click this button or press Ctrl+G to toggle between Kannada and English