ಮಂಗಳೂರು : ನಗರದ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಣ್ಣ ಕೈಗಾರಿಕೆಗಳ ಸಚಿವಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕೆಗಳ ಒಕ್ಕೂಟ ಹಾಗೂ ಎಂ.ಎಸ್.ಎಂ.ಇ.ಡಿ.ಐ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಮಾರಾಟಗಾರರ ಸಮಾವೇಶ ಹಾಗೂ ಕಾರ್ಯಾಗಾರವನ್ನು ಎಂಆರ್ ಪಿಎಲ್ ನ ಆಡಳಿತ ನಿರ್ದೇಶಕ ಪಿ.ಪಿ.ಉಪಾದ್ಯಾಯ ಉದ್ಘಾಟಿಸಿ ಮಾತನಾಡಿರು ಎಂಆರ್ ಪಿಎಲ್ ನಂತಹ ಬೃಹತ್ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರಲ್ಲಿ ಶೇಕಡ 60 ಮಂದಿ ಉದ್ಯೋಗಿಗಳು ಡಿಪ್ಲೊಮ ಪದವಿ ಪಡೆದವರಾಗಿದ್ದಾರೆ. ಈ ಪದವಿ ಪಡೆದವರಿಗೆ ಕೈಗಾರಿಕೆಗಳಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ, ರಾಜ್ಯದ ಡಿಪ್ಲೋಮಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಉತ್ತಮ ತರಭೇತಿಯನ್ನು ನೀಡಿ ಕೈಗಾರಿಕೆಗಳಿಗೆ ನೀಡುವ ಮೂಲಕ ಕೈಗಾರಿಕೆಗಳ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಬೇಕು ಎಂದರು.
ಸುಮಾರು 57000 ಕೋಟಿ ವ್ಯವಹಾರವನ್ನು ಈ ಸಂಸ್ಥೆಯು ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸುವ ಯೋಚನೆಯಿದೆ ಅಲ್ಲದೆ ಕಂಪನಿಯು ಪಾಲಿಪ್ರೊಪಿಲಿನ್ ಅನ್ನು ತಯಾರಿಸುವಂತಹ ಘಟಕವನ್ನು ಸ್ಥಾಪಿಸಲಿದ್ದು ಇದಕ್ಕಾಗಿ ಸುಮಾರು 1803.78 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂಎಸ್ ಎಂಇಡಿಐ ನಿರ್ದೇಶಕ ಎಸ್.ಎಂ.ಜಮಖಂಡಿ ವಹಿಸಿದ್ದರು ಹಾಗೂ ಎಂಎಸ್ ಎಂಇಡಿಐ ಉಪನಿರ್ದೇಶಕ ಕೆ. ಸಾಕ್ರಟಿಸ್, ಡಿಎಸ್ ಐಎ ಅಧ್ಯಕ್ಷ ಕೆ.ಜಯರಾಜ್ ಪೈ, ಕೆಸಿಸಿಐ ಅಧ್ಯಕ್ಷ ಮಹಮ್ಮದ್ ಅಮೀನ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟಗಳ ಜಂಟಿ ಕಾರ್ಯದರ್ಶಿ ಸಂತೋಷ್ ಡಿಸೋಜ ಹಾಗೂ ಡಿಐಸಿಯ ಜಂಟಿ ನಿರ್ದೇಶಕ ಎಸ್.ಜಿ.ಹೆಗ್ಡೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English