ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಸೆಂಬರ್ 1 ರಂದು ಷಷ್ಠಿ ಮಹೋತ್ಸವ

10:09 PM, Tuesday, November 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kukke Shastiಸುಬ್ರಹ್ಮಣ್ಯ  : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಸೆಂಬರ್ 1 ರಂದು ಕೊಪ್ಪರಿಗೆ ಏರಿ ಷಷ್ಠಿ ಮಹೋತ್ಸವ ನಡೆಯಲಿದೆ. ಡಿಸೆಂಬರ್ 3 ರಂದು ಲಕ್ಷ ದೀಪೋತ್ಸವ, ಡಿಸೆಂಬರ್ 7 ಚೌತಿ, ಡಿಸೆಂಬರ್ 8ಪಂಚಮಿ, ಡಿಸೆಂಬರ್ 9 ಮಹಾರಥೋತ್ಸವ ನಡೆಯಲಿದೆ ಎಂದು   ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್‌ ಉಳ್ಳಾಲ್‌ ಹೇಳಿದರು.

ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ. ಕೋವಿಡ್‌- 19 ನಿಯಮಗಳನ್ನು ಅನುಸರಿಸಿಕೊಂಡು ಜಾತ್ರೋತ್ಸವವು ಸಾಂಗವಾಗಿ ನೆರವೇರಲು ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು  ಅವರು ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದೇವಳದ   ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಜಾತ್ರೋತ್ಸವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಂಪಾ ಷಷ್ಠಿ ಮಹೋತ್ಸವ ಸಾಂಗವಾಗಿ ನೆರವೇರಲು ಸಹಕರಿಸಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಂ ಸುಳ್ಳಿ ಹೇಳಿದರು.

ಸ್ವಯಂ ಸೇವಕರು ಮತ್ತು ಸಂಘ ಸಂಸ್ಥೆಗಳು ಜಾತ್ರೆಯ ಸಂಪನ್ನತೆಗೆ ವಿಶೇಷ ಮುತುವರ್ಜಿ ವಹಿಸಬೇಕು ಎಂದು ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್‌ ಹೇಳಿದರು.

ಜಾತ್ರಾ ಸಮಯದಲ್ಲಿ ಸವಾರಿ ಮಂಟಪದ ಬಳಿ, ಆಂಜನೇಯ ಗುಡಿಯ ಬಳಿ, ಬಿಲ ದ್ವಾರ, ಕುಮಾರ ಧಾರದ ಹೆಲಿ ಪ್ಯಾಡ್‌, ಕುಮಾರಸ್ವಾಮಿ ವಿದ್ಯಾಲಯದ ಮೈದಾನಗಳನ್ನು ಪಾರ್ಕಿಂಗ್‌ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ. ಈ ಪಾರ್ಕಿಂಗ್‌ ಸ್ಥಳದಲ್ಲಿ ಸಿಸಿ ಟಿವಿ ಹಾಗೂ ಹೆಚ್ಚುವರಿ ವಿದ್ಯುತ್‌ ವ್ಯವಸ್ಥೆ ಅಳವಡಿಸಲು ನಿರ್ಧಾರ ಕೈಗೊಳ್ಳಲಾಯಿತು.

ನೈರ್ಮಲ್ಯ, ಆರೋಗ್ಯ, ವಿದ್ಯುತ್‌, ಕುಡಿಯುವ ನೀರು, ಭದ್ರತೆ, ಭೋಜನ ಪ್ರಸಾದ, ಕಾನೂನು ಮತ್ತು ಶಿಸ್ತು ಪಾಲನೆ, ವಸತಿ ವ್ಯವಸ್ಥೆ, ಬಲಿವಾಡು ವ್ಯವಸ್ಥೆ, ಕೃಷಿ ಮೇಳ, ಲಕ್ಷ ದೀಪ, ತುರ್ತು ಚಿಕಿತ್ಸಾ ಘಟಕ, ಭಕ್ತಾದಿಗಳ ಬೀದಿ ಉರುಳು ಸೇವೆಗೆ ಅನುಕೂಲತೆ ಮಾಡಿಕೊಡುವ ಬಗ್ಗೆ, ಸಂತೆ ವ್ಯಾಪಾರದ ಬಗ್ಗೆ, ಬ್ರಹ್ಮ ರಥ ಎಳೆಯುವಾಗ ಒತ್ತಡ ನಿಯಂತ್ರಣದ ಬಗ್ಗೆ, ಬ್ರಹ್ಮ ರಥ ಎಳೆಯಲು ಊರವರಿಗೆ ಹೆಚ್ಚಿನ ಆದ್ಯತೆ ನೀಡುವುದು, ಹೊರೆ ಕಾಣಿಕೆ ಸ್ವೀಕಾರ, ಅಖಂಡ ಭಜನೋತ್ಸವ, ಕೆ. ಎಸ್‌. ಆರ್‌. ಟಿ. ಸಿ ವಿಶೇಷ ಬಸ್‌ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಎಇಒ ಪುಷ್ಪಲತಾ ರಾವ್‌, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ. ವಿ. ಭಟ್‌, ಪ್ರಸನ್ನ ದರ್ಬೆ, ಪಿಜಿಎಸ್‌ಎನ್‌ ಪ್ರಸಾದ್‌, ಶ್ರೀವತ್ಸ, ಶೋಭಾ ಗಿರಿಧರ್‌, ಲೋಕೇಶ್‌ ಮುಂಡುಕಜೆ, ಕಡಬ ತಹಸೀಲ್ದಾರ್‌ ಅನಂತ ಶಂಕರ, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರಾದ ಪೊಳಲಿ ಗಿರಿ ಪ್ರಕಾಶ್‌ ತಂತ್ರಿ, ರಘುನಾಥ ರೈ ಎಣ್ಮೂರು, ಸಂಜೀವ ಸೂಟರ್‌ ಪೇಟೆ, ಗೋಪಾಲ್‌ ಕುತ್ತಾರ್‌, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

ಧರ್ಮಸ್ಥಳ, ಕುಕ್ಕೆ ದೇವಸ್ಥಾನಕ್ಕೆ ವಿಧಿಸಿದ್ದ ವಾರಾಂತ್ಯ ನಿರ್ಬಂಧ ತೆರವು; ಸೇವೆಗೆ ಕೊರೊನಾ ಟೆಸ್ಟ್‌ ಕಡ್ಡಾಯ ವಾಗಿರಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಜುಲೈ 27 ರಿಂದ ಸೇವೆ, ಅನ್ನ‌ ಪ್ರಸಾದ ಆರಂಭವಾಗಲಿದೆ.

ಉಪನ್ಯಾಸಕ ವಿಶ್ವನಾಥ ನಡುತೋಟ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್‌ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರತ್ನಾಕರ ಎಸ್‌. ವಂದಿಸಿದರು. ದೇವಳದ ಅಭಿಯಂತರ ಉದಯಕುಮಾರ್‌,ಪದ್ಮನಾಭ ಶೆಟ್ಟಿಗಾರ್‌, ಸುಧಾಕರ ಎಸ್‌.ಕೆ, ನಿರ್ಣಯಗಳನ್ನು ನಮೂದಿಸಿದರು. ಯೋಗೀಶ್‌ ಎಂ. ವಿಟ್ಲ ಸಹಕರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English