ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಹಾರಿ ನಾಪತ್ತೆ ಯಾದ ಮಹಿಳೆ

12:44 PM, Saturday, November 20th, 2021
Share
1 Star2 Stars3 Stars4 Stars5 Stars
(No Ratings Yet)
Loading...

Netravathiಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಮಹಿಳೆಯೋರ್ವಳು ನದಿಗೆ ಹಾರಿ ನಾಪತ್ತೆ ಯಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆ ಗೆ ನೇತ್ರಾವತಿ ಸೇತುವೆಯಿಂದ ಮಹಿಳೆಯೊರ್ವಳು ಹಾರಿದ್ದನ್ನು ವಾಹನ ಸವಾರರು ನೋಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೂಡಲೇ ಸ್ಥಳೀಯ ಮುಳುಗುಗಾರರು ದೋಣಿಯ ಮೂಲಕ ನೇತ್ರಾವತಿ ಸೇತುವೆಯ ಬಳಿಗೆ ಬಂದರೂ ಅದಾಗಲೇ ಮಹಿಳೆ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದಾರೆ.

ನದಿಗೆ ಹಾರಿದ ಮಹಿಳೆ ಯಾರು ಎಂಬ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ. ಘಟನೆ ನಡೆದ ಬಳಿಕ ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿತ್ತು.

ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English