ಡೊಂಗರಕೇರಿಯಲ್ಲಿರುವ ಸ್ಮಾರಕದಲ್ಲಿ ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ

10:02 PM, Sunday, November 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

Canara-Bankಮಂಗಳೂರು  :  ಕೆನರಾ ಬ್ಯಾಂಕಿನ 116ನೇ ಸಂಸ್ಥಾಪಕರ ದಿನಾಚರಣೆಯನ್ನು ನಗರದ ಡೊಂಗರಕೇರಿಯಲ್ಲಿರುವ ಸ್ಮಾರಕದಲ್ಲಿ ಆಚರಿಸಲಾಯಿತು.

ಯೆನೆಪೋಯ ವಿವಿ ಕುಲಪತಿ ಯೆನಪೋಯ ಅಬ್ದುಲ್ಲ ಕುಂಞಿ, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಯುವ ತಬಲ ವಾದಕ ಸಾಧನ್ ನಾಯಕ್ ಅವರನ್ನು ಕೂಡ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅಮ್ಮೆಂಬಳ ಸುಬ್ಬರಾವ್ ಪೈ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಹಾಗೆ ಈ ಸುದಿನದಂದು ಅವರ ಕನಸಿನಂತೆ ನಗರದ ಸರಕಾರಿ ಶಾಲೆಯ ೬ ಹೆಣ್ಣು ಮಕ್ಕಳಿಗೆ ಕೆನರಾ ವಿದ್ಯಾ ಜ್ಯೋತಿ ಶಿಷ್ಯವೇತನದ ಅಡಿಯಲ್ಲಿ ಸಹಾಯಧನ ನೀಡಲಾಯಿತು. ಬ್ಯಾಂಕಿನ ಸಿಎಸ್‌ಆರ್ ಅಡಿಯಲ್ಲಿ ಸೇವಾ ಭಾರತಿ ಟ್ರಸ್ಟ್ ಹಾಗೂ ಸಂವೇದನ ಮರೋಳಿ ಸಂಸ್ಥೆಗಳಿಗೆ ಸಹಾಯಧನ ನೀಡಲಾಯಿತು.

ಕಾರ್ಯಕ್ರಮದ ಅಧಕ್ಷತೆ ವಹಿಸಿದ್ದ ಬ್ಯಾಂಕ್‌ನ ಮಹಾಪ್ರಬಂಧಕ ಬಿ. ಯೋಗೀಶ್ ಆಚಾರ್ಯ ಮಾತನಾಡಿ, ಗ್ರಾಹಕರ ಸಹಕಾರದಿಂದ ಕೆನರಾ ಬ್ಯಾಂಕ್ ದೇಶದ ೩ನೇ ಅತಿ ದೊಡ್ಡ ಬ್ಯಾಂಕ್ ಆಗಿದೆ. ಸದಾ ದೇಶದ ಆರ್ಥಿಕ ಪ್ರಗತಿಗೆ ಪೂರಕವಾದ ಕೊಡುಗೆಯನ್ನು ನೀಡಲು ಬದ್ಧವಾಗಿದೆ ಎಂದರು.

ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರಿನ ಉಪ ಮಹಾಪ್ರಂಬಧಕ ರಾಘವ ನಾಯ್ಕ ಹಾಗೂ ಶ್ರೀಕಾಂತ್ ವಿ.ಕೆ., ಪ್ರಾದೇಶಿಕ ಕಛೇರಿಯ ಉಪ ಮಹಾಪ್ರಬಂಧಕಿ ಸುಚಿತ್ರಾ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಂಗಳೂರು ವೃತ್ತ ಕಚೇರಿಯಲ್ಲಿ ನಡೆದ ಸ್ಥಾಪಕರ ದಿನಾಚರಣೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಲಾಯಿತು.

ಈ ಸಂದಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಹಾಜಬ್ಬ ಅವರು ನಡೆಸುತ್ತಿರುವ ಹರೇಕಳ ಶಾಲೆಗೆ ರೂ. 1,50,000 ಗಳ ಸಹಾಯಧನವನ್ನು ಬ್ಯಾಂಕಿನ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಾಜಬ್ಬರವರು, ತಮ್ಮ ಕನಸಿನ ಶಾಲೆಯ ನಿರ್ಮಾಣದ ಪ್ರತಿ ಹೆಜ್ಜೆಯಲ್ಲೂ ಕೆನರಾ ಬ್ಯಾಂಕ್ ನೀಡಿದ ಸಹಕಾರವನ್ನು ನೆನೆದು ಧನ್ಯವಾದ ಅರ್ಪಿಸಿದರು ಹಾಗೂ ಬ್ಯಾಂಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಮಂಗಳೂರಿನ ಪ್ರತಿಷ್ಠಿತ ಲೆಕ್ಕ ಪರಿಶೋಧಕರಾದ ಎ. ರಾಮಚಂದ್ರ ಹೆಗ್ಡೆ, ಬ್ಯಾಂಕ್‌ನ ಗ್ರಾಹಕರಾದ ಎಂ. ಜನಾರ್ದನ್, ಸುಭಾಸ್ ಶ್ಯಾನ್‌ಭೋಗ್ ಅವರನ್ನು ಗೌರವಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English