ಬಂಟ್ವಾಳ: ಸಮಾಜದಲ್ಲಿ ದೇವಾಲಯ ಮತ್ತು ಶಾಲೆಗಳನ್ನು ನೋಡಿದಾಗ ಅಲ್ಲಿನ ಅಭಿವೃದ್ಧಿ ಗೋಚರಕ್ಕೆ ಬರುತ್ತದೆ. ಅದೇ ರೀತಿ ನಾವು ಹಣವಂತರಿಗೆ ಬದಲಾಗಿ ಗುಣವಂತಿಕೆ ಹೊಂದಿರುವ ಶಿಕ್ಷಣವಂತರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಪಂಜಿಕಲ್ಲು ಗ್ರಾಮ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ನೂತನ ಕಟ್ಟಡಕ್ಕೆ ಶಿಲಾನ್ಯಾಸ ಇದರ ಸಭಾ ಕಾರ್ಯಕ್ರಮವನ್ನು ಗಣೇಶಪುರ ಕ್ಷೇತ್ರದ ವೇದಮೂರ್ತಿ ಸುನಿಲ್ ಭಟ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮುಗ್ಧ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ ಪುನರ್ ನಿರ್ಮಾಣಗೊಂಡಾಗ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಮಂಗಳೂರು ಎಸಿಪಿ ನಟರಾಜ್ ಎನ್., ಮಂಗಳೂರು ಎನ್ ಎಂಪಿಟಿ ಮಾಜಿ ಟ್ರಸ್ಟಿ ಸುಧಾಕರ ಕಾಮತ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಕಾಟಿಪಳ್ಳ ಜಾನಕಿ ಚಾರಿಟೇಬಲ್ ಸೇವಾ ಟ್ರಸ್ಟಿನ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ನಿವೃತ ಮುಖ್ಯಶಿಕ್ಷಕ ಸೋಮಪ್ಪ ಮಡಿವಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ವೇದಾವತಿ, ಶಿಕ್ಷಣ ಸಮನ್ವಾಧಿಕಾರಿ ರಾಘವೇಂದ್ರ ಬಲ್ಲಾಳ್, ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಕೆ.ಭಟ್, ಶಾಲಾ ಸಂಚಾಲಕ ಶ್ರೀಪತಿ ಭಟ್ ಪುಂಚೋಡಿ ಶುಭ ಹಾರೈಸಿದರು.
ಶಾಸಕ ಭೇಟಿ:
ಇದೇ ವೇಳೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿ, ಶಾಲೆಯಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ ಹೆಚ್ಚಳ ಮತ್ತು ಶಾಲೆಯ ಅಭಿವೃದ್ಧಿಗೆ ಸ್ಥಳೀಯರು ಸಹಕರಿಸಬೇಕು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಸರಕಾರದಿಂದ ಸಿಗುವ ವಿವಿಧ ಸೌಲಭ್ಯ ದೊರಕಿಸಿ ಕೊಡುವುದಾಗಿ ಅವರು ಭರವಸೆ ನೀಡಿದರು.
ಪಂಜಿಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಾಲೇಶ್ವರ ಗರಡಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಆಚಾರ್ಯ, ಸದಸ್ಯರಾದ ಲಕ್ಮೀನಾರಾಯಣ ಗೌಡ, ಹರೀಶ ಪೂಜಾರಿ, ವಿಕೇಶ್ ಮಡಿವಾಳ, ಪ್ರಗತಿಪರ ಕೃಷಿಕ ಸುಬ್ಬಣ್ಣ ಭಟ್ ಕಲಾಕುಂಜ, ಪ್ರಮುಖರಾದ ಕೃಷ್ಣರಾಜ ಜೈನ್, ಲತಾ ಧಮೇಂದ್ರ ಗಣೇಶಪುರ, ಕೆ.ಎನ್.ಶೇಖರ್, ಸದಾನಂದ ಶೆಟ್ಟಿ ದಬರ್ೆ, ದಿನೇಶ ಶೆಟ್ಟಿ ಬುಡೋಳಿ, ರವಿ ಆರ್.ಪೂಜಾರಿ, ರಾಜೇಶ ಗೌಡ ತಿಮರೋಡಿ, ಕೇಶವ ಪೂಜಾರಿ ಅಸಲ್ದೋಡಿ ಮತ್ತಿತರರು ಇದ್ದರು.
ಶಿಕ್ಷಕಿ ಸುಕನ್ಯಾ ರತ್ನ ಪ್ರಾಸ್ತಾವಿಕ ಮಾತನಾಡಿದರು. ದೇವಪ್ಪ ಕುಲಾಲ್ ಸ್ವಾಗತಿಸಿ, ಜಯ ಮಡಿವಾಳ ವಂದಿಸಿದರು. ಪ್ರಾಧ್ಯಾಪಕ ಹೇಮಣ್ಣ ನಿಂಬಣ್ಣನವರ್ ಮತ್ತು ಮುಖ್ಯಶಿಕ್ಷಕ ದೊಡ್ಡಪ್ಪ ಎಚ್. ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English